Advertisement

2021 ಸಂಘಟನೆಯ ವರ್ಷ-ಹೋರಾಟದ ವರ್ಷ: ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ: ಡಿಕೆ ಶಿವಕುಮಾರ್

01:28 PM Jan 01, 2021 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಯಾವಾಗ ಇಳೀತಿರಿ ಅಂತ ನಾವು  ಕೇಳಿಲ್ಲ. ಇನ್ನೂ ಎರಡು ವರ್ಷ ನಾನೇ ಸಿಎಂ ಎಂದು ಹೇಳಿ ಅವರೇ ಸೆಲ್ಫ್ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ. ಬಿಜೆಪಿ ಶಾಸಕರು ಸಹ ಮಾತನಾಡುತ್ತಿದ್ದಾರೆ. ಇದನ್ನು  ನೋಡಿದರೆ ಬಿಜೆಪಿಯಲ್ಲಿ ಏನೋ ನಡೆಯುತ್ತಿದೆ ಎನ್ನುವುದು ಗೊತ್ತಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದರು.

Advertisement

ಹೊಸ ವರ್ಷದ ಹಿನ್ನಲೆಯಲ್ಲಿ ರಾಜ್ಯದ ಜನತೆಗೆ ಶುಭಾಶಯ ತಿಳಿಸಿ ಸದಾಶಿವನಗರದಲ್ಲಿ ಮಾತನಾಡಿದ ಅವರು, ಕಳೆದ ವರ್ಷ ನೆಮ್ಮದಿ ಮತ್ತು ಆರೋಗ್ಯಕ್ಕೆ ಸಂಕಟವಾಗಿತ್ತು. ಅವೆಲ್ಲಾ ನಿವಾರಣೆ ಆಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಶಾಲೆ ಮುಚ್ಚಬೇಕು ಅಂತ ನಾನು ಹೇಳುವುದಿಲ್ಲ. ಶಾಲೆಗೆ ಬಹಳ ದಿನ ಬ್ರೇಕ್ ಹಾಕಬಾರದು. ಇದರಿಂದ ಮಕ್ಕಳ ವರ್ತನೆ ಬದಲಾಗುತ್ತೆ. ಮಾತ್ರವಲ್ಲದೆ ಗುಣಮಟ್ಟದ ಶಿಕ್ಷಣದ ಮೇಲೆ ಸಮಸ್ಯೆ ಆಗುತ್ತದೆ ಎಂದರು.

ಕೋವಿಡ್ ನಿಯಮ ಪಾಲನೆ ಮಾಡಿಯೇ ಶಾಲಾ-ಕಾಲೇಜು ತೆರೆಯಲಿ. ಇಲ್ಲ ಅಂದ್ರೆ ವಿದ್ಯಾರ್ಥಿಗಳ ಪ್ರಗತಿ ಮೇಲೆ ದುಷ್ಪರಿಣಾಮ ಬೀರುತ್ತದೆ.  ಬ್ರಿಟನ್ ರೂಪಾಂತರ ಹೊಂದಿದ ಕೋವಿಡ್ ವಿಚಾರದಲ್ಲಿ ಸರ್ಕಾರಕ್ಕೆ ಸಾಮಾನ್ಯ ಜ್ಞಾನ ಇರಬೇಕಿತ್ತು. ಅಲ್ಲಿಂದ ಬಂದವರನ್ನು ವಿಮಾನ ನಿಲ್ದಾಣದಲ್ಲಿಯೇ ಆರೋಗ್ಯ ತಪಾಸಣೆಗೊಳಪಡಿಸಬೇಕಿತ್ತು. ಇವತ್ತು ಜನರು ಆತಂಕಕ್ಕೆ ಒಳಗಾಗಿದ್ದಾರೆ. ಆಡಳಿತ ವಿಚಾರದಲ್ಲಿ ಸರ್ಕಾರ ವಿಫಲವಾಗಿದೆ. ನಮ್ಮ ರಾಜ್ಯದವರು ಕೋವಿಡ್  ಹರಡಲಿಲ್ಲ. ಮೊದಲೇ ಸರ್ಕಾರ  ಮುನ್ನೆಚ್ಚರಿಕೆಯ ಕ್ರಮ ಕೈಗೊಂಡಿದ್ದರೇ ಈ ಸಮಸ್ಯೆ ಆಗುತ್ತಿರಲಿಲ್ಲ ಎಂದು ಕಿಡಿಕಾರಿದರು.

ಇದನ್ನೂ ಓದಿ:  ಪೇಜಾವರ ಶ್ರೀಗಳಿಗೆ ‘ವೈ’ ಶ್ರೇಣಿ ಭದ್ರತೆ

ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶ ನನಗೆ ಸಂತೋಷ ತಂದಿದೆ. ನಮ್ಮ ಬೆಂಬಲಿತ ಸದಸ್ಯರನ್ನ ಸೆಳೆಯುವ ಕೆಲಸ ಆಗುತ್ತಿದೆ. ಇವರ ದುಡ್ಡಿನ ನಡುವೆ ನಮ್ಮ ಬೆಂಬಲಿತ ಅಭ್ಯರ್ಥಿಗಳು ಗೆದ್ದು ಬಂದಿದ್ದಾರೆ. ನಾನು ರಾಜ್ಯ ಪ್ರವಾಸ ಮಾಡುತ್ತೇನೆ. ಈ ವರ್ಷ ಸಂಘಟನೆಯ ವರ್ಷ – ಹೋರಾಟದ ವರ್ಷ ಎಂದರು.

Advertisement

ಇದನ್ನೂ ಓದಿ: ನಾಳೆಯಿಂದ ರಾಜ್ಯದ 5 ಜಿಲ್ಲೆಗಳಲ್ಲಿ ಕೋವಿಡ್ ವ್ಯಾಕ್ಸಿನ್ ಡ್ರೈರನ್: ಸುಧಾಕರ್

Advertisement

Udayavani is now on Telegram. Click here to join our channel and stay updated with the latest news.

Next