ಮಾಲಿ: ಮಧ್ಯ ಮಾಲಿಯ ಬಂಡಾಯ ಪೀಡಿತ ಮೋಪ್ತಿ ಪ್ರದೇಶದ ಹಳ್ಳಿಯೊಂದರ ಮೇಲೆ ಶುಕ್ರವಾರ ಬಂದೂಕುಧಾರಿಗಳು ನಡೆಸಿದ ದಾಳಿಯಲ್ಲಿ ಕನಿಷ್ಠ 21 ಮಂದಿ ನಾಗರಿಕರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದುಷ್ಕರ್ಮಿಗಳು ಬಂಡಿಯಾಗರಾ ಪಟ್ಟಣದ ಸಮೀಪವಿರುವ ಯಾರೌ ಗ್ರಾಮವನ್ನು ಗುರಿಯಾಗಿಸಿಕೊಂಡು ಮಧ್ಯಾಹ್ನ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಂದು ಮೂಲಗಳ ಪ್ರಕಾರ ಇದು ನಿಜವಾದ ಹತ್ಯಾಕಾಂಡವಾಗಿದೆ, ಶಸ್ತ್ರಸಜ್ಜಿತ ಪುರುಷರ ತಂಡ ಹಳ್ಳಿಗೆ ನುಗ್ಗಿ ಜನರ ಮೇಲೆ ಮನಬಂದಂತೆ ಗುಂಡು ಹಾರಿಸಿದರು. ಇದರಿಂದ 20 ರಿಂದ 30 ಜನರು ಸಾವನ್ನಪ್ಪಿರಬಹುದು ಮತ್ತು ಹಲವರು ಗಾಯಗೊಂಡಿದ್ದಾರೆ” ಎಂದು ಇಲ್ಲಿನ ಸುದ್ದಿ ಸಂಸ್ಥೆಯೊಂದು ಮಾಹಿತಿ ನೀಡಿದೆ.
ಇನ್ನೊಂದು ಮೂಲಗಳ ಪ್ರಕಾರ ಮಹಿಳೆಯರು ಸೇರಿ ಸುಮಾರು ಇಪ್ಪತ್ತೊಂದು ಮಂದಿ ಜನ ಸಾವನ್ನಪ್ಪಿದ್ದು ಸುಮಾರು ಹತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಸದ್ಯ ದಾಳಿಯ ಹೊಣೆಯನ್ನು ಯಾವುದೇ ಗುಂಪು ಹೊತ್ತುಕೊಂಡಿಲ್ಲ ಎಂದು ಹೇಳಲಾಗಿದ್ದು ಘಟನೆಯಲ್ಲಿ ಇಪ್ಪತ್ತೊಂದು ಅಮಾಯಕರು ಜೀವ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: Ladakh: ಸೇನಾ ಟ್ರಕ್ ಉರುಳಿ ಬಿದ್ದು 9 ಯೋಧರು ಹುತಾತ್ಮ: ಪ್ರಧಾನಿ ಮೋದಿ ಸಂತಾಪ