ಹೊಸತನ ಅನ್ನುವುದು ಸೃಷ್ಟಿಯ ನಿಯಮ, ಹೀಗಾಗಿಯೇ ಸದಾ ಒಂದಲ್ಲ ಒಂದು ಹೊಸತನಕ್ಕಾಗಿ ನಮ್ಮ ಮನಸ್ಸು ತುಡಿಯುತ್ತಿರುತ್ತದೆ. ಆದರೆ 2020ರ ದಿನಗಳನ್ನು ನಾವು ಭಯ, ಸಂಶಯ , ನಿರ್ಬಂದನೆ ಗಳಿಂದ ಕಳೆದಿರುವೆವು. ಈ ದಿನಗಳೆಲ್ಲವನ್ನು ಮರೆತು ಮುಂಬರುವ ಹೊಸ ದಿನವನ್ನು ಹೊಸ ಹುರುಪಿನಿಂದ ಆರಂಭಿಸೋಣ. 2020ರಲ್ಲಿ ಎಷ್ಟೇ ಕೆಟ್ಟದಾಗಿರಲಿ, ಆದರೆ ಆ ಕಷ್ಟದ ದಿನವನ್ನೆಲ್ಲಾ ಹೇಗೆ ದಾಟಿದೆವು ಎನ್ನುವುದೇ ವಿಸ್ಮಯ.
ನೋಡ ನೋಡುತ್ತಿದ್ದಂತೆ ದಿನಗಳು ಕಳೆದು ಹೊಸ ವರುಷ ಬಂದಿsದೆ . ನಾನು ಹಲವಾರು ಯೋಜನೆಗಳನ್ನು ಮನಸಿನಲ್ಲಿ ಕಟ್ಟಿಕೊಂಡಿದೆ ಆದರೆ ನಡೆದದ್ದು ಬೆರಳೆಣಿಕೆಯಷ್ಟು ಇನ್ನೂ ಉಳಿದಿದೆ ಬೆಟ್ಟದಷ್ಟು ಯೋಜನೆಗಳು , ಹಾಗಾಗಿ ಈ ಹೊಸದಿನಗಳಲ್ಲಿ ನನ್ನ ಚಿತ್ತ ಅವೆಲ್ಲವನ್ನೂ ನೆರವೇರಿಸುವ ಮೇಲಿರುತ್ತದೆ.
ಮುಂದಿನ ದಿನಗಳಲ್ಲಿ ಯಾವುದೇ ನಿರ್ಬಂಧ ಗಳಿಲ್ಲದೆ . ಮೊದಲಿನಂತೆಯೇ ತರಗತಿಗಳು ನಡೆದು ದಿನವೂ ಗಡಿಬಿಡಿಯಿಂದ ತಯಾರಾಗಿ ಬಸ್ಸಿಗೆ ಕಾಯುತ್ತಾ ಬಸ್ಸ್ ಬಂದ ತಕ್ಷಣ ಬಸ್ ಹತ್ತಿ ಕಾಲೇಜು ಸೇರಿ ಗೆಳತಿ/ಯ ರೊಂದಿಗೆ ಸೇರಿಕೊಂಡು ವಿದ್ಯಾಭ್ಯಾಸ ಮಾಡುತ್ತ , ಹರಟೆ ಹೊಡೆಯುತ್ತ , ಯಾವುದೇ ರೋಗದ ಭಯವಿಲ್ಲದೆ ಅಕ್ಕ ಪಕ್ಕ ಕುಳಿತು ತಂಟೆ ಮಾಡುತ್ತ ಖುಷಿ ಖುಷಿಯಾಗಿ ಕಳೆಯುವಂತೆ ಇರಲಿ ಎಂದು ಬಯಸುತ್ತೇನೆ
ಹೊಸ ಹೊಸ ವಿಚಾರಗಳನ್ನು ಹುಟ್ಟು ಹಾಕುವ ತಯಾರಿ ಅಂತೂ ನಡೆದಿದೆ ನನ್ನಲ್ಲಿ . ಕಳೆದ ದಿನಗಳಲ್ಲಿ ನಡೆದ ಮನಸ್ತಾಪ, ಕೋಪ, ಜಗಳಗಳಿಗೆ ಪೂರ್ಣವಿರಾಮ ಇಟ್ಟು ಹೊಸ ನಗುವಿನೊಂದಿಗೆ ಹೊಸತನ ತುಂಬುವ ಆತ್ಮ ವಿಶ್ವಾಸದಿಂದ ಮುನ್ನಡೆಯುವ ಮನಸ್ಸು ಮಾಡಿರುವೆ. ವರ್ಷ ಬದಲಾದಂತೆ ಮನೆಯ ಗೋಡೆಯ ಕ್ಯಾಲೆಂಡರ್ ಬದಲಾಗುವುದೇ ಹೊರತು , ದಿನಗಳಲ್ಲಿ ಬದಲಾವಣೆಯಿಲ್ಲ ಆದರೆ ನಮ್ಮ ಆಲೋಚನೆ ನಮ್ಮ ನಿರ್ಧಾರಗಳಲ್ಲಿ ಬದಲಾವಣೆ ಆಗಬೇಕು ನಮ್ಮ ಮನ ಪರಿವರ್ತನೆ ಆಗಬೇಕು ಕೆಟ್ಟ ಯೋಚನೆ ಗಳಿಂದ ದೂರವಿರಬೇಕು ಕಳೆದ ದಿನಗಳಲ್ಲಿ ಮಾಡಿದ ತಪ್ಪುಗಳನ್ನು ಮುಂದಿನ ದಿನಗಳಲ್ಲಿ ಮಾಡಬಾರದು ಎನ್ನುವುದೇ ನನ್ನ ಅನಿಸಿಕೆ.
ಅನುಪಮ ಶಿರಿಯಾರ
ಪ್ರಥಮ ಬಿಎ ಪತ್ರಿಕೋದ್ಯಮ ವಿಭಾಗ ಉಡುಪಿ