Advertisement

ಉಳ್ಳಾಲ: ಪ್ರಿಯಕರನ ಜತೆ ಮನಸ್ತಾಪ; ಫೋನಿನಲ್ಲಿ ಮಾತಾನಾಡುತ್ತಲೇ ನೇಣಿಗೆ ಕೊರಳೊಡ್ಡಿದ ಯುವತಿ

05:26 PM Feb 23, 2022 | Team Udayavani |

ಉಳ್ಳಾಲ: ಯುವತಿಯೋರ್ವಳು ನೇಣುಬಿಗಿದು ಸಾವನ್ನಪ್ಪಿರುವ ಘಟನೆ ಕುಂಪಲ ಬಲ್ಯ ಎಂಬಲ್ಲಿ ಸಂಭವಿಸಿದೆ.

Advertisement

ಕುಂಪಲ ಬಲ್ಯ ನಿವಾಸಿ ಹರ್ಷಿತಾ(21) ಸಾವನ್ನಪ್ಪಿದವರು.

ಮನೆಯ ಕೊಠಡಿಯಲ್ಲಿ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಹರ್ಷಿತಾ ಇಂದು ಬೆಳಿಗ್ಗೆ ಪತ್ತೆಯಾಗಿದ್ದಾಳೆ.

ಇದನ್ನೂ ಓದಿ: ಹುಣಸೂರು: ವರ್ಷದ ಹಿಂದೆ ಮನೆ ತೊರೆದಿದ್ದ ಯುವ ಪ್ರೇಮಿಗಳು ನೇಣಿಗೆ ಶರಣು

ಪ್ರಿಯಕರನೊಂದಿಗೆ ವಿರಸಗೊಂಡು ಮೊಬೈಲ್ ಸಂಭಾಷಣೆಯಲ್ಲಿದ್ದ ನಡುವೆ ನೇಣು ಹಾಕಿಕೊಂಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಸ್ಥಳೀಯ ನಿವಾಸಿ ಪ್ರಿಯಕರ ಆಕೆಯನ್ನು ನೇಣಿನ ಕುಣಿಕೆಯಿಂದ ಕೆಳಗಿಳಿಸಿ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿದ್ದಾನೆ.

Advertisement

ಆದರೆ ಇಂದು ಬೆಳಿಗ್ಗೆ ಹರ್ಷಿತಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next