Advertisement

21.28 ಕೋಟಿ ರೂ. ಕಾಮಗಾರಿಗೆ ಶಿಲಾನ್ಯಾಸ

08:54 AM Oct 15, 2017 | Team Udayavani |

ಹೆಬ್ರಿ: ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿರಂತರ ಅಭಿವೃದ್ಧಿ ಕಾರ್ಯದೊಂದಿಗೆ ಲೋಕೋಪಯೋಗಿ ಇಲಾಖೆಯ ಮೂಲಕ ಕುಕ್ಕೆಹಳ್ಳಿ, ಬೈರಂಪಳ್ಳಿ, ಆತ್ರಾಡಿ, ಪೆರ್ಡೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದೇ ದಿನ 21 ಕೋಟಿ 28 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ ಎಂದು ಶಾಸಕ ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಹೇಳಿದರು.

Advertisement

ಅವರು ಶನಿವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರ ವೇರಿಸಿ ಮಾತನಾಡಿದರು. ಈಗಾಗಲೇ ಕ್ಷೇತ್ರದಲ್ಲಿ 18 ಸೇತುವೆ ನಿರ್ಮಾಣ, 20 ಕೆರೆಗಳ ನಿರ್ಮಾಣ ಸೇರಿದಂತೆ ನಿರಂತರ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿದ್ದು ರೈತರ ಹಿತದೃಷ್ಟಿಯಿಂದ ಕೃಷಿ ಯಂತ್ರೋಪಕರಣಗಳನ್ನು ಸರಕಾರಿ ಕೇಂದ್ರದಿಂದ ಬಾಡಿಗೆ ಆಧಾರದಲ್ಲಿ ನೀಡಿ ಕೃಷಿಗೆ ವಿಶೇಷ ಉತ್ತೇಜನ ನೀಡಲಾಗುತ್ತಿದೆ ಎಂದರು. ಕುಕ್ಕೆಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಲ್ಯಾಣಪುರ-ಕುಕ್ಕೆಹಳ್ಳಿ-ಪೆರ್ಡೂರು ರಸ್ತೆ,  ಕುಕ್ಕೆಹಳ್ಳಿ ಗ್ರಾ.ಪಂ. ಪುಣೂcರು ಹೊಳೆಬದಿಯ ರಸ್ತೆ ಅಭಿವೃದ್ಧಿ, ಕುಕ್ಕೆಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಪುಣೂcರು ಕಂಬಳ ಮಜಲು ರಸ್ತೆ ಅಭಿವೃದ್ಧಿ ಸೇರಿದಂತೆ 5.7 ಕೋಟಿ ರೂ. ಕಾಮಗಾರಿಗೆ ಗುದ್ದಲಿಪೂಜೆ, ಪೆರ್ಡೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಖಜಾನೆ-ಕಡಂಬಳ್ಳಿ ರಸ್ತೆ ಅಭಿವೃದ್ಧಿ, ಪೆರ್ಡೂರು ಗ್ರಾಮದ ಬಾಜೆಲ್ಕೆ, ದರ್ಖಾಸು ಎಡ್ಮಡ್ಕ ಎಸ್‌ಟಿ ಕಾಲನಿ ರಸ್ತೆ ಅಭಿವೃದ್ಧಿ ಸೇರಿದಂತೆ ಸುಮಾರು 2.8 ಕೋಟಿ ರೂ. ಕಾಮಗಾರಿಗೆ ಶಿಲಾನ್ಯಾಸ, ಭೈರಂಪಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ದೇವದಾರು ಕಟ್ಟೆ- ಹುಲಿಕಲ್ಲು-ಶೇಡಿಗುಡ್ಡೆ ರಸ್ತೆ ಅಭಿವೃದ್ಧಿ, ಅಣ್ಣಾಲು ಕುಂಟಾಲಕಟ್ಟೆ ಎಳ್ಳಾರೆ- ಚೆನ್ನಿಬೆಟ್ಟು ರಸ್ತೆ ಅಭಿವೃದ್ಧಿ, ಪಟ್ಟಿಬಾವು-ದೊರಿ-ದೊಂಡೇರಂಗಡಿ ರಸ್ತೆ ಅಭಿವೃದ್ಧಿ, ಕುಂಟಾಲಕಟ್ಟೆ ವರ್ಜೆ ಆಯರಕಟ್ಟೆ ರಸ್ತೆ ಅಭಿವೃದ್ಧಿ, ಬಂಡಸಾಲೆ ನಡಿಬೆಟ್ಟು – ಅರ್ಬಿ ರಸ್ತೆ ಸೇರಿದಂತೆ 14.8 ಕೋಟಿ ರೂ. ಕಾಮಗಾರಿಗೆ ಗುದ್ದಲಿಪೂಜೆ ಹಾಗೂ 1.5 ಕೋಟಿ ರೂ. ವೆಚ್ಚದ ಆತ್ರಾಡಿ-ಪರೀಕ ರಿಂಗ್‌ ರಸ್ತೆಯ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಒಟ್ಟು 21.28 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಕಾಪು ಉತ್ತರ ವಲಯ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುಧೀರ್‌ ಹೆಗ್ಡೆ, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಉದಯ ಶೆಟ್ಟಿ, ಜಿ.ಪಂ. ಸದಸ್ಯ ಸುಧಾಕರ ಶೆಟ್ಟಿ, ಲೋಕೋಪಯೋಗಿ ಇಲಾಖೆಯ ಡಿ.ವಿ. ಹೆಗ್ಡೆ, ಬಸವರಾಜು, ತಾ.ಪಂ. ಸದಸ್ಯೆ ಗೋಪಿ ಕೆ. ನಾಯ್ಕ, ಶಾಂತಾರಾಮ ಸೂಡ, ಕುಕ್ಕೆಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಆಶಾಲತಾ  ಶೆಟ್ಟಿ, ಬೈರಂಪಳ್ಳಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಸದಾಶಿವ ಪೂಜಾರಿ, ಆತ್ರಾಡಿ ಗ್ರಾ.ಪಂ. ಅಧ್ಯಕ್ಷೆ ವಾರಿಜಾ ಶೆಟ್ಟಿಗಾರ, ಪ್ರವೀಣ್‌ ಹೆಗ್ಡೆ, ಶ್ರೀಧರ ಶೆಟ್ಟಿ, ಶಿವರಾಮ ಶೆಟ್ಟಿ,ಪ್ರವೀಣ್‌ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಹಿರಿಯಡಕಕ್ಕೆ ನಾಡ ಕಚೇರಿ
ಶೀಘ್ರದಲ್ಲಿ ಹಿರಿಯಡಕಕ್ಕೆ ನಾಡ ಕಚೇರಿಯನ್ನು ನಿರ್ಮಿಸುವ ಬಗ್ಗೆ ಈಗಾಗಲೇ ಪ್ರಸ್ತಾ ವನೆ ಸಲ್ಲಿಸಲಾಗಿದೆ. ಹಿರಿಯಡಕ ಆಸ್ಪತ್ರೆ ಯನ್ನು ಮೇಲ್ದರ್ಜೆ ಗೇರಿಸು ವುದು ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯ ಗಳನ್ನು ಹಂತಹಂತವಾಗಿ ಮಾಡಲಾಗುವುದು ಎಂದು ವಿನಯಕುಮಾರ್‌ ಸೊರಕೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next