ನವದೆಹಲಿ:ಭಾರತದಲ್ಲಿ ಕಳೆದ 24ಗಂಟೆಯಲ್ಲಿ 22,065 ಕೋವಿಡ್ 19 ಸೋಂಕು ಪ್ರಕರಣ ಪತ್ತೆಯಾಗಿದ್ದು, ಇದು ಕಳೆದ ಜುಲೈ 7ರ ನಂತರ ದಾಖಲಾದ ಅತೀ ಕಡಿಮೆ ಸಂಖ್ಯೆಯ ಪ್ರಕರಣವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಈವರೆಗೆ ಭಾರತದಲ್ಲಿ ಒಟ್ಟು 99.06 ಲಕ್ಷ ಕೋವಿಡ್ 19 ಸೋಂಕು ಪ್ರಕರಣ ದಾಖಲಾಗಿತ್ತು. ಕಳೆದ 24ಗಂಟೆಯಲ್ಲಿ 354 ಸಾವು ಸಂಭವಿಸಿದೆ, ಈವರೆಗೆ ಕೋವಿಡ್ ನಿಂದಾಗಿ ಒಟ್ಟು 1,43,709 ಸಾವು ಸಂಭವಿಸಿದೆ.
ಸೋಂಕು ಆರಂಭವಾದ ಸಮಯದಿಂದ ಆರಂಭಿಸಿ ಈವರೆಗೆ ಭಾರತದಲ್ಲಿ 94.22 ಲಕ್ಷ ಜನರು ಕೋವಿಡ್ 19 ಸೋಂಕಿನಿಂದ ಗುಣಮುಖರಾಗಿದ್ದಾರೆ. ಭಾರತದಲ್ಲಿ ಜನವರಿ 30ರಂದು ಕೋವಿಡ್ ನ ಪ್ರಥಮ ಪ್ರಕರಣ ಪತ್ತೆಯಾಗಿತ್ತು. ಅಮೆರಿಕದಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗಿದ್ದು, ಎರಡನೇ ಸ್ಥಾನದಲ್ಲಿ ಭಾರತ ಇದೆ.
ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶದ ಪ್ರಕಾರ 3,39,820 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲಿ ಹೆಚ್ಚಿ ಪ್ರಕರಣ ದಾಖಲಾಗಿದ್ದು, ಕಳೆದ 24 ಗಂಟೆಯಲ್ಲಿ 2,949 ಕೋವಿಡ್ ಪ್ರಕರಣ ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಒಟ್ಟು 18.83 ಲಕ್ಷ ಕೋವಿಡ್ ಪ್ರಕರಣ ದಾಖಲಾಗಿದೆ. ಈವರೆಗೆ ಕೋವಿಡ್ ಸೋಂಕಿನಿಂದಾಗಿ 48,269 ಮಂದಿ ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದ ನಂತರ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗಿದೆ. ರಾಜಧಾನಿ ದೆಹಲಿಯಲ್ಲಿ ಒಟ್ಟು ಕೋವಿಡ್ 19 ಸೋಂಕಿಗೆ 10.074 ಮಂದಿ ಸಾವನ್ನಪ್ಪಿದ್ದಾರೆ.