Advertisement

ಕಮಲ್‌ ಸರ್ಕಾರ ಉರುಳಿಸಿದ ಶಾಸಕರು ಬಿಜೆಪಿಗೆ ಸೇರ್ಪಡೆ

10:02 AM Mar 22, 2020 | Sriram |

ನವದೆಹಲಿ: ಮಧ್ಯಪ್ರದೇಶದಲ್ಲಿ ಕಮಲ್‌ನಾಥ್‌ ಸರ್ಕಾರದ ಪತನಕ್ಕೆ ಕಾರಣವಾದ 22 ಮಾಜಿ ಶಾಸಕರು, ಶನಿವಾರ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.

Advertisement

ಇತ್ತೀಚೆಗೆ, ಕಾಂಗ್ರೆಸ್‌ ನಾಯಕರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್‌ ತೊರೆದ ಬೆನ್ನಲ್ಲೇ ಅವರ ವಿಧೇಯರಾಗಿದ್ದ 22 ಕಾಂಗ್ರೆಸ್‌ ಶಾಸಕರು ರಾಜೀನಾಮೆ ಸಲ್ಲಿಸಿದ್ದರು. ಇದರಿಂದ ಅಲ್ಪಮತಕ್ಕೆ ಕುಸಿದಿದ್ದ ಕಮಲ್‌ನಾಥ್‌ ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದರ ಮರುದಿನವೇ ಶಾಸಕತ್ವ ತೊರೆದಿದ್ದವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಇದನ್ನು ಟ್ವೀಟರ್‌ನಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರೇ ಖುದ್ದಾಗಿ ಪ್ರಕಟಿಸಿದ್ದು, “ಮಧ್ಯಪ್ರದೇಶದ ಅಭಿವೃದ್ದಿಗೆ ಪಣ ತೊಟ್ಟಿರುವ ನನ್ನ ಹಿಂದಿನ ಪಕ್ಷದಲ್ಲಿದ್ದ 22 ಶಾಸಕರು, ಇಂದು ಬಿಜೆಪಿ ಸೇರಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಮ್ಮುಖದಲ್ಲಿ ಅವರೆಲ್ಲರೂ ಬಿಜೆಪಿ ಸೇರಿದ್ದಾರೆ’ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next