ಹೊಸದಿಲ್ಲಿ: ದೇಶದ ವಿವಿಧ ರಾಜ್ಯಗಳಲ್ಲಿ ಇರುವ ಕೃಷಿ ಮತ್ತು ಗ್ರಾಮೀಣ ಸಹಕಾರ ಸಂಘಗಳ ಕಂಪ್ಯೂಟರೀಕರಣಕ್ಕೆ ಮುಂದಾಗಿರುವ ಕೇಂದ್ರ ಸರಕಾರ ಇದಕ್ಕಾಗಿ 225.09 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ನಿರ್ಧರಿಸಿದೆ.
ಇದರಿಂದ 28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇರುವ 1,851 ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ಎಆರ್‌ಡಿಬಿ)ಗಳಿಗೆ ಭಾರೀ ಅನುಕೂಲವಾಗಲಿದೆ.
ಈ ಹಿಂದೆ ಎಲ್ಲ ಪ್ರಾಥಮಿಕ ಕೃಷಿ ಸಾಲ ಸೊಸೈಟಿ (ಪಿಎಸಿಎಸ್)ಗಳನ್ನು ಆಧುನಿಕ ಮತ್ತು ಕಂಪ್ಯೂಟರೀಕೃತಗೊಳಿಸಿದ ಮಾದರಿ ಯಲ್ಲಿಯೇ ಇದನ್ನು ಕೂಡ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕೇಂದ್ರೀಕೃತ ಯೋಜನೆ ಉಸ್ತುವಾರಿ ಘಟಕ (ಪಿಎಂಯು) ಸ್ಥಾಪಿಸಲಾಗುತ್ತದೆ. ಅದರ ಮೂಲಕ ದೇಶಾದ್ಯಂತ ಇರುವ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳಲ್ಲಿ ಏಕರೂಪಿ ಸಾಫ್ಟ್ವೇರ್ ಅಳವಡಿಕೆ ಯಾಗಲಿದೆ. ಇದರಿಂದ ಅವುಗಳ ವಹಿ ವಾಟು ಪಾರದರ್ಶಕವಾಗಲಿದೆ ಎಂದು ಕೇಂದ್ರ ಸರಕಾರ ರವಿವಾರ ಪ್ರಕಟಿಸಿದೆ.
ಕೇಂದ್ರ ಸರಕಾರದ ವ್ಯಾಪ್ತಿಯ ಸಹಕಾರ ಇಲಾಖೆಯನ್ನು ಕಂಪ್ಯೂಟರೀಕೃತಗೊಳಿಸಿ ದಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಗಳಲ್ಲಿರುವ ಸಹಕಾರಿ ಸಂಘಗಳ ರಿಜಿ ಸ್ಟ್ರಾರ್ ಕಚೇರಿಗಳನ್ನೂ ಮಾಡಲಾಗುತ್ತದೆ.
ಅನುಕೂಲವೇನು?
ಕಂಪ್ಯೂಟರೀಕರಣದಿಂದ ಸಹಕಾರಿ ಸಂಘಗಳಿಗೆ ಕ್ಷಿಪ್ರಗತಿಯಲ್ಲಿ ಸೇವೆ ನೀಡಲು, ವಹಿವಾಟು ನಡೆಸಲು ಸಾಧ್ಯವಾಗಲಿದೆ.