Advertisement
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ 136 ಕಿರಿಯ ಎಂಜಿನಿಯರ್, 288 ಸಹಾಯಕ ಎಂಜಿನಿಯರ್ ಮತ್ತು 24 ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಕರ್ನಾಟಕ ಲೋಕಸೇವಾ ಆಯೋಗವು ಕಳೆದ ಜ.31ರಂದು ಅಂತಿಮಪಟ್ಟಿಯ ಅಧಿಸೂಚನೆ ಹೊರಡಿಸಿದೆ.
Related Articles
Advertisement
ಪಂಚಾಯತ್‌ರಾಜ್ ಎಂಜಿನಿಯ ರಿಂಗ್ ಇಲಾಖೆಯಲ್ಲಿ ಐವರು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳ ನೇರ ನೇಮಕಾತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಕಳೆದ 24ರಂದು ಸೂಚಿಸಲಾಗಿದೆ ಎಂದರು.
256 ಪಿಡಿಒ, 220 ಕಾರ್ಯದರ್ಶಿ ಸೇರಿ ವಿವಿಧ ಹುದ್ದೆಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿ ಅಗತ್ಯವಾದ 40 (ಇವುಗಳಲ್ಲಿ 8 ಹು¨ªೆಗಳು ಕಲ್ಯಾಣ ಕರ್ನಾಟಕ) ಗ್ರೂಪ್ ಎ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಾದ ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ಕಾರ್ಯದರ್ಶಿಗಳನ್ನು ಭರ್ತಿ ಮಾಡಲು ಲೋಕಸೇವಾ ಆಯೋಗವು ಫೆ. 26ರಂದು ಅಧಿಸೂಚನೆ ಹೊರಡಿಸಿದೆ. ಗ್ರಾಮ ಪಂಚಾಯತ್‌ಗಳಲ್ಲಿ ಖಾಲಿ ಇರುವ 256 ಪಂಚಾಯತ್ ಅಭಿವೃದ್ಧಿ ಅಧಿಕಾರಿ (106 ಹೈ.ಕ), 220 ಗ್ರಾಮ ಪಂಚಾಯತ್ ಕಾರ್ಯದರ್ಶಿ (ಗ್ರೇಡ್-1) (85 ಹೈ.ಕ), 343 ಗ್ರಾಮ ಪಂಚಾ¿ಯತ್ ಕಾರ್ಯದರ್ಶಿ (ಗ್ರೇಡ್-2) (52 ಹೈ.ಕ) ಮತ್ತು 105 ದ್ವಿತೀಯ ದರ್ಜೆ ಲೆಕ್ಕ ಸಹಾಯಕ (50 ಹೈ.ಕ) ಹುದ್ದೆಗಳನ್ನು ನೇರವಾಗಿ ತುಂಬಲು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಶೀಘ್ರದಲ್ಲೇ ಸೂಚಿಸಲಾಗುವುದು ಎಂದು ಪ್ರಿಯಾಂಕ್ ಹೇಳಿದರು. ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಗಳಲ್ಲಿ ಖಾಲಿ ಇರುವ 100 ಪ್ರಥಮ ದರ್ಜೆ ಸಹಾಯಕರು, 200 ದ್ವಿತೀಯ ದರ್ಜೆ ಸಹಾಯಕರು ಮತ್ತು ಕಲ್ಯಾಣ ಕರ್ನಾಟಕ ವೃಂದದ 48 ಪ್ರಥಮ ದರ್ಜೆ ಸಹಾಯಕರು ಹಾಗೂ 109 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ತುಂಬಿಕೊಳ್ಳಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.