Advertisement

23 ಐ ಪೋನ್‌ ಗಳ ಕಳ್ಳ ಸಾಗಣಿಕೆಗೆ ಯತ್ನ; ಆರೋಪಿ ಬಂಧನ

08:17 PM Oct 24, 2022 | Team Udayavani |

ಬೆಂಗಳೂರು : ದೇವನಹಳ್ಳಿ ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ಯಾಂಕಾಕ್‌ನಿಂದ ಆಗಮಿಸಿದ್ದ ಪ್ರಯಾಣಿಕನೊಬ್ಬ 23 ಐ ಪೋನ್‌ ಗಳನ್ನು ಕಳ್ಳ ಸಾಗಣೆ ಮಾಡುವಾಗ ಸಿಕ್ಕಿ ಬಿದಿದ್ದಾನೆ.

Advertisement

ಅನುಮಾನಾಸ್ಪದವಾಗಿ ವರ್ತನೆ ಮಾಡುತ್ತಿದ್ದ ವ್ಯಕ್ತಿಯನ್ನು ನೋಡಿ ಆತನ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ, ಈಗಾಗಲೇ ಕಳ್ಳಸಾಗಣೆ ಮಾಡಿದ್ದ ಪ್ರಕರಣಗಳಲ್ಲಿ ಆರೋಪಿತನು ಭಾಗಿಯಾಗಿರುವ ಕುರಿತು ಅಧಿಕಾರಿಗಳ ಗಮನಕ್ಕೆ ಬಂದಾಗ ಆತನನ್ನು ತೀವ್ರವಾಗಿ ತಪಾಸಣೆ ಮಾಡಲಾಗಿದೆ ಎನ್ನಲಾಗಿದೆ.

ಆತ ತೆಗೆದುಕೊಂಡು ಬಂದಿದ್ದ ಹ್ಯಾಂಡ್‌ಬ್ಯಾಗ್‌ನಲ್ಲಿ ಒಟ್ಟು 23 ಐ ಪೋನ್‌ ಪ್ರೋ ಮ್ಯಾಕ್ಸ್‌ ಮೊಬೈಲ್‌ಗಳು ಕಂಡು ಬಂದಿದೆ. ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು ಅದರ ಬೆಲೆ 34.47 ಲಕ್ಷ ಎಂದು ಅಂದಾಜು ಮಾಡಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಪ್ರಕರಣ ದಾಖಲು ಮಾಡಿ ತನಿಖೆ ಪ್ರಗತಿಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next