Advertisement
ಇಂತಹ ದೇಶ 2022ರ ಫಿಫಾ ಫುಟ್‌ಬಾಲ್ ವಿಶ್ವಕಪ್ ಅನ್ನು ಆಯೋಜಿಸಲಿದೆ. ಇದಕ್ಕೂ ಮುನ್ನ ಫಿಫಾ ವಿಶ್ವಕಪ್ ಆಯೋಜಿಸಿರುವ ಅತಿ ಚಿಕ್ಕ ರಾಷ್ಟ್ರವೆಂದರೆ ಸ್ವಿಜರೆಲಂಡ್, ಅದು 1954ರಲ್ಲಿ. ಊಹಿಸಿ…2018ರಲ್ಲಿ ವಿಶ್ವದ ಬೃಹತ್ ದೇಶ ರಷ್ಯಾ ಫುಟ್‌ಬಾಲ್ ವಿಶ್ವಕಪ್ ನಡೆಸಿದೆ. 2022ರಲ್ಲಿ ವಿಶ್ವದ 32ನೇ ಪುಟ್ಟ ದೇಶ ಎನಿಸಿಕೊಂಡಿರುವ ಕತಾರ್ ನಡೆಸಲಿದೆ. ಕತಾರ್ ವಿಶ್ವಕಪ್ ಆಯೋಜನೆ ಅವಕಾಶ ಪಡೆದಾಗ ಹಲವಾರು ಅನುಮಾನಗಳು, ಪ್ರಶ್ನೆಗಳು, ತಕರಾರುಗಳು ಹುಟ್ಟಿಕೊಂಡವು. ಅದರಲ್ಲಿ ಒಂದು, ಬರೀ ಕರ್ನಾಟಕದ ಕಾಲು ಭಾಗವಿರುವ ಈ ದೇಶ ವಿಶ್ವಕಪ್ ನಡೆಸುವಷ್ಟು ವಿಸ್ತಾರ ಹೊಂದಿದೆಯೇ ಎನ್ನುವುದು.ಇಷ್ಟು ಪುಟ್ಟ ರಾಷ್ಟ್ರಕ್ಕೆ ಸಾಧ್ಯವೇ?
Related Articles
ಬಹುತೇಕ ಮರಳುಗಾಡಾಗಿರುವ ಕತಾರ್‌ನಲ್ಲಿ ಪ್ರಾಕೃತಿಕವಾಗಿ ನೋಡಲು ಬಹಳಷ್ಟಿಲ್ಲ. ಆದರೆ ಮನುಷ್ಯ ನಿರ್ಮಿತ ಕಟ್ಟಡಗಳು, ಸಂಗ್ರಾಹಾಗಾರಗಳು ಇಂತಹವನ್ನೇ ನೋಡಬೇಕಾಗುತ್ತದೆ. ಕೇವಲ ಒಂದೆರಡು ದಿನದಲ್ಲಿ ಇಡೀ ಕತಾರನ್ನು ಸುತ್ತಬಹುದು. ಇದನ್ನು ಗಣಿಸಿದರೆ ಪ್ರವಾಸೋದ್ಯಮದ ದೃಷ್ಟಿಯಿಂದಲೂ ಕತಾರ್ ಯಶಸ್ವಿಯಾಗಲಾರದು.
Advertisement
ಬಿಸಿಯುಗುಳುವ ನಾಡುಅರಬ್ ರಾಷ್ಟ್ರಗಳು ಸಾಮಾನ್ಯವಾಗಿ ಬಿಸಿಯುಗುಳುವ ನಾಡಾಗಿರುತ್ತವೆ. ಅದಕ್ಕೆ ಕತಾರ್ ಕೂಡ ಹೊರತಾಗಿಲ್ಲ. ಈ ರಾಷ್ಟ್ರಕ್ಕೆ ವಿಶ್ವಕಪ್ ಆಯೋಜನೆ ಅವಕಾಶ ನೀಡಿದ ನಂತರ ಅಂದಿನ ಫಿಫಾ ಅಧ್ಯಕ್ಷ ಸೆಪ್ ಬ್ಲಾಟರ್ ಕೂಡ ತಮ್ಮ ತೀರ್ಮಾನ ತಪ್ಪಾಯಿತು. ಅಲ್ಲಿನ ವಿಪರೀತ ಬಿಸಿಯಲ್ಲಿ ವಿಶ್ವಕಪ್ ಆಯೋಜನೆ ಕಷ್ಟ ಎಂದು ಹೇಳಿದ್ದರು. ಕತಾರ್‌ನಲ್ಲಿ ಸಾಮಾನ್ಯವಾಗಿ 35ರಿಂದ 42 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಧಗೆಯಿರುತ್ತದೆ. ಅದರಲ್ಲೂ ವಿಶ್ವಕಪ್ ಸಾಮಾನ್ಯವಾಗಿ ನಡೆಯುವ ಜೂನ್, ಜುಲೈನಲ್ಲಿ ಉಷ್ಣತೆ ಪ್ರಮಾಣ ಗರಿಷ್ಠ ಮಟ್ಟದಲ್ಲಿರುತ್ತದೆ. ಇದನ್ನೆಲ್ಲ ನೋಡಿಯೇ ಇದೊಂದು ವಿಶ್ವಕಪ್ ಅನ್ನು ನವೆಂಬರ್, ಡಿಸೆಂಬರ್‌ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ! ಆದರೆ ಇದು ಯೂರೋಪ್‌ನ ವಿವಿಧ ಲೀಗ್ ವೇಳಾಪಟ್ಟಿಗೆ ಭಾರೀ ಹೊಡೆತ. ಅವೆಲ್ಲ ತಮ್ಮ ವೇಳಾಪಟ್ಟಿಯನ್ನೇ ಬದಲಿಸಿಕೊಳ್ಳಬೇಕಾದ ಒತ್ತಡ ಸಿಲುಕಿ ಈಗಾಗಲೇ ವಿರೋಧ ಶುರು ಮಾಡಿವೆ. ವಿಪರೀತ ಧಗೆಯ ಕಾರಣ ಪೂರ್ಣ ಮೈದಾನಗಳಿಗೆ ಹವಾನಿಯಂತ್ರಕ ಅಳವಡಿಸಲು ಕತಾರ್ ವ್ಯವಸ್ಥಾಪಕರು ತೀರ್ಮಾನಿಸಿದ್ದಾರೆ. ಆಟಗಾರರು ಬಚಾವಾಗುತ್ತಾರೆ. ಆದರೆ ಪ್ರವಾಸಿಗರು? ಮೈದಾನಗಳ ಕೊರತೆ
ಯಾವುದೇ ಫಿಫಾ ವಿಶ್ವಕಪ್ ನಡೆಸಲು ಕನಿಷ್ಠ 12 ಮೈದಾನಗಳಿರಬೇಕಾಗುತ್ತದೆ. ಆದರೆ ಕತಾರ್‌ನಲ್ಲಿ ಸದ್ಯ ಸಿದ್ಧವಾಗಿರುವುದು ಬರೀ 5 ಮಾತ್ರ. ಇನ್ನು 4 ಮೈದಾನ ಮಾತ್ರ ನಿರ್ಮಾಣಗೊಳ್ಳುವ ಸಾಧ್ಯತೆಯಿದೆ. 12 ಮೈದಾನ ನಿರ್ಮಾಣ ವಿಪರೀತ ದುಬಾರಿಯಾಗಿರುವುದರಿಂದ, ತನಗೆ 9 ಮೈದಾನಗಳಲ್ಲಿ ಮಾತ್ರ ಕೂಟ ನಡೆಸಲು ಅವಕಾಶ ಕೊಡಬೇಕೆಂದು ಕತಾರ್ ಸಂಘಟಕರು ಫಿಫಾವನ್ನು ಕೇಳಿಕೊಂಡಿದ್ದಾರೆ. 32 ತಂಡಗಳನ್ನು 9 ಮೈದಾನಗಳಲ್ಲಿ ಹಂಚಿ ಆಡಿಸುವುದು ಕಷ್ಟವಲ್ಲ. ಆದರೆ ಅವುಗಳಿಗೆ ಅಭ್ಯಾಸ ಮಾಡಲು ಎಲ್ಲಿ ಸ್ಥಳಾವಕಾಶ ಮಾಡಿಕೊಡುತ್ತಾರೆ? ರಷ್ಯಾದಂತಹ ರಾಷ್ಟ್ರಗಳಲ್ಲಿ ಅಭ್ಯಾಸಕ್ಕೆ ಪ್ರತ್ಯೇಕ ಮೈದಾನ ಕೊಡಬಲ್ಲಷ್ಟು ಸ್ಥಳಾವಕಾಶವಿರುತ್ತದೆ. ಈ ಕೊರತೆಯೂ ಕತಾರನ್ನು 2022ರಲ್ಲಿ ಕಾಡುವ ಸಾಧ್ಯತೆಯಿದೆ. ವಿವಾದಗಳ್ಳೋ, ವಿವಾದಗಳು
2010ರಲ್ಲಿ ಕತಾರ್ ಬಹುಮತದಿಂದ ಅಮೆರಿಕವನ್ನೇ ಹಿಂದಿಕ್ಕಿ ವಿಶ್ವಕಪ್ ಆತಿಥ್ಯ ಪಡೆದುಕೊಂಡಿತು. ಅಲ್ಲಿಂದ ಶುರುವಾದ ವಿವಾದ ಫಿಫಾ ಅಂದಿನ ಅಧ್ಯಕ್ಷ ಸೆಪ್‌ಬ್ಲಾಟರ್ ಪದಚ್ಯುತಿಯಲ್ಲಿ ಮುಕ್ತಾಯವಾಯಿತು. ಅಮೆರಿಕ, ಸ್ವಿಜರೆಲಂಡ್, ಇಂಗ್ಲೆಂಡ್‌ಗಳು ವ್ಯಾಪಕ ತನಿಖೆ ನಡೆಸಿ ಕತಾರ್‌ಗೆ ಆತಿಥ್ಯ ನೀಡಲು ಲಂಚ ಪಡೆಯಲಾಗಿದೆ, ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ದಾಖಲೆ ಸಮೇತ ಆರೋಪಿಸಿದವು. ಆಫ್ರಿಕಾ ದೇಶಗಳ ಹಲವು ನಾಯಕರ ತಲೆದಂಡವಾಯಿತು. ಅಷ್ಟು ಮಾತ್ರ ಸಾಲದೆಂಬಂತೆ ಕತಾರ್ ಸಂಘಟನಾ ಸಮಿತಿಯ ಸದಸ್ಯೆಯೊಬ್ಟಾಕೆ ಆಫ್ರಿಕಾ ಫುಟ್‌ಬಾಲ್ ಸಂಸ್ಥೆಗಳಿಗೆ ಲಂಚ ನೀಡಲಾಗಿದೆ ಎಂದು ಹೇಳಿದರು. ಕಡೆಗೆ ಆಕೆ ತನ್ನ ಹೇಳಿಕೆಯನ್ನು ಹಿಂಪಡೆದರು. ಈ ಬಗ್ಗೆ ಫಿಫಾ ತನಿಖೆ ನಡೆಸಿ, ಕತಾರ್ ಯಾವ ತಪ್ಪೂ ಮಾಡಿಲ್ಲ ಎಂದು ಹೇಳಿತು. ಆದರೂ ಇದನ್ನು ನಂಬಲು ಅಮೆರಿಕ, ಇಂಗ್ಲೆಂಡ್ ಸಿದ್ಧವಿಲ್ಲ. ಫಿಫಾ ತನಿಖೆಯ ಮೇಲೆಯೇ ಅನುಮಾನ ವ್ಯಕ್ತಪಡಿಸಿವೆ. ಒಂದು ಹಂತದಲ್ಲಿ ಕತಾರ್ ಆತಿಥ್ಯ ಕಳೆದುಕೊಳ್ಳಲಿದೆ ಎಂಬ ಭೀತಿಯುಂಟಾಗಿತ್ತು. ಇದನ್ನೆಲ್ಲ ಮೀರಿ ಕತಾರ್ ಆತಿಥ್ಯ ಉಳಿಸಿಕೊಂಡಿದೆ. ಕಾರ್ಮಿಕರ ಸಾವು
ಇದರ ಮಧ್ಯೆಯೇ ಕತಾರ್‌ನಲ್ಲಿ ಮೈದಾನ ನಿರ್ಮಾಣದ ವೇಳೆ ಮಾನವಸಂಪನ್ಮೂಲದ ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಲಾಯಿತು. 2010ರ ನಂತರ 522 ನೇಪಾಳಿ, 700 ಭಾರತೀಯ ಕಾರ್ಮಿಕರು ಮೃತಪಟ್ಟರು. ಅಲ್ಲದೇ ಪ್ರತಿವರ್ಷ ಅಲ್ಲಿ ಸರಾಸರಿ 250 ಭಾರತೀಯ ಕಾರ್ಮಿಕರು ಸಾಯುತ್ತಿದ್ದಾರೆಂದು ಇಂಗ್ಲೆಂಡ್‌ನ ಗಾರ್ಡಿಯನ್ ಪತ್ರಿಕೆ ಆರೋಪಿಸಿತು. ಕಾರ್ಮಿಕರ ದಾಖಲೆಗಳನ್ನು ಆ ದೇಶ ಹಿಡಿದುಕೊಂಡಿದೆ, ವಿಪರೀತ ದುಡಿಸುತ್ತಿದೆ, ಸಮಯಕ್ಕೆ ಸರಿಯಾಗಿ ಹಣ ಕೊಡುತ್ತಿಲ್ಲವೆಂದು ಮಾಧ್ಯಮಗಳು ಆರೋಪಿಸಿದವು. ಈ ಎಲ್ಲ ಆರೋಪಗಳನ್ನು ಜೀರ್ಣ ಮಾಡಿಕೊಂಡೇ ಕತಾರ್ ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿದೆ. ವಿಷಕಂಠನಾದ ಕತಾರ್
2017ರಲ್ಲಿ ಕತಾರ್ ಅಕ್ಷರಶಃ ಒಬ್ಬಂಟಿಯಾಯಿತು. ಆ ದೇಶ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುತ್ತಿದೆ ಎಂದು ಆರೋಪಿಸಿ ಸೌದಿ ಅರೇಬಿಯ, ಈಜಿಪ್ಟ್, ಬಹೆÅàನ್, ಈಜಿಪ್ಟ್ಗಳು ಕತಾರ್‌ನೊಂದಿಗೆ ರಾಜತಾಂತ್ರಿಕ ಸಂಬಂಧ ಕಡಿದುಕೊಂಡು ದಿಗ್ಬಂಧನ ಹೇರಿದವು. ಕತಾರ್‌ಗೆ ದಿನವಹಿ ಆಹಾರಧಾನ್ಯಗಳು ಬರುವ ದಾರಿಗಳು ಬಂದಾದವು. ಕಡೆಗೆ ಅದು ಪ್ರತಿದಿನ ವಿಮಾನದಿಂದ ಆಹಾರ ಧಾನ್ಯವನ್ನು ತನ್ನ ನಾಗರಿಕರಿಗೆ ಪೂರೈಸುವ ದುಸ್ಥಿತಿ ಎದುರಾಯಿತು. ಇಷ್ಟಾದರೂ ಕತಾರ್ ಇವನ್ನೆಲ್ಲ ಸಹಿಸಿಕೊಂಡಿದೆ. ಹೇಗೆ ಗೊತ್ತಾ? ಜಗತ್ತಿನಲ್ಲೇ ಅತಿಹೆಚ್ಚು ತೈಲ ಸಂಗ್ರಹವಿರುವುದು ಕತಾರ್‌ನಲ್ಲೇ, ಜಗತ್ತಿನಲ್ಲಿ ಅತಿಹೆಚ್ಚು ಅನಿಲ ಗಣಿಗಳಿರುವುದೂ ಇಲ್ಲೇ! ಹಾಗಾಗಿ ಇಲ್ಲಿ ಹಣಕ್ಕೆ ಕೊರತೆಯಿಲ್ಲ. ಜನಸಂಖ್ಯೆಯೂ ಕಡಿಮೆಯಿರುವುದರಿಂದ ಇಲ್ಲಿನ ಜನರಿಗೆ ಬಡತನ ಎಂದರೇನೆಂದು ಗೊತ್ತಿಲ್ಲ. ಜಗತ್ತಿನಲ್ಲೇ ಅತಿಹೆಚ್ಚು ತಲಾ ಆದಾಯ ಹೊಂದಿರುವ ರಾಷ್ಟ್ರ ಇದೇ. ಪುಟ್ಟ ರಾಷ್ಟ್ರವಾದರೂ ಒಟ್ಟು ದೇಶೀಯ ಉತ್ಪನ್ನದಲ್ಲಿ ವಿಶ್ವದಲ್ಲೇ 51ನೇ ಸ್ಥಾನ ಹೊಂದಿದೆ. ತನ್ನ ಹಣ ಬಲದಿಂದಲೇ ತನಗೆ ಎದುರಾಗಿ ನಿಂತಿರುವ ಎಲ್ಲ ಸವಾಲುಗಳಿಗೆ ಕತಾರ್ ಎದೆಯೊಡ್ಡಿಕೊಂಡಿದೆ. ತೈಲಬಾವಿಗಳಿಂದ ಹಣವನ್ನು ಮೊಗೆದು ಮೊಗೆದು 2022ರ ವಿಶ್ವಕಪ್ಪನ್ನೂ ಯಶಸ್ವಿಯಾಗಿಸುವ ನಂಬಿಕೆಯಲ್ಲಿದೆ. -ನಿರೂಪ