ವಿಶಾಖಪಟ್ಟಣಂ: ರಾಜ್ಯದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಹಳ್ಳಿಯೊಂದರಲ್ಲಿ 16 ವರ್ಷಗಳ ಹಿಂದೆ 11 ಕೊಂಡ್ ಬುಡಕಟ್ಟು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ 21 ಪೊಲೀಸರನ್ನು ವಿಶೇಷ ನ್ಯಾಯಾಲಯವು ಖುಲಾಸೆಗೊಳಿಸಿದೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ತಪ್ಪಿತಸ್ಥರ ವಿರುದ್ಧ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಆರೋಪಿಗಳನ್ನು
ಪ್ರಾಥಮಿಕವಾಗಿ ಖುಲಾಸೆಗೊಳಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಏನಿದು ಪ್ರಕರಣ: 2007 ರಲ್ಲಿ ಆಂಧ್ರಪ್ರದೇಶದಲ್ಲಿನ ಸಣ್ಣ ಹಳ್ಳಿಯೊಂದರಲ್ಲಿ 11 ಆದಿವಾಸಿ ಮಹಿಳೆಯರನ್ನು 21 ಮಂದಿ ನಕ್ಸಲ್ ನಿಗ್ರಹ ವಿಶೇಷ ಪೊಲೀಸರ ತಂಡ ಬಂದೂಕು ತೋರಿಸಿ ಬೆದರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು ಅಲ್ಲದೆ ಈ ಪ್ರಕರಣ ಕುರಿತು ಕೇಸು ದಾಖಲಾಗಿತ್ತು ಆದರೆ ಸರಿಯಾದ ದಾಖಲೆಗಳು, ಸಾಕ್ಷಿಗಳು ಕೋರ್ಟ್ ಗೆ ಸಲ್ಲಿಸಲು ವಿಫಲವಾದ ಪರಿಣಾಮ 21 ಆರೋಪಿತ ಪೊಲೀಸರನ್ನು ವಿಶೇಷ ನ್ಯಾಯಾಲಯ ಗುರುವಾರ ಖುಲಾಸೆಗೊಳಿಸಿದೆ.
ಈ ಪ್ರಕರಣಕ್ಕೆ ಸಂಬಂದಿಸಿದ ವಿಚಾರಣೆಯು 2018 ರಲ್ಲಿ ವಿಶಾಖಪಟ್ಟಣಂನಲ್ಲಿ ಪ್ರಾರಂಭವಾಯಿತು ಮತ್ತು ಎಸ್‌ಸಿ ಮತ್ತು ಎಸ್‌ಟಿ (ದೌರ್ಜನ್ಯ ತಡೆ) ಕಾಯಿದೆಯಡಿಯಲ್ಲಿ XI ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮತ್ತು ವಿಶೇಷ ನ್ಯಾಯಾಲಯವು ಅಸಮರ್ಪಕ ತನಿಖೆಯ ಕಾರಣ ಪೊಲೀಸರನ್ನು ಖುಲಾಸೆಗೊಳಿಸುವುದರೊಂದಿಗೆ ಗುರುವಾರ ಮುಕ್ತಾಯವಾಯಿತು.
ಅಷ್ಟೇ ಅಲ್ಲದೆ ಅತ್ಯಾಚಾರದಲ್ಲಿ ಬದುಕುಳಿದವರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮೂಲಕ ಪರಿಹಾರವನ್ನು ಪಾವತಿಸಲು ನ್ಯಾಯಾಲಯ ಆದೇಶಿಸಿದೆ.
ಇದನ್ನೂ ಓದಿ: Chhattisgarh ಸ್ಫೋಟಕಗಳ ಸಹಿತ ಇಬ್ಬರು ನಕ್ಸಲೀಯರ ಬಂಧನ