Advertisement

ನ್ಯಾಯಾಂಗ ಕ್ಷೇತ್ರದ ಡಿಜಿಟಲೀಕರಣ ಅಗತ್ಯ: ಸಿಎಂ

10:56 PM Apr 23, 2022 | Team Udayavani |

ಬೆಂಗಳೂರು: ನ್ಯಾಯಾಂಗ ಕ್ಷೇತ್ರವನ್ನು ತಾಂತ್ರಿಕವಾಗಿ ಉನ್ನತೀಕರಿಸುವ ಮತ್ತು ಡಿಜಿಟಲೀಕರಣಗೊಳಿಸುವ ತುರ್ತು ಅಗದ್ದು, ಇದು ಕಾಲದ ಬೇಡಿಕೆಯೂ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ವತಿಯಿಂದ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದ ಡಾ| ಬಾಬು ರಾಜೇಂದ್ರಪ್ರಸಾದ್‌ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನ್ಯಾಯಾಂಗ ಅಧಿಕಾರಿಗಳ ರಾಜ್ಯ ಮಟ್ಟದ ದ್ವೈವಾರ್ಷಿಕ ಸಮ್ಮೇಳನ ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಮಾಜದಲ್ಲಾಗುವ ಬದಲಾವಣೆ ಗಳ ಪ್ರತಿಬಿಂಬ ನ್ಯಾಯಾಂಗದಲ್ಲೂ ಕಾಣ ಸಿಗುತ್ತದೆ. ಈ ನಿಟ್ಟಿನಲ್ಲಿ ಆಧುನಿಕ ಕಾಲಮಾನಕ್ಕೆ ತಕ್ಕ ತಂತ್ರಜ್ಞಾನ ನ್ಯಾಯಾಂಗ ಕ್ಷೇತ್ರ ಮತ್ತು ನ್ಯಾಯಾಲಯಗಳಲ್ಲೂ ಬರಬೇಕು ಎಂಬುದು ಸಹಜ ಬೇಡಿಕೆಯಾಗಿದೆ ಎಂದು ಅವರು ಹೇಳಿದರು.

ಸಮಾಜ ಪ್ರಾಮಾಣಿಕತೆ ಮತ್ತು ನ್ಯಾಯಪರತೆಯನ್ನು ಗುರುತಿಸದೆ ಹೋದರೆ ಸಮಾಜ ತನ್ನ ಜವಾವಾªರಿಯಿಂದ ವಿಮುಖವಾ ದಂತೆ. ಇದು ಮೌಲಿಕ ವ್ಯವಸ್ಥೆಗೆ ಪೆಟ್ಟು ನೀಡುತ್ತದೆ. ಮೌಲಿಕ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಹೆಚ್ಚಿನ ಜವಾಬ್ದಾರಿ ನ್ಯಾಯಾಂಗದ ಮೇಲಿದೆ. ಆದ್ದರಿಂದ ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿಯವ ನಿಟ್ಟಿನಲ್ಲಿ ನ್ಯಾಯಾಂಗ ಕಾರ್ಯನಿರ್ವಹಿಸಬೇಕಿದೆ ಎಂದು ಮುಖ್ಯಮಂತ್ರಿಯವರು ಹೇಳಿದರು.

ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲಿ 13 ಅಕ್ರಮ ರೋಹಿಂಗ್ಯಾ ವಲಸಿಗರ ಬಂಧನ

Advertisement

ಕರ್ನಾಟಕ ಮುಂಚೂಣಿ: ನ್ಯಾ| ಚಂದ್ರಚೂಡ್‌
ಸಮ್ಮೇಳನವನ್ನು ಉದ್ಘಾಟಿಸಿದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಹಾಗೂ ಸುಪ್ರೀಂಕೋರ್ಟ್‌ನ ಇ-ಸಮಿತಿ ಮುಖ್ಯಸ್ಥ ನ್ಯಾ| ಡಾ. ಡಿ.ವೈ. ಚಂದ್ರಚೂಡ್‌ ಅವರು, ತಂತ್ರಜ್ಞಾನದ ಬಳಕೆಯಲ್ಲಿ ಹಲವು ಆಯಾಮಗಳನ್ನು ಕರ್ನಾಟಕ ಹೈಕೋರ್ಟ್‌ ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿದ್ದು, ದೇಶದ ಇತರ ಹೈಕೋರ್ಟ್‌ಗಳಿಂಗಿಂತ ಬಹಳ ಮುಂದಿದೆ. ಇ-ಸೇವಾ, ಇ-ಫೈಲಿಂಗ್‌, ಕೋವಿಡ್‌ ಸಮಯದಲ್ಲಿ ಆನ್‌ಲೈನ್‌ ವಿಚಾರಣೆ, ಹೈಬ್ರಿಡ್‌ ಕಲಾಪ, ಕೋರ್ಟ್‌ ಕಲಾಪಗಳ ನೇರ ಪ್ರಸಾರ ಇತ್ಯಾದಿ ಕರ್ನಾಟಕ ಹೈಕೋರ್ಟ್‌ನ ಹೆಗ್ಗುರುತುಗಳಾಗಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಸುಪ್ರೀಂಕೋರ್ಟ್‌ ನ್ಯಾಯ ಮೂರ್ತಿಗಳಾದ ಎ.ಎಸ್‌. ಬೋಪಣ್ಣ, ಬಿ.ವಿ. ನಾಗರತ್ನಾ, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next