ವಾಷಿಂಗ್ಟನ್: ಕೌಶಲಯುತ ವೃತ್ತಿಪರರಿಗೆ ನೀಡಲಾಗುವ ಎಚ್-1ಬಿ ವೀಸಾಗಳಿಗಾಗಿ 2024ನೇ ಸಾಲಿಗೆ ಆರಂಭಿಕ ನೋಂದಣಿ ಮಾ. 1ರಿಂದ ಮಾ. 17ರ ವರೆಗೆ ನಡೆಯಲಿದೆ ಎಂದು ಅಮೆರಿಕದ ಸಿಟಿಜನ್‌ಶಿಪ್ ಆ್ಯಂಡ್ ಇಮಿಗ್ರೇಶನ್ ಸರ್ವೀಸಸ್ (ಯುಎಸ್‌ಸಿಐಎಸ್) ಪ್ರಕಟಿಸಿದೆ.
Advertisement
ಅರ್ಹ ವೃತ್ತಿಪರರು ಮತ್ತು ಅವರ ಪ್ರತಿನಿಧಿಗಳು ಈ ಅವಧಿಯಲ್ಲಿ ಆನ್‌ಲೈನ್ ಎಚ್-1ಬಿ ನೋಂದಣಿ ವ್ಯವಸ್ಥೆಯ ಮೂಲಕ ತಮ್ಮ ಅರ್ಜಿಯನ್ನು ಭರ್ತಿಗೊಳಿಸಿ ಸಲ್ಲಿಸಬಹುದಾಗಿದೆ ಎಂದು ಸೂಚಿಸಲಾಗಿದೆ. ಯುಎಸ್‌ಸಿಐಎಸ್ ಪ್ರತೀ ನೋಂದಣಿಗೆ ಕ್ರಮಸಂಖ್ಯೆ ನೀಡಲಿದ್ದು, ಇದರ ಮೂಲಕ ನೋಂದಣಿ ಸ್ಥಿತಿಗತಿ ತಿಳಿಯಬಹುದು.