Advertisement

ಹೊಸಕೋಟೆ ತಾಲೂಕಲ್ಲಿ 2,12,748 ಮತದಾರರು

09:38 AM Apr 18, 2019 | Lakshmi GovindaRaju |

ಹೊಸಕೋಟೆ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ತಾಲೂಕಿನಲ್ಲಿ 1,07,766 ಪುರುಷರು, 1,04,956 ಮಂದಿ ಮಹಿಳೆಯರು ಹಾಗೂ ಇತರೆ 26 ಮಂದಿ ಸೇರಿದಂತೆ ಒಟ್ಟು 2,12,748 ಮತದಾರರಿದ್ದಾರೆ. ಮತದಾನಕ್ಕೆ 286 ಮತ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ತಹಶೀಲ್ದಾರ್‌ ಕೆ.ರಮೇಶ್‌ ತಿಳಿಸಿದ್ದಾರೆ.

Advertisement

115 ಅತೀ ಸೂಕ್ಷ್ಮ, 171 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. 6 ಮತಗಟ್ಟೆಗಳನ್ನು ಸಖಿ ಕೇಂದ್ರಗಳೆಂದು ಪರಿಗಣಿಸಲಾಗಿದೆ. ಸಖಿ ಮತ ಕೇಂದ್ರಗಳಲ್ಲಿ ಪೂರ್ಣವಾಗಿ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಅಲ್ಲದೇ, ಸಖಿ ಮತ ಕೇಂದ್ರಗಳನ್ನು ತಳಿರು, ತೋರಣಗಳಿಂದ ಅಲಂಕರಿಸಿ, ಮತ ಚಲಾಯಿಸಲು ಬರುವ ಮಹಿಳೆಯರನ್ನು ಹೂ ನೀಡಿ ಸ್ವಾಗತಿಸಲಾಗುವುದು. ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಲು ಮಹಿಳೆಯರನ್ನು ಪ್ರೇರೇಪಿಸುವುದು ಇದರ ಮೂಲ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮತದಾನ ಸುಸೂತ್ರವಾಗಿ ನಡೆಯಲು 72 ವೀಕ್ಷಕರು, 30 ವೆಬ್‌ ಕ್ಯಾಸ್ಟಿಂಗ್‌ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅತೀ ಸೂಕ್ಷ್ಮ ಮತಕೇಂದ್ರಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡಲು 60 ವಿಡಿಯೋಗ್ರಾಫರ್‌ಗಳನ್ನು ಸಹ ನೇಮಿಸಲಾಗಿದೆ.

ಮತಕೇಂದ್ರಗಳಲ್ಲಿ 1,235 ಸಿಬ್ಬಂದಿ ಕಾಯನಿರ್ವಹಿಸಲಿದ್ದು, ಅಗತ್ಯ ಉಪಕರಣ, ಸಾಮಗ್ರಿಗಳನ್ನು ನೀಡಲಾಗಿದೆ. ವಸತಿ, ಊಟ, ಶೌಚಾಲಯ, ಕುಡಿಯುವ ನೀರಿನ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ.

Advertisement

ಮತದಾರರನ್ನು ಮತಕೇಂದ್ರಗಳಿಗೆ ಕರೆದೊಯ್ಯಲು 37 ಬಸ್‌, 28 ಜೀಪ್‌, 1,731 ಮಂದಿ ದಿವ್ಯಾಂಗ ಮತದಾರರಿಗೆ ಮನೆಯಿಂದ ಮತಗಟ್ಟೆಗೆ ಹೋಗಲು 469 ಆಟೋಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next