ವಾಷಿಂಗ್ಟನ್: ಅಮೇರಿಕ ಅಧ್ಯಕ್ಷ ಜೋ ಬೈಡನ್ 2024ರಲ್ಲಿ ನಡೆಯಲಿರುವ ಅಮೇರಿಕ ಅಧ್ಯಕ್ಷೀಯ ಚುನಾವಣೆಗೆ ಮರು ಸ್ಪರ್ಧಿಸುವ ಘೋಷಣೆ ಮಾಡಿದ್ದಾರೆ.
ಅಮೇರಿಕ ಅಧ್ಯಕ್ಷೀಯ ಚುನಾವಣೆಗೆ ಜೋ ಬೈಡನ್ ಮತ್ತೊಮ್ಮೆ ಸ್ಪರ್ಧಿಸುವುದರ ಬಗ್ಗೆ ಇತ್ತೀಚೆಗೆ ವಿಶ್ವಮಟ್ಟದಲ್ಲಿ ಬಹಳಷ್ಟು ಗಾಳಿಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಮಂಗಳವಾರ ಬೈಡನ್ ಅವರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವುದರ ಬಗ್ಗೆ ಅಧಿಕೃತವಾಗಿ ಘೋಷಿಸಿಕೊಂಡಿದ್ಧಾರೆ. ಈ ಮೂಲಕ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾ ರಂತೆ ಬೈಡನ್ ಅವರೂ ಮರು ಚುನಾವಣೆಯಲ್ಲಿ ಸ್ಪರ್ಧಿಸುವುದು ಪಕ್ಕಾ ಆದಂತಾಗಿದೆ.
ʻಎಲ್ಲಾ ಪೀಳಿಗೆಯೂ ಪ್ರಜಾಪ್ರಭುತ್ವದ ಪರವಾಗಿ ನಿಲ್ಲಬೇಕಾಗಿದೆ. ನಮ್ಮ ಮೂಲಭೂತ ಸ್ವಾತಂತ್ರ್ಯಕ್ಕಾಗಿ. ನಾನು ಇದು ನಮ್ಮದೆಂದು ನಂಬುತ್ತೇನೆʼ ಎಂದು ಬೈಡನ್ ಟ್ವೀಟ್ ಮಾಡಿದ್ದಾರೆ.
ʻಇದಿಕ್ಕಾಗಿ ನಾನು ಅಮೇರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ. ನನ್ನೊಂದಿಗೆ ಜೊತೆಗೂಡಿ. ನಾವು ಇದನ್ನು ಪೂರೈಸೋಣʼ ಎಂದು ಅವರು ಹೇಳಿದ್ದಾರೆ.
Related Articles
ಅದಲ್ಲದೇ ಜೋ ಬೈಡನ್ ಅವರು ಅಮೇರಿಕ ಕಂಡಂತಹಾ ಅತ್ಯಂತ ಹಿರಿಯ ಅಧ್ಯಕ್ಷ ಎಂಬ ಇತಿಹಾಸ ಬರೆದಿರುವ ಬೈಡನ್ ಮಂಗಳವಾರ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ ʻಲೆಟ್ಸ್ ಫಿನಿಷ್ ದ ಜಾಬ್ʼ ಎಂಬ ಅಭಿಯಾನವನ್ನೂ ಆರಂಭಿಸಿದ್ದಾರೆ.
2 ನೇ ಅವಧಿ ಮುಕ್ತಾಯದ ವೇಳೆ ಬೈಡನ್ ಅವರಿಗೆ 86 ವರ್ಷ ವಯಸ್ಸಾಗಲಿದ್ದು, ಅವರ ಮರು ಸ್ಪರ್ಧೆ ಬಗ್ಗೆ ಅಮೇರಿಕದಾದ್ಯಂತ ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: Thiruvananthapuram-Kasaragod ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ