ಹೈದರಾಬಾದ್: ಸುಮಾರು ಆರು ತಿಂಗಳುಗಳಿಂದ ಕಿಡ್ನಿ ಕಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದ ತೆಲಂಗಾಣದ ನೆಲಗೊಂಡ ಜಿಲ್ಲೆಯ ವೀರಮಲ್ಲ ರಾಮಲಕ್ಷ್ಮಯ್ಯ ಅವರಿಗೆ ಹೈದರಾಬಾದ್‌ನ ಅವಾರೆ ಗ್ಲೆನೀಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಪಡಿಸಿ ಬರೋಬ್ಬರಿ 206 ಕಲ್ಲುಗಳನ್ನು ಹೊರತಗೆಯಲಾಗಿದೆ.
ಕೀ ಹೋಲ್ ಸರ್ಜಿಯ ಮೂಲಕ ಕಲ್ಲುಗಳನ್ನು ಹೊರತಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಾ. ಪೂಲಾ ನವೀನ್ ಕುಮಾರ್, “ಹಲವಾರು ಆರಂಭಿಕ ಪರೀಕ್ಷೆಗಳು ಹಾಗೂ ಅಲ್ಟ್ರಾಸೌಂಡ್ ಸ್ಕ್ಯಾನ್‌ನಿಂದಾಗಿ ಕಿಡ್ನಿಯಲ್ಲಿ ಹಲವಾರು ಕಲ್ಲುಗಳಿರುವುದು ತಿಳಿದುಬಂದಿತ್ತು. ಅವನ್ನು ಶಸ್ತ್ರಚಿಕಿತ್ಸೆಯಿಂದ ಹೊರತಗೆಯಲಾಗಿದೆ” ಎಂದು ಹೇಳಿದ್ದಾರೆ.