Advertisement

Hyundai Alcazar 2024: ಭಾರತದ ಮಾರುಕಟ್ಟೆಗೆ ಹುಂಡೈ ಅಲ್ಕಜಾರ್‌ ಬಿಡುಗಡೆ

11:26 AM Sep 10, 2024 | Team Udayavani |

ಬೆಂಗಳೂರು: ಹುಂಡೈ ಮೋಟಾರ್‌ ಇಂಡಿಯಾ ಲೀ ದಿ ಬೋಲ್ಡ್‌ ನ್ಯೂ ಹುಂಡೈ ಅಲ್ಕಜಾರ್‌ ಅನ್ನು ಸೋಮವಾರ(ಸೆ.09) ಬಿಡುಗಡೆ ಮಾಡಿದೆ. ಗುರುಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ 14.99 ಲಕ್ಷ ರೂ. ಬೆಲೆಯೊಂದಿಗೆ ಆರಂಭಗೊಳ್ಳುವ 1.5 1 ಟರ್ಬೋ ಜಿಡಿಐ ಪೆಟ್ರೋಲ್‌ ಕಾರು, 15.99 ಲಕ್ಷ ರೂ.ಗಳ 1.5 1 ಯು2 ಸಿಆರ್‌ಡಿಐ ಡೀಸೆಲ್‌ ಕಾರನ್ನು ಬಿಡುಗಡೆ ಮಾಡಲಾಯಿತು.

Advertisement

ಗ್ರಾಹಕರ ಪ್ರಯಾಣದ ಅನುಭವವನ್ನು ಮರು ವ್ಯಾಖ್ಯಾನಿಸಬಲ್ಲ ಶಕ್ತಿಯಿರುವ 6 ಮತ್ತು 7 ಆಸನಗಳ ಈ ಪ್ರೀಮಿಯಂ ಕಾರುಗಳು ಪ್ರಯಾಣಿಕರಿಗೆ ಆರಾಮ ಮತ್ತು ಸೌಕರ್ಯ, ತಂತ್ರಜ್ಞಾನ, ಶಕ್ತಿ ಮತ್ತು ಸುಧಾರಿತ ಸೌಕರ್ಯಗಳನ್ನು ಈ ಕಾರು ಹೊಂದಿದೆ.

ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಹುಂಡೈ ಮೋಟಾರ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಉನ್ಸೂ ಕಿಮ್‌, ನಮ್ಮ ವಿಭಿನ್ನ ಮತ್ತು ವೈವಿಧ್ಯಮಯ ಉತ್ಪನ್ನಗಳ ಮೂಲಕ ಹುಂಡೈ ಮೋಟಾರ್‌ ಇಂಡಿಯಾ ಲೀ ಸಂಸ್ಥೆಯು ಗ್ರಾಹಕರ ಅನುಭವವನ್ನು ಉತ್ತಮ ಪಡಿಸಲು ಬದ್ಧರಾಗಿದ್ದೇವೆ.

content-img

ಗ್ರಾಹಕರ ನಿರೀಕ್ಷೆಯನ್ನು ಮೀರಿ ಅವರಿಗೆ ಸೇವೆಯನ್ನು ನೀಡುವ ಇಚ್ಚೆಯೊಂದಿಗೆ ಅವರ ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸಲು ನಾವು ಸದಾ ಕಾರ್ಯಪ್ರವೃತ್ತರಾಗಿರುತ್ತೇವೆ ಎಂದರು.

Advertisement

ಸುರಕ್ಷತಾ ಸೌಲಭ್ಯಗಳು, ವಿಶೇಷ ಸೌಕರ್ಯಗಳು ಈ ಕಾರನ್ನು ಭಿನ್ನವಾಗಿ ರೂಪಿಸಿದೆ ಎಂದು ಹುಂಡೈ ಇಂಡಿಯಾ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.