Advertisement
ಕೋಲಾರ ಎಪಿಎಂಸಿ ಮಾರುಕಟ್ಟೆಯ ಎಜಿ ಟ್ರೇಡರ್ಸ್‌ನ ಸಕ್ಲೇನ್ ಹಾಗೂ ಎಸ್.ವಿ.ಟಿ ಟ್ರೇಡರ್ಸ್‌ನ ಮುನಿರೆಡ್ಡಿ ಎಂಬುವರು ಸುಮಾರು 21 ಲಕ್ಷ ರೂ. ಮೌಲ್ಯದ ಸುಮಾರು 750 ಕ್ರೇಟ್ ಟೊಮಾಟೊವನ್ನು ಜುಲೈ27ರಂದು ರಾಜಾಸ್ಥಾನದ ಜೈಪುರ್‌ಗೆ ಮೆಹತ್ ಟ್ರಾನ್ಸ್‌ಪೊàರ್ಟ್‌ಗೆ ಸೇರಿದ ಲಾರಿಯ ಮೂಲಕ ಕಳಿಸಿದ್ದರು.
Related Articles
Advertisement
ಲಾರಿ ಇನ್ನು ಅಪಘಾತವಾಗಿದ್ದರೆ ಅಥವಾ ಬೇರೆ ಏನಾದ್ರೂ ಸಮಸ್ಯೆ ಆಗಿದ್ದರೆ ನಮಗೆ ಮಾಹಿತಿ ಬರುತ್ತಿತ್ತು, ಆದರೆ ಇಲ್ಲಿ ಲಾರಿ ಚಾಲಕ ಟೊಮೇಟೋ ಕಳ್ಳತನ ಮಾಡಿರುವ ಅನುಮಾನವಿದೆ ಅನ್ನೋದು ವ್ಯಾಪಾರಸ್ಥರ ಮಾತು.
ಅಲ್ಲದೆ ಟೊಮೇಟೋ ಹೆಚ್ಚು ದಿನ ಇರೋದಿಲ್ಲ ಕೊಳೆತು ಹೋಗುವ ಸಾಧ್ಯತೆ ಹಾಗಾಗಿ ಸಮಯಕ್ಕೆ ಸರಿಯಾಗಿ ವ್ಯಾಪಾರಸ್ಥರಿಗೆ ತಲುಪಿಸುವುದು ನಮ್ಮ ಜವಾಬ್ದಾರಿ ಹಾಗೊಂದು ವೇಳೆ ಟೊಮೇಟೋ ತಲುಪದಿದ್ದರೆ ರೈತರಿಗೆ ನಾವು ನಮ್ಮ ಕೈಯಾರೆ ಹಣ ಕೊಡಬೇಕಾಗುತ್ತದೆ ಎಂದು ವ್ಯಾಪಾರಿ ಮುನಿರೆಡ್ಡಿ ಆತಂಕ ವ್ಯಕ್ತಪಡಿಸಿದ್ದಾರೆ.
ಎಸ್ಕಾರ್ಟ್ ಕಳಿಸಬೇಕಾಗಬಹುದು-ಶ್ರೀನಾಥ್
ಈ ಕುರಿತು ಟೊಮೇಟೋ ಮಂಡಿ ಮಾಲೀಕ ಸಿಎಂಆರ್ ಶ್ರೀನಾಥ್ ಮಾಹಿತಿ ನೀಡಿ, ಒಟ್ಟಾರೆ ಟೊಮೇಟೋ ಚಿನ್ನದ ಬೆಲೆ ಬಂದಿದೆ, ದೇಶ ವಿದೇಶಗಳಲ್ಲೂ ಟೊಮೇಟೋ ಹೆಚ್ಚಿನ ಬೇಡಿಕೆ ಇದೆ ಹಾಗಾಗಿ ಟೊಮೇಟೋ ವನ್ನು ಮಾರಾಟ ಮಾಡೋದು ಕಷ್ಟದ ಕೆಲಸವಲ್ಲ ಹಾಗಾಗಿಯೇ ಕೋಲಾರದಿಂದ ರಾಜಾಸ್ಥಾನಕ್ಕೆ ತಲುಪಬೇಕಿದ್ದ ಟೊಮೇಟೋ ಕೂಡಾ ಕಳ್ಳತನದಿಂದ ಮಾರಾಟ ಮಾಡಿರುವ ಸಾಧ್ಯತೆ ಇದೆ, ಸದ್ಯ ಇನ್ನು ಇದೇ ರೀತಿ ಟೊಮೇಟೋ ಬೆಲೆ ಮುಂದುವರಿದಿದ್ದೇ ಆದರೆ ಎಸ್ಕಾರ್ಟ್ ಮೂಲಕ ಟೊಮೇಟೋ ಕಳಿಸಬೇಕಾದ ಸ್ಥಿತಿ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದರು.
ಕಳ್ಳನೊಬ್ಬ ಟೊಮೇಟೋ ತುಂಬಿದ್ದ ಬಾಕ್ಸ್ ಒಂದನ್ನು ಕಳ್ಳತನ ಮಾಡಿದ್ದ ಘಟನೆ ನಡೆದಿತ್ತು, ಈ ಘಟನೆ ಮಾಸುವ ಮೊದಲೇ 21 ಲಕ್ಷ ಮೌಲ್ಯದ ಟೊಮೇಟೋ ಲಾರಿಯೇ ನಾಪತ್ತೆಯಾಗಿರುವುದು ವ್ಯಾಪಾರಿಗಳ ಆತಂಕಕ್ಕೆ ಕಾರಣವಾಗಿದೆ.
ಲಾರಿಯಲ್ಲಿ ಸರಾಸರಿ 21 ಲಕ್ಷ ಮೌಲ್ಯದ ಟೊಮ್ಯಾಟೋ ಇತ್ತು ಆದರೆ ಇಲ್ಲಿ ಟೊಮೇಟೋ ನಿಜಕ್ಕೂ ಕಳ್ಳತನವಾಗಿರುವ ಸಾಧ್ಯತೆ ಇದ್ದು ಕೂಡಲೇ ನಮಗೆ ಪೊಲೀಸರು ತನಿಖೆ ನಡೆಸಿ ನ್ಯಾಯ ಕೊಡಿಸಬೇಕು ಅನ್ನೋದು ಟೊಮ್ಯಾಟೋ ಕಳೆದುಕೊಂಡಿರುವ ವ್ಯಾಪಾರಸ್ಥರ ಮನವಿಯಾಗಿದೆ.