Advertisement

ಸಮನ್ವಯ ಬೆಂಗಳೂರು ತಂಡದ  ನಾಟಕಕ್ಕೆ ಪ್ರಶಸ್ತಿ

04:59 PM Sep 16, 2018 | Team Udayavani |

ಮುಂಬಯಿ: ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿ ಆಯೋಜಿಸಿರುವ 21ನೇ ಅಖೀಲ ಭಾರತ ಕುವೆಂಪು ಸ್ಮಾರಕ ಕನ್ನಡ ಏಕಾಂಕ ನಾಟಕ ಸ್ಪರ್ಧೆಯು ಮೈಸೂರು ಅಸೋಸಿಯೇಶನ್‌ ಸಭಾಗೃಹದಲ್ಲಿ  ಎರಡು ದಿನಗಳ ಕಾಲ ಯಶಸ್ವಿಯಾಗಿ ನಡೆಯಿತು.

Advertisement

ಪ್ರಸ್ತುತ ವರ್ಷ  ಒಟ್ಟು 12 ತಂಡಗಳು ಭಾಗವಹಿಸಿದ್ದವು ಅದರಲ್ಲಿ ಮುಂಬಯಿಯ ಎರಡು ಹಾಗೂ ಕರ್ನಾಟಕದಿಂದ ಹತ್ತು ತಂಡಗಳಿದ್ದವು. 

ತೀರ್ಪುಗಾರರಾಗಿ ಸಾಸ್ವೆಗಳ್ಳಿ ಸತೀಶ್‌,  ವಸಂತ ಬನ್ನಾಡಿ, ವಿದ್ದು ಉಚ್ಚಿಲ್‌ ಸಹಕರಿಸಿದರು. ನಾಟಕ ಸ್ಪರ್ಧೆ ಮುಗಿದ ನಂತರ  ಮನೋರಂಜನ ಅಂಗವಾಗಿ ಗಾಯಕ ಶ್ರೀ ರಾಮಚಂದ್ರ ಹಡಪದ ಅವರಿಂದ ಭಾವ – ರಂಗ ಗಾಯನದ ಕಾರ್ಯಕ್ರಮ ಜರಗಿತು.

ಅತ್ಯುತ್ತಮ ನಾಟಕ ಪ್ರಥಮ ದಿ. ಕೆ. ಕೆ. ಸುವರ್ಣ ಸ್ಮಾರಕ 15 ಸಾವಿರ ರೂ. ನಗದು ಬಹುಮಾನವನ್ನು ಸಮನ್ವಯ, ಬೆಂಗಳೂರು ತಂಡದ ಬೂಟು ಬಂದೂಕುಗಳ ಮಧ್ಯೆ ನಾಟಕ ಪಡೆಯಿತು. ಅತ್ಯುತ್ತಮ ನಾಟಕ ದ್ವಿತೀಯ ದಿ. ಕೆ. ಜೆ. ರಾವ್‌ ಸ್ಮಾರಕ 10 ಸಾವಿರ ರೂ. ನಗದು ಬಹುಮಾನವನ್ನು ನಮ ತುಳುವೆರ್‌ ಕಲಾ ಸಂಘಟನೆ ಮುದ್ರಾಡಿ ತಂಡದ ನಾಟಕ ದಶಾನನ ಸ್ವಪ್ನ ಸಿದ್ಧಿ ನಾಟಕ ಗಳಿಸಿತು.  ಅತ್ಯುತ್ತಮ ನಾಟಕ ತೃತೀಯ ಸದಾನಂದ ಸುವರ್ಣ ದತ್ತಿನಿಧಿ 5 ಸಾವಿರ ರೂ. ಗಳ  ಪುರಸ್ಕಾರವನ್ನು ಭೂಮಿಕಾ ಹಾರಾಡಿ ತಂಡದ ವೃತ್ತದ ವೃತ್ತಾಂತ ನಾಟಕ ಗಳಿಸಿತು.

ಅತ್ಯುತ್ತಮ ರಂಗ ವಿನ್ಯಾಸ ಸಮನ್ವಯ ಬೆಂಗಳೂರು ತಂಡದ ಬೂಟು ಬಂದೂಕುಗಳ ಮಧ್ಯೆ ನಾಟಕ ಪ್ರಥಮ,  ಸುಮನಸಾ ಕೊಡವೂರು ತಂಡದ ರಥಯಾತ್ರೆ ನಾಟಕ ದ್ವಿತೀಯ, ರಂಗ ಮಿಲನ  ಮುಂಬಯಿ ಇದರ ಸಂಸಾರ ನಾಟಕ, ಅತ್ಯುತ್ತಮ ಸಂಗೀತ ಸುಮನಸಾ ಕೊಡವೂರು ತಂಡದ  ರಥಯಾತ್ರೆ ನಾಟಕ ಪ್ರಥಮ, ನಮ ತುಳುವೆರ್‌ ಕಲಾ ಸಂಘಟನೆ, ಮುದ್ರಾಡಿ ಇದರ ದಶಾನನ ಸ್ವಪ್ನಸಿದ್ಧಿ ದ್ವಿತೀಯ, ಸಮನ್ವಯ ಬೆಂಗಳೂರು ತಂಡದ ಬೂಟು ಬಂದೂಕುಗಳ ಮಧ್ಯೆ ನಾಟಕ ತೃತೀಯ ಬಹುಮಾನ ಪಡೆಯಿತು.

Advertisement

ಅತ್ಯುತ್ತಮ ಬೆಳಕು ಸಂಯೋಜನೆಯಲ್ಲಿ ಸಮನ್ವಯ  ಬೆಂಗಳೂರು ತಂಡದ ಬೂಟು ಬಂದೂಕುಗಳ ಮಧ್ಯೆ ನಾಟಕಕ್ಕೆ ಪ್ರಥಮ,  ಸುಮನಸಾ ಕೊಡವೂರು ಇವರ ರಥಯಾತ್ರೆ ದ್ವಿತೀಯ, ನಮ ತುಳುವೆರ್‌ ಕಲಾಸಂಘಟನೆ ಮುದ್ರಾಡಿ  ದಶಾನನ ಸ್ವಪ್ನಸಿದ್ಧಿ ತೃತೀಯ, ಅತ್ಯುತ್ತಮ ವೇಷ ಭೂಷಣ ಸಮನ್ವಯ  ಬೆಂಗಳೂರು ತಂಡದ ಬೂಟು ಬಂದೂಕುಗಳ ಮಧ್ಯೆ ಪ್ರಥಮ, ನಮ ತುಳುವೆರ್‌ ಕಲಾ ಸಂಘಟನೆ ಮುದ್ರಾಡಿ ಇವರ ದಶಾನನ ಸ್ವಪ್ನಸಿದ್ದಿ ತೃತೀಯ ಬಹುಮಾನ ಪಡೆಯಿತು.

ಅತ್ಯುತ್ತಮ ಪ್ರಸಾಧನ ಜಿಪಿಐಈಆರ್‌  ಮೈಸೂರು ಇವರ ಅಶ್ವತ್ಥಾಮ ಪ್ರಥಮ, ಬೆಂಗಳೂರು ಏಶಿಯನ್‌ ಥೇಟರ್‌ ಇವರ ಬೂಟುಗಾಲಿನ ಸದ್ದು ದ್ವಿತೀಯ ಹಾಗೂ ಭೂಮಿಕಾ ಹಾರಾಡಿ ಇವರ ವೃತ್ತದ ವೃತ್ತಾಂತ ಮತ್ತು ನಮ ತುಳುವೆರ್‌ ಕಲಾ ಸಂಘಟನೆ ಮುದ್ರಾಡಿ ಇವರ ದಶಾನನ ಸ್ವಪ್ನಸಿದ್ಧಿ ನಾಟಕ ತೃತೀಯ ಬಹುಮಾನ ಗಳಿಸಿತು.

ಸುರೇಂದ್ರ ಕುಮಾರ್‌ ಮಾರ್ನಾಡ್‌ ಪ್ರಾಯೋಜಿತ ವಿ. ಗಜಾನನ ಯಾಜಿ ಸ್ಮಾರಕ ನಗದು ಬಹುಮಾನವನ್ನು ಅತ್ಯುತ್ತಮ ಅತ್ಯುತ್ತಮ ಬಾಲ ನಟ ಸುಮನಸಾ ಕೊಡವೂರು ತಂಡದ ರಥಯಾತ್ರೆ ನಾಟಕದ  ಪುರೋಹಿತನ ಮಗ – ಮಾಸ್ಟರ್‌  ಮುರುಗೇಶ್‌ ಪ್ರಥಮ, ನಮ ತುಳುವೆರ್‌ ಕಲಾ ಸಂಘಟನೆ ಮುದ್ರಾಡಿ ಇವರ ದಶಾನನ ಸ್ವಪ್ನ ಸಿದ್ಧಿ ನಾಟಕತದ ಬಾಲ ರಾಮೂ – ತೇಜಸ್ವಿ ದ್ವಿತೀಯ, ವನಸುಮ ಕಟಪಾಡಿ ಇವರ  ಪೂರ್ವಿ ಕಲ್ಯಾಣಿ ನಾಟಕದ ಬಾಲಕ – ದೃಶ್ಯ ಕೊಡಗು ತೃತೀಯ ಬಹುಮಾನ ಪಡೆದರು.

ಮುಂಬಯಿಗೆ ಸೀಮಿತವಾಗಿರುವ ಭಾರತಿ ಕೊಡ್ಲಿàಕರ್‌ ಸ್ಮಾರಕ ಅತ್ಯುತ್ತಮ ನಟಿ ಪ್ರಶಸ್ತಿಯನ್ನು   ರಂಗ ಮಿಲನ ತಂಡದ ಶುಭಾಂಗಿ ಶೆಟ್ಟಿ ಅವರು ಪಡೆದರು. ಅತ್ಯುತ್ತಮ ಪೋಷಕ ನಟಿಯಾಗಿ ಸಮನ್ವಯ  ಬೆಂಗಳೂರು ತಂಡದ ಬೂಟು ಬಂದೂಕುಗಳ ಮಧ್ಯೆ ನಾಟಕದ  ಲಕ್ಷ್ಮಿ ಪಾತ್ರಧಾರಿ – ಮಹಾಸತಿ ಗೌಡ, ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಬೆಂಗಳೂರು ಏಶಿಯನ್‌ ಥೇಟರ್‌ ತಂಡದ ಬೂಟುಗಾಲಿನ ಸದ್ದು  ನಾಟಕದ ನಲ್ಲ ಚೋಮ ಪಾತ್ರಧಾರಿ ಪ್ರದೀಪ್‌ ಅವರು ಪಡೆದರು.

ಅತ್ಯುತ್ತಮ ನಟಿ ಪ್ರಥಮ ರೂ. 1500 ನಗದು ಕಮಲಾಕ್ಷ ಸರಾಫ್‌ ಪ್ರಾಯೋಜಿತ ಬಹುಮಾನವನ್ನು  ಸಮನ್ವಯ ಬೆಂಗಳೂರು ತಂಡದ  ಬೂಟು ಬಂದೂಕುಗಳ ಮಧ್ಯೆ ನಾಟಕದ  ಶಿವವ್ವ ಪಾತ್ರಧಾರಿ ಮೀನಾ ಶಿವಕುಮರ್‌, ಅತ್ಯುತ್ತಮ ನಟಿ ದ್ವಿತೀಯ ಬಹುಮಾನವನ್ನು ಬೆಂಗಳೂರು ಏಶಿಯನ್‌ ಥೇಟರ್‌ ತಂಡದ ಬೂಟುಗಾಲಿನ ಸದ್ದು ನಾಟಕದ ಮಂಗಮ್ಮ ಪಾತ್ರಧಾರಿ ಸಿತಾರಾ, ಅತ್ಯುತ್ತಮ ನಟಿ ತೃತೀಯ ಬಹುಮಾನವನ್ನು ಜಿ.ಪಿ.ಐ.ಈ. ಆರ್‌. ಮೈಸೂರು ತಂಡದ ಅಶ್ವತ್ಥಾಮ ನಾಟಕದ ಪಾತ್ರಧಾರಿ ದ್ರೌಪದಿ ಪಾತ್ರಧಾರಿ ಪರಿಣಿತಾ ಅವರು ಗಳಿಸಿದರು.
ಅತ್ಯುತ್ತಮ ನಟ ಪ್ರಥಮ  ರೂ. 1500 ನಗದು ಕಮಲಾಕ್ಷ ಸರಾಫ್‌ ಪ್ರಾಯೋಜಿತ ಬಹುಮಾನವನ್ನು ನಮ ತುಳುವೆರ್‌ ಕಲಾಸಂಘಟನೆ ಮುದ್ರಾಡಿ ತಂಡದ ದಶಾನನ ಸ್ವಪ್ನಸಿದ್ಧಿ ನಾಟಕದ ರಾವಣ ಪಾತ್ರಧಾರಿ ಸುಕುಮಾರ್‌ ಮೋಹನ್‌, ದ್ವಿತೀಯ ಬಹುಮಾನವನ್ನು  ಸಮನ್ವಯ , ಬೆಂಗಳೂರು ತಂಡದ ಬೂಟುಬಂದೂಕುಗಳ ಮಧ್ಯೆ ನಾಟಕದ ಶಿವನಾಗಪ್ಪ ಪಾತ್ರಧಾರಿ ಸೋಮಶೇಖರ್‌, ಅತ್ಯುತ್ತಮ ನಟ ತೃತೀಯ ಬಹುಮಾನವನ್ನು ಭೂಮಿಕಾ ಹಾರಾಡಿ ತಂಡದ ವೃತ್ತದ ವೃತ್ತಾಂತ ನಾಟಕದ ನ್ಯಾಯಾ ಧೀಶ ಪಾತ್ರಧಾರಿ ರವಿ ಪೇತ್ರಿ  ಪಡೆದರು.

ಅತ್ಯುತ್ತಮ ನಿರ್ದೇಶನ ಪ್ರಥಮ ಪ್ರಶಸ್ತಿಯನ್ನು  ದಿ| ಆರ್‌ಡಿ. ಕಾಮತ್‌ ಸ್ಮಾರಕ ನಗದು ಪ್ರಶಸ್ತಿ/ಫಲಕವನ್ನು  ಸಮನ್ವಯ ಬೆಂಗಳೂರು ತಂಡದ ಬೂಟು ಬಂದೂಕುಗಳ ಮಧ್ಯೆ ನಾಟಕದ ನಿರ್ದೇಶಕ  ಮಾಲತೇಶ್‌ ಬಡಿಗೇರ್‌, ಅತ್ಯುತ್ತಮ ನಿರ್ದೇಶನ ದ್ವಿತೀಯ ಪ್ರಶಸ್ತಿಯನ್ನು ನಮ ತುಳುವೆರ್‌ ಕಲಾ ಸಂಘಟನೆ ಮುದ್ರಾಡಿ ತಂಡದ ದಶಾನನ ಸ್ವಪ್ನ ಸಿದ್ಧಿ ನಾಟಕದ ನಿರ್ದೇಶಕ ಮಂಜುನಾಥ್‌ ಬಡಿಗೇರ್‌, ತೃತೀಯ ಪ್ರಶಸ್ತಿಯನ್ನು ಭೂಮಿಕಾ ಹಾರಾಡಿ ತಂಡದ ವೃತ್ತದ ವೃತ್ತಾಂತ ನಾಟಕದ ನಿರ್ದೇಶಕ  ಬಿ. ಎಸ್‌. ರಾಮ್‌ ಶೆಟ್ಟಿ, ಹಾರಾಡಿ ಅವರು ಪಡೆದರು.
 

Advertisement

Udayavani is now on Telegram. Click here to join our channel and stay updated with the latest news.

Next