ಹೊಸದಿಲ್ಲಿ: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷಕ್ಕೆ (LJP) ಭಾರಿ ಹಿನ್ನಡೆಯಾಗಿದೆ. ಪಕ್ಷದ 22 ಮಂದಿ ನಾಯಕರು ರಾಜೀನಾಮೆ ನೀಡಿದ್ದು, ಎನ್ ಡಿಎ ಜೊತೆ ಮೈತ್ರಿ ಮಾಡಿಕೊಂಡ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.
ಚಿರಾಗ್ ಪಾಸ್ವಾನ್ ಅವರು ಲೋಕಸಭಾ ಚುನಾವಣೆ ಟಿಕೆಟ್ ಗಳನ್ನು ಮಾರಾಟ ಮಾಡಿದ್ದಾರೆ ನಾಯಕರು ದೂರಿದ್ದಾರೆ. ಮುಂದಿನ ಚುನಾವಣೆಯಲ್ಲಿ ವಿಪಕ್ಷಗಳ ಒಕ್ಕೂಟ ಇಂಡಿಯಾ ಬ್ಲಾಕ್ ಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.
ರಾಜೀನಾಮೆ ನೀಡಿದವರಲ್ಲಿ ಮಾಜಿ ಸಚಿವ ರೇಣು ಕುಶ್ವಾಹ, ಮಾಜಿ ಶಾಸಕ ಮತ್ತು ಎಲ್‌ಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರ ಸಿಂಗ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಡಾಂಗಿ ಮತ್ತು ಪಕ್ಷದ ಮುಖಂಡರಾದ ಅಜಯ್ ಕುಶ್ವಾಹ ಮತ್ತು ಸಂಜಯ್ ಸಿಂಗ್ ಸೇರಿದ್ದಾರೆ.
ಎಎನ್‌ಐ ಪ್ರಕಾರ, “ಹೊರಗಿನವರಿಗೆ” ಟಿಕೆಟ್ ನೀಡಿದ್ದಕ್ಕಾಗಿ ಚಿರಾಗ್ ಪಾಸ್ವಾನ್ ವಿರುದ್ಧ ರೇಣು ಕುಶ್ವಾಹಾ ವಾಗ್ದಾಳಿ ನಡೆಸಿದರು.
”ಹೊರಗಿನವರಿಗೆ ಟಿಕೆಟ್ ಕೊಡುವ ಬದಲು ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕು, ಹೊರಗಿನವರಿಗೆ ಟಿಕೆಟ್ ಕೊಡುವುದು ಅಂದರೆ ಸಮರ್ಥರು, ದುಡಿಯುವವರಿಗೆ ಸಿಗುತ್ತಿಲ್ಲ, ನಾವು ದುಡಿದು ನಿಮ್ಮನ್ನು ನಾಯಕ ಮಾಡುತ್ತೇವೆ ಎನ್ನುವ ಕಾರ್ಮಿಕ ವರ್ಗಕ್ಕೆ ಸೇರಿದ್ದೇವೆಯೇ?” ಎಂದು ಕುಶ್ವಾಹಾ ಹೇಳಿದರು.