Advertisement
ಅವರು ಬಂಟ್ವಾಳ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಮನೆ ಮನೆ ಭೇಟಿಯ ಮೂಲಕ ಮತಯಾಚನೆ ನಡೆಸಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ನಾನು ಶಾಸಕನಾಗುವ ಮೊದಲು ಬಂಟ್ವಾಳದಲ್ಲಿ ಬರೀ ಕೋಮು ಗಲಭೆಗಳು, ಹತ್ಯೆಗಳು, ಇನ್ನಿತರ ಅಹಿತಕರ ಘಟನೆಗಳು ಮರುಕಳಿಸುತ್ತಲೇ ಇತ್ತು. ಹೀಗಾಗಿ ತಾನು ಶಾಸಕನಾದರೆ ಶಾಂತಿಯ ಬಂಟ್ವಾಳವನ್ನು ನಿರ್ಮಾಣ ಮಾಡಬೇಕು ಎಂಬ ಪಣತೊಟ್ಟಿದ್ದು, ಅದರಂತೆ ಕಳೆದ 5 ವರ್ಷಗಳಿಂದ ಒಂದೇ ಒಂದು ಕೋಮುಗಲಭೆ, ಕೊಲೆಗಳು ನಡೆಯದೆ ಶಾಂತಿಯ ಬಂಟ್ವಾಳ ನಿರ್ಮಾಣವಾಗಿದೆ. ಗ್ರಾಮೀಣ ಭಾಗಗಳಲ್ಲಿ ತೆರಳಿದ ಸಂದರ್ಭ ಕ್ಷೇತ್ರದ ಜನತೆ ಇದೇ ಮಾತನ್ನು ಹೇಳಿ ಮತ್ತೂಮ್ಮೆ ಗೆಲ್ಲಿಸುವ ಭರವಸೆ, ವಿಶ್ವಾಸವನ್ನು ನೀಡುತ್ತಿದ್ದಾರೆ.
Related Articles
Advertisement
ಅನಂತಾಡಿ- ಬಂಟ್ರಿಂಜ- ಉಳ್ಳಾಲ್ತಿ ಮಾಡ ರಸ್ತೆಗೆ 2 ಕೋ.ರೂ. ಮಂಜೂರಾಗಿದ್ದು, ಮಾಣಿ ಶ್ರೀ ಉಳ್ಳಾಲ್ತಿ ಕ್ಷೇತ್ರದ ರಸ್ತೆಯ ರೀತಿಯಲ್ಲೇ ಮಾದರಿ ರಸ್ತೆಯಾಗಿ ಮೇಲ್ದರ್ಜೆಗೇರಿಸಲಾಗುತ್ತದೆ. ಬಡಗಬೆಳ್ಳೂರು, ತೆಂಕಬೆಳ್ಳೂರು, ಕಳ್ಳಿಗೆ, ಅಮ್ಮುಂಜೆ, ಕರಿಯಂಗಳ ಗ್ರಾಮಗಳಿಗೆ 26.50 ಕೋ.ರೂ.ಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪ್ರಗತಿಯಲ್ಲಿದೆ ಎಂದರು.
ಈ ಸಂದರ್ಭದಲ್ಲಿ ಬಂಟ್ವಾಳ ಕ್ಷೇತ್ರ ಬಿಜೆಪಿ ಪ್ರಮುಖರು, ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರಗಳ ಪ್ರಮುಖರು, ಗ್ರಾ.ಪಂ. ಜನಪ್ರತಿನಿಧಿಗಳು, ಬೂತ್ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ದಾಖಲೆಯ 1514 ರಸ್ತೆ
ಬಂಟ್ವಾಳ ಕ್ಷೇತ್ರದ ಇತಿಹಾಸದಲ್ಲೇ ದಾಖಲೆ ಎಂಬಂತೆ 1514 ರಸ್ತೆಗಳ ನಿರ್ಮಾಣವಾಗಿದ್ದು, 318 ಧಾರ್ಮಿಕ ಕ್ಷೇತ್ರಗಳಿಗೆ ಸಂಪರ್ಕ ರಸ್ತೆ ಸೇರಿದಂತೆ ಮೂಲ ಸೌಕರ್ಯ ಒದಗಿಸುವ ಕಾರ್ಯ ಮಾಡಲಾಗಿದೆ. ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಅಮೃತ್-2ನಲ್ಲಿ 40.16 ಕೋ.ರೂ, ಒಳಚರಂಡಿ ವ್ಯವಸ್ಥೆಗೆ 56.54 ಕೋ.ರೂ.ಗಳ ಅನುದಾನ ಮಂಜೂರು ಮಾಡಲಾಗಿದೆ ಎಂದು ರಾಜೇಶ್ ನಾೖಕ್ ಅವರು ವಿವರಿಸಿದರು.