Advertisement
ಅರ್ಥಾತ್, ಭಾರತಕ್ಕೆ ಐಸಿಸಿ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗುವ ಯೋಗ ಇಲ್ಲ ಎಂಬುದು 2023ರಲ್ಲೂ ಸಾಬೀತಾಯಿತು. ಇನ್ನು 2024ರತ್ತ ಮುಖ ಮಾಡುವುದೊಂದೇ ದಾರಿ. ಇದು ಟಿ20 ವಿಶ್ವಕಪ್ ವರ್ಷ. ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಭಾರತ 2007ರ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಬಳಿಕ ಮತ್ತೆ ಚಾಂಪಿಯನ್ ಪಟ್ಟ ಅಲಂಕರಿಸಿಲ್ಲ. ಈ ಕೊರತೆ 2024ರಲ್ಲಾದರೂ ನೀಗೀತೇ ಎಂಬುದು ಕ್ರಿಕೆಟ್ ಅಭಿಮಾನಿಗಳ ಕಾತರ, ನಿರೀಕ್ಷೆ.
ಅಫ್ಘಾನ್ ವಿರುದ್ಧ ಟಿ20
ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್‌ಟೌನ್‌ನಲ್ಲಿ ನ್ಯೂ ಇಯರ್ ಟೆಸ್ಟ್ ಆಡುವ ಮೂಲಕ ಭಾರತ 2024ರ ಋತುವನ್ನು ಆರಂಭಿಸಲಿದೆ (ಜ. 3-7). ಬಳಿಕ ತವರಲ್ಲಿ ಅಫ್ಘಾನಿಸ್ಥಾನ ವಿರುದ್ಧ 3 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ (ಜ. 11-17). ಇದು ವಿಶ್ವಕಪ್‌ಗ್ೂ ಮುನ್ನ ಭಾರತ ಆಡಲಿರುವ ಕೊನೆಯ ಟಿ20 ಸರಣಿ.
ಇಂಗ್ಲೆಂಡ್ ಆಗಮನ
ಜ. 25ರಿಂದ ಮಾ. 11ರ ತನಕ ಇಂಗ್ಲೆಂಡ್ ಕ್ರಿಕೆಟ್ ತಂಡ ಭಾರತ ಪ್ರವಾಸ ಕೈಗೊಂಡು 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.
ಐಪಿಎಲ್ ಸಮರ
ಮಾರ್ಚ್ ಅಂತ್ಯದಿಂದ ಮೇ ಕೊನೆಯ ತನಕ ಐಪಿಎಲ್ ಸಡಗರ. ಇದರ ವೇಳಾಪಟ್ಟಿ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ.
ಟಿ20 ವಿಶ್ವಕಪ್
ಈ ಬಾರಿಯ ಟಿ20 ವಿಶ್ವಕಪ್ ಪಂದ್ಯಾವಳಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಆತಿಥ್ಯದಲ್ಲಿ ಜೂ. 4ರಿಂದ ಜೂ. 30ರ ವರೆಗೆ ನಡೆಯುಲಿದೆ. ಇಲ್ಲಿ ಕಣಕ್ಕಿಳಿಯುವ ತಂಡಗಳಲ್ಲಿ ಭಾರತವೂ ಒಂದು.
ಶ್ರೀಲಂಕಾ ಸರಣಿ
ಟಿ20 ವಿಶ್ವಕಪ್ ಮುಗಿದ ಕೂಡಲೇ ಜುಲೈಯಲ್ಲಿ ಭಾರತ ತಂಡ ಶ್ರೀಲಂಕಾಕ್ಕೆ ತೆರಳಿ 3 ಪಂದ್ಯಗಳ ಏಕದಿನ ಹಾಗೂ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ.
ಬಾಂಗ್ಲಾ, ನ್ಯೂಜಿಲ್ಯಾಂಡ್ ಆಗಮನ
ಸೆಪ್ಟಂಬರ್, ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಭಾರತಕ್ಕೆ ಆಗಮಿಸಲಿವೆ. ಬಾಂಗ್ಲಾ ವಿರುದ್ಧ 3 ಟಿ20 ಮತ್ತು 2 ಟೆಸ್ಟ್; ನ್ಯೂಜಿಲ್ಯಾಂಡ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.
ಆಸ್ಟ್ರೇಲಿಯ ಪ್ರವಾಸ
ವರ್ಷಾಂತ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಕ್ಕೆ ತೆರಳಿ 5 ಟೆಸ್ಟ್ ಪಂದ್ಯಗಳನ್ನು ಆಡಲಿದೆ.