Advertisement

ಮಲಬಾರ್‌ ಗೋಲ್ಡ್‌ &ಡೈಮಂಡ್ಸ್‌ನಿಂದ 21 ಹೊಸ ಶೋರೂಂ

11:22 PM Aug 27, 2019 | Lakshmi GovindaRaj |

ಬೆಂಗಳೂರು: ವಿಶ್ವದ ಅತಿದೊಡ್ಡ ಜ್ಯುವೆಲ್ಲರಿ ರೀಟೇಲರ್‌ ಕಂಪನಿಯಾಗಿರುವ ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್ಸ್‌ 2023ನೇ ಹಣಕಾಸು ಸಾಲಿನ ಯೋಜನೆಯ ಭಾಗವಾಗಿ ಮುಂದಿನ 6 ತಿಂಗಳಲ್ಲಿ 21 ಹೊಸ ಮಳಿಗೆಗಳನ್ನು ಆರಂಭಿಸಲಿದೆ.

Advertisement

ಮಲಬಾರ್‌ ಗ್ರೂಪ್‌ನ ಅಧ್ಯಕ್ಷ ಎಂ.ಪಿ.ಅಹ್ಮದ್‌ ಅವರು ಮಾತನಾಡಿ, ಜಾಗತಿಕ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ರೀತಿಯಲ್ಲಿ ನಮ್ಮ ಬ್ರ್ಯಾಂಡ್‌ ಅನ್ನು ಗ್ರಾಹಕರು ಒಪ್ಪಿಕೊಂಡಿದ್ದಾರೆ. ಪಾರದರ್ಶಕತೆ, ಪ್ರಾಮಾಣಿಕತೆ, ಗುಣಮಟ್ಟದ ಜತೆಗೆ ಮೌಲ್ಯವರ್ಧಿತ ಸೇವೆಗಳು, ಪ್ರತಿಯೊಬ್ಬ ಗ್ರಾಹಕರ ಅಭಿರುಚಿಗೆ ತಕ್ಕ‌ ವಿನ್ಯಾಸಗಳ ಆಭರಣಗಳನ್ನು ಪೂರೈಕೆಯಂತಹ ವ್ಯವಹಾರ ಮೌಲ್ಯಗಳು ನಮ್ಮ ಆದ್ಯತೆಗಳಾಗಿವೆ ಎಂದರು.

ಈ ಕಾರಣದಿಂದಾಗಿಯೇ ಜಗತ್ತಿನಾದ್ಯಂತ ಗ್ರಾಹಕರು ಹೊಂದಿದ್ದೇವೆ. 2019ರಲ್ಲಿ ಇನ್ನೂ ಹೆಚ್ಚು ಶೋರೂಂ ಮತ್ತು ಆಭರಣ ತಯಾರಿಕಾ ಘಟಕಗಳನ್ನು ಆರಂಭಿಸಲಿದ್ದೇವೆ. ಇದಲ್ಲದೆ, ಯುವಪೀಳಿಗೆಗೆ ಉದ್ಯೋಗ ಲಭಿಸುವಂತಹ ಆಭರಣ ತಯಾರಿಕೆಯ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನೂ ಆರಂಭಿಸಲಿದ್ದೇವೆ. ಈ ಎಲ್ಲ ಉಪಕ್ರಮಗಳು ವಿಶ್ವದಲ್ಲಿ ಅತಿದೊಡ್ಡ ಆಭರಣಗಳ ರೀಟೇಲರ್‌ ಹಿರಿಮೆಗೆ ಮತ್ತಷ್ಟು ಗರಿ ಮೂಡಿಸಲಿವೆ ಎಂದು ಅಭಿಪ್ರಾಯಪಟ್ಟರು.

ಹೊಸ ವಿಸ್ತರಣೆಯಿಂದಾಗಿ ಮಲಬಾರ್‌ ಗ್ರೂಪ್‌ನ ವೃತ್ತಿಪರ ಸಿಬ್ಬಂದಿ ಸಂಖ್ಯೆ 13,500 ಕ್ಕೆ ಏರಲಿದೆ ಮತ್ತು ಮುಂದಿನ ಐದು ವರ್ಷಗಳಲ್ಲಿ ಯೋಜನೆಯ ಬೆಳವಣಿಗೆ ಮತ್ತು ವಿಸ್ತರಣೆಯಿಂದ ಮತ್ತಷ್ಟು ಉದ್ಯೋಗ ಸೃಷ್ಟಿಯಾಗಲಿದೆ. ಪಾರದರ್ಶಕವಾದ ಮಾಲೀಕತ್ವದ ಮಾದರಿಯಲ್ಲಿ ಮಲಬಾರ್‌ ಗ್ರೂಪ್‌ನ ವಿವಿಧ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವವರು ಶೇರುದಾರರಾಗುವ ಮೂಲಕ ನೂತನವಾದ ವ್ಯವಹಾರ ಮಾದರಿಯನ್ನು ಹೊಂದಿದೆ.

ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್ಸ್‌ ಪ್ರಸ್ತುತ ಇದೇ ಮಾದರಿಯ ದೃಷ್ಟಿಕೋನ, ಸಮರ್ಪಣೆ ಮತ್ತು ಉತ್ಸಾಹಭರಿತವಾದ 4,000ಕ್ಕೂ ಅಧಿಕ ಹೂಡಿಕೆದಾರರಿದ್ದಾರೆ. ಶೇ.19.4ರಷ್ಟು ಪಾಲನ್ನು ಹೊಂದಿರುವ ಈ ಹೂಡಿಕೆದಾರರು ಮಲಬಾರ್‌ ಗ್ರೂಪ್‌ನಲ್ಲಿ ನೌಕರರಾಗಿದ್ದಾರೆ ಎಂದು ತಿಳಿಸಿದರು.

Advertisement

ಮಲಬಾರ್‌ ಗ್ರೂಪ್‌ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆಯ ಆದ್ಯತಾ ವಲಯಗಳೆಂದರೆ ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣ, ವಸತಿ ಮತ್ತು ಪರಿಸರ ರಕ್ಷಣೆ. ಸಂಸ್ಥೆಯು ತನ್ನ ಲಾಭದಲ್ಲಿ ಶೇ.5ರಷ್ಟನ್ನು ಸಿಎಸ್‌ಆರ್‌ ಚಟುವಟಿಕೆಗಳಿಗೆ ಮೀಸಲಿಟ್ಟಿದೆ. ಈ ಹಣವನ್ನು ತನ್ನ ಶೋರೂಂಗಳು ಕಾರ್ಯನಿರ್ವಹಿಸುತ್ತಿರುವ ಜಿಸಿಸಿ, ಭಾರತ, ಮಲೇಶಿಯಾ, ಸಿಂಗಾಪುರ ಮತ್ತು ಯುಎಸ್‌ಎಗಳಲ್ಲಿ ಹಲವಾರು ಸಾಮಾಜಿಕ ಕಳಕಳಿಯ ಉದ್ದೇಶಗಳಿಗೆ ವಿನಿಯೋಗಿಸುತ್ತಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next