Advertisement

ಕಾಮನ್‌ವೆಲ್ತ್‌ ಗೇಮ್ಸ್‌: ಚಾನು ತೂಕ ವಿಭಾಗ ಬದಲು

11:07 PM Feb 15, 2022 | Team Udayavani |

ಹೊಸದಿಲ್ಲಿ: ಕಳೆದ ವರ್ಷ ನಡೆದ ಟೋಕಿಯೊ ಒಲಿಂಪಿಕ್ಸ್‌ ನಲ್ಲಿ 49 ಕೆಜಿಯ ತೂಕ ವಿಭಾಗದಲ್ಲಿ ಸ್ಪರ್ಧಿಸಿ ಮೀರಾಬಾಯಿ ಚಾನು ಬೆಳ್ಳಿ ಗೆದ್ದಿದ್ದರು. ಇದೊಂದು ಐತಿಹಾಸಿಕ ಸಾಧನೆ.

Advertisement

ಇದೇ ವರ್ಷ ಇಂಗ್ಲೆಂಡ್‌ನ‌ಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ತೂಕ ವಿಭಾಗವನ್ನು ಬದಲಿಸುವ ನಿರ್ಧಾರ ಮಾಡಿದ್ದಾರೆ. ಪ್ರಸ್ತುತ 55 ಕೆಜಿ ವಿಭಾಗಕ್ಕೆ ಬದಲಿಸಿಕೊಂಡರೆ ಚಿನ್ನದ ಪದಕಗಳನ್ನು ಹೆಚ್ಚಿಸಿಕೊಳ್ಳಬಹುದು ಎಂಬ ನಿರೀಕ್ಷೆ ಅವರದ್ದಾಗಿದೆ.

ಇದನ್ನೂ ಓದಿ:ಐಪಿಎಲ್‌ನಲ್ಲಿ ಕೋಟಿ ಸಿಗುತ್ತಿದ್ದಂತೆ ಪಾಕಿಸ್ಥಾನ ಲೀಗ್‌ ತೊರೆದ ಹೇಲ್ಸ್‌

ವಿಶೇಷವೆಂದರೆ ಟೋಕಿಯೊ ಒಲಿಂಪಿಕ್ಸ್‌ಗೂ ಮುನ್ನ ಚಾನು 48 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. 2017ರ ವಿಶ್ವಕಪ್‌ನಲ್ಲಿ ಅವರು ಇದೇ ವಿಭಾಗದಲ್ಲಿ ಚಿನ್ನವನ್ನೇ ಗೆದ್ದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next