Advertisement
ಮಾರ್ವೇ ರೋಡ್ ಲೋವರ್ ಖಾರೋಡಿ ಸೈಂಟ್ ಜ್ಯೂಡ್ಸ್ ಹೈಸ್ಕೂಲ್‌ನಲ್ಲಿ ನ. 21ರಂದು ಜರಗಿದ ಮಲಾಡ್ ಕನ್ನಡ ಸಂಘದ 20ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವು ಮಾಡುವ ಕೆಲಸದಲ್ಲಿ ಪಾರದರ್ಶಕತೆ, ಸಮಯ ಮತ್ತು ಮನಸ್ಸುಗಳ ಹೊಂದಾಣಿಕೆ ಅತೀ ಮುಖ್ಯ. ನ್ಯಾಯವಾದಿ ವೃತ್ತಿಯ ಅನುಭವವನ್ನು ಸಂಸ್ಥೆಯ ಚಟುವಟಿಕೆಗಳಲ್ಲಿ ಬಳಸುವ ಮೂಲಕ ಕೆಲವು ಬದಲಾವಣೆಗಳು ಸಂಘದ ಒಳಿತಿಗಾಗಿ ಎಂದು ಪರಿಗಣಿಸಬೇಕು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಈ ಸಂಘದ ನೂತನ ಅಧ್ಯಕ್ಷ ಹು¨ªೆ ದೊರೆತಿದೆ. ನಿಮ್ಮೆಲ್ಲರ ಉಪಯುಕ್ತ ಸಲಹೆ, ಸೂಚನೆ ಮೂಲಕ ಸಂಸ್ಥೆಯನ್ನು ಉನ್ನತಿಯತ್ತ ಕೊಂಡೊಯ್ಯುತ್ತೇನೆ. ಸಂಘ ಬೆಳೆಯುವುದರ ಜತೆಗೆ ಸದಸ್ಯರಿಗೆ, ಸದಸ್ಯರ ಮಕ್ಕಳಿಗೆ ಇದರ ಉಪಯೋಗ ದೊರೆ ಯಬೇಕೆಂಬ ಅಪೇಕ್ಷೆ ನನ್ನದು. ಸಂಘದ ಮೂಲಕ ದಾನಿಗಳ ಸಹಾಯದಿಂದ ಆ್ಯಂಬುಲೆನ್ಸ್, ಮಕ್ಕಳ ಶೈಕ್ಷಣಿಕ ದತ್ತು ಸ್ವೀಕಾರ, ಅಸಹಾಯಕರಿಗೆ ವೀಲ್‌ಚೇರ್ ವಿತರಣೆ ಇತ್ಯಾದಿ ಮಹತ್ವಪೂರ್ಣ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನಕ್ಕೆ ಸದಸ್ಯರೆಲ್ಲ ಸಹಕಾರ ಅಗತ್ಯ. ಸಂಘದ ಪಾರದರ್ಶಕತೆ, ಇನ್ನಿತರ ಕಾರ್ಯ ಕಲಾಪಗಳ ಚರ್ಚೆಗೆ ಸಹಕರಿಸುವಂತೆ ಸಲಹೆ ನೀಡಿದರು.
Related Articles
Advertisement
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಸಂಘದ ವತಿಯಿಂದ ಆಯೋಜಿಸಲಾದ ಕೇರಂ, ಚೆನ್ನೆಮಣೆ ಒಳಾಂಗಣ ಕ್ರೀಡಾಕೂಟದಲ್ಲಿ ವಿಜೇತರಾದ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು. ಸದಸ್ಯ ಸೂರಪ್ಪ ಕುಂದರ್ ವಿಜೇತರ ಹಾಗೂ ಪ್ರತಿಭಾನ್ವಿತರ ಹೆಸರು ವಾಚಿಸಿದರು. ರಂಜನ್ ಪೂಜಾರಿ ಸಹಕರಿಸಿದರು.
ಜತೆ ಕೋಶಾಧಿಕಾರಿ ಶಂಕರ್ ಆರ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಂತೋಷ್ ಕೆ. ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರತಿ ಬಾಲಚಂದ್ರ ರಾವ್ ಉಪಸ್ಥಿತರಿದ್ದರು. ಬಂಟ್ಸ್ ಲಾ ಫೋರಂನ ಅಧ್ಯಕ್ಷ ಅಡ್ವೊಕೇಟ್ ಡಿ. ಕೆ. ಶೆಟ್ಟಿ, ನ್ಯಾಯವಾದಿ ರಾಮ್‌ಪ್ರಸಾದ್ ಸಿ. ಶೆಟ್ಟಿ, ಜೋಸೆಫ್ ರೋಡ್ರಿಗಸ್ ಇನ್ನಿತರ ಹಲವಾರು ಗಣ್ಯ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ಸಂಘದ ಕನ್ನಡ ಕಲಿಕೆ ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ಗೌರವ ಪ್ರಧಾನ ಕಾರ್ಯದರ್ಶಿ ಶಂಕರ್ ಡಿ. ಪೂಜಾರಿ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಅನಿಲ್ ಎಸ್. ಪೂಜಾರಿ ವಂದಿಸಿದರು.
ಕಳೆದ 20 ವರ್ಷಗಳಲ್ಲಿ ಮಲಾಡ್ ಕನ್ನಡ ಸಂಘದ ವೆಶಿಷ್ಟ್ಯಪೂರ್ಣ ಕಾರ್ಯಕ್ರಮಗಳ ಬಗ್ಗೆ ಅಭಿಮಾನವಾಗುತ್ತದೆ. ಭವಿಷ್ಯದಲ್ಲಿ ಇನ್ನಷ್ಟು ಜನಪರ ಕಾರ್ಯಕ್ರಮಗಳು ನಡೆಯಲು ನಾವೆಲ್ಲರೂ ಸಹಕರಿಸೋಣ.–ಪ್ರೇಮ್‌ನಾಥ್ ಸಾಲ್ಯಾನ್ ಆಡಳಿತ ನಿರ್ದೇಶಕರು, ಅಭ್ಯುದಯ ಕೋ-ಆಪರೇಟಿವ್ ಬ್ಯಾಂಕ್
ಮಲಾಡ್ ಕನ್ನಡ ಸಂಘವು ಪ್ರಾರಂಭದಿಂದಲೂ ಜನಪ್ರಿಯ ಕಾರ್ಯಕ್ರಮಗಳೊಂದಿಗೆ ಪ್ರಶಂಸೆಗೆ ಪಾತ್ರವಾದ ಸಂಸ್ಥೆಯಾಗಿದೆ. ನೂತನ ಅಧ್ಯಕ್ಷರ ಸಾರಥ್ಯದಲ್ಲಿ ಇನ್ನಷ್ಟು ಅಭಿವೃದ್ಧಿಪರ ಕೆಲಸಗಳು ಜರಗಲಿ.–ಜಯಂತ್ ಎಸ್. ಶೆಟ್ಟಿ ಮಾಜಿ ಅಧ್ಯಕ್ಷರು, ಬಾಂಬೆ ಬಂಟ್ಸ್ ಅಸೋಸಿಯೇಶನ್
-ಚಿತ್ರ-ವರದಿ : ರಮೇಶ್ ಉದ್ಯಾವರ