ಪಾಕಿಸ್ತಾನ: ನೆರೆರಾಷ್ಟ್ರ ಪಾಕಿಸ್ತಾನದ ಪ್ರಸಿದ್ಧ ಪ್ರವಾಸಿ ನಗರ ರಾವಲ್ಪಿಂಡಿ ಜಿಲ್ಲೆಯ ಮುರ್ರೀಯಲ್ಲಿ ಶನಿವಾರ ಭಾರೀ ಪ್ರಮಾಣದ ಅನಿರೀಕ್ಷಿತ ಹಿಮವರ್ಷ ವಾಗಿದೆ.
ರಸ್ತೆಗಳೆಲ್ಲವೂ ಹಿಮಾವೃತವಾಗಿದ್ದು, 9 ಮಕ್ಕಳು ಸೇರಿ ಒಟ್ಟು 21 ಪ್ರವಾಸಿಗರು ಕಾರಿನೊಳಗೇ ಸಾವನ್ನಪ್ಪಿದ್ದಾರೆ.
ರಾವಲ್ಪಿಂಡಿ ಜಿಲ್ಲೆಗೆ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಹಿಮವರ್ಷ ದ ವೇಳೆ ಒಟ್ಟು 24 ಸಾವಿರ ವಾಹನಗಳು ಮುರ್ರೀ ನಗರದಲ್ಲಿದ್ದು, ಅದರಲ್ಲಿ 23 ಸಾವಿರ ವಾಹನಗಳನ್ನು ವಾಪಸು ಕಳುಹಿಸಿಕೊಡಲಾಗಿದೆ.
ಇದನ್ನೂ ಓದಿ:ಹಿಮವರ್ಷ: ಕಾಶ್ಮೀರದಲ್ಲಿ ವಿಮಾನ ಸಂಚಾರಕ್ಕೂ ಅಡ್ಡಿ
ಇನ್ನೂ 1000 ವಾಹನಗಳು ಹಿಮಾವೃತ ರಸ್ತೆಗಳಲ್ಲಿ ಸಿಲುಕಿರುವುದಾಗಿ ವರದಿಯಾಗಿದೆ. ಪೂರ್ತಿ ಮುರ್ರೀ ನಗರವನ್ನು ವಿಪತ್ತು ಪೀಡಿತ ಪ್ರದೇಶ ಎಂದು ಪಾಕ್‌ನ ಪಂಜಾಬ್ ಪ್ರಾಂತ್ಯದ ಸರ್ಕಾರ ಘೋಷಿಸಿದೆ.