ಪೆನ್ ಸ್ಟೇಟ್ ಕಾಲೇಜ್ ಆಫ್ ಹೆಲ್ತ್ ಆ್ಯಂಡ್ ಹ್ಯೂಮನ್ ಡೆವಲಪ್‌ಮೆಂಟ್, ಪರ್ಡ್ಯೂ ಯುನಿವರ್ಸಿಟಿ ಕಾಲೇಜ್ ಆಫ್ ಸೈನ್ಸಸ್, ಪರ್ಡ್ಯೂ ಇನ್‌ಸ್ಟಿಟ್ಯೂಟ್ ಆಫ್ ಸಸ್ಟೈನೆಬಲ್ ಫ್ಯೂಚರ್ ನಡೆಸಿದ ಅಧ್ಯಯನವು ಈ ಆಘಾತಕಾರಿ ಮಾಹಿತಿ ಹೊರಹಾಕಿದೆ. ತಾಪಮಾನ ಏರಿಕೆಯ ದುಷ್ಪರಿಣಾಮಗಳನ್ನು ತಡೆಯಲು ಮಾನವನ ದೇಹ ಹೊಂದಿರುವ ಸಾಮರ್ಥ್ಯ ಸೀಮಿತ ಪ್ರಮಾಣದ್ದಷ್ಟೇ ಎಂದೂ ವರದಿ ಹೇಳಿದೆ.
Advertisement
ಆ ಮಿತಿಗಿಂತ ಹೆಚ್ಚಾದರೆ ಜೀವ ಅಥವಾ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಅಪಾಯವಿದೆ. ಮೂರು ಸಂಸ್ಥೆಗಳ ಅಧ್ಯಯನದ ಪ್ರಕಾರ ಜಗತ್ತಿನ ತಾಪಮಾನ ಕೈಗಾರಿಕೀರಣದ ದಿನಗಳಿಂತ ಮೊದಲು ಇದ್ದ ಮಟ್ಟಕ್ಕೆ ಇದ್ದಂತೆ 2 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾದರೆ ಚೀನಾದ ಪೂರ್ವ ಭಾಗದಲ್ಲಿರುವ 100 ಕೋಟಿ, ಸಬ್-ಸಹರನ್ ಆಫ್ರಿಕಾದಲ್ಲಿರುವ 80 ಕೋಟಿ ಮಂದಿಗೆ ಅಪಾಯ ಉಂಟಾಗಲಿದೆ.