ಹೊಸದಿಲ್ಲಿ: ಪ್ರಸಕ್ತ ಋತುವಿನ ದೇಶಿ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳಲಿರುವ ರಾಜ್ಯ ತಂಡಗಳಿಗೆ ಬಿಸಿಸಿಐ ಶುಕ್ರವಾರ ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಇದರಂತೆ, ಆಟಗಾರರಿಗೆ ಸಾರ್ವ ಜನಿಕ ವಾಹನ ಸಂಚಾರವನ್ನು ನಿಷೇ ಧಿಲಾಗಿದೆ. 20 ಮಂದಿ ಆಟಗಾರರು ಹಾಗೂ 10 ಮಂದಿ ಸಹಾಯಕ ಸಿಬಂದಿ ಸೇರಿದಂತೆ ತಂಡದ ಒಟ್ಟು ಸದಸ್ಯರ ಸಂಖ್ಯೆ 30ಕ್ಕೆ ಸೀಮಿತವಾಗಿರಬೇಕು.
ಆಟಗಾರರು ಹಾಗೂ ಸಹಾ ಯಕ ಸಿಬಂದಿ ಜೈವಿಕ ಸುರಕ್ಷಾ ವಲಯವನ್ನು ಪ್ರವೇಶಿಸುವ ಮುನ್ನ 6 ದಿನಗಳ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಬೇಕಿದೆ. ಕೋವಿಡ್-19 ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಿ, ನೆಗೆಟಿವ್ ವರದಿ ಬಂದ ಬಳಿಕವೇ ಜೈವಿಕ ಸುರಕ್ಷಾ ವಲಯವನ್ನು ಪ್ರವೇಶಿಸಬೇಕಿದೆ.
ಕೋವಿಡ್ ಪರೀಕ್ಷೆ ನಡೆಸಿದ 12-24 ಗಂಟೆಯಲ್ಲಿ ವರದಿ ಕೈಸೇರಲಿದೆ. ಕೊರೊನಾ ಪಾಸಿಟಿವ್ ಫಲಿತಾಂಶ ಬಂದಲ್ಲಿ ಅವರು 10 ದಿನಗಳ ಕಡ್ಡಾಯ ಐಸೊಲೇಶನ್‌ಗೆ ಒಳಗಾಗಬೇಕಿದೆ ಎಂದು ಬಿಸಿಸಿಐ ಈ ಮಾರ್ಗಸೂಚಿಯಲ್ಲಿ ತಿಳಿಸಿದೆ. ಅನಿವಾರ್ಯ ಸಂದರ್ಭಗಳಲ್ಲಿ ಬಯೋ ಬಬಲ್ ಏರಿಯಾದಿಂದ ಹೊರ ಹೋಗಬೇಕಾದರೆ ಪಿಪಿಇ ಕಿಟ್ ಧರಿಸುವುದು ಕಡ್ಡಾಯ ಎಂದೂ ಸೂಚಿಸಲಾಗಿದೆ.
ಸಂಭಾವನೆ ಪ್ರಸ್ತಾವ
ಹಾಗೆಯೇ ಪಂದ್ಯದ ಪೂರ್ತಿ ಸಂಭಾವನೆ ಆಡುವ ಬಳಗದ 11 ಸದಸ್ಯರಿಗಷ್ಟೇ ಸೀಮಿತ; ಉಳಿದ 9 ಆಟಗಾರರಿಗೆ ಶೇ. 50ರಷ್ಟು ಸಂಭಾ ವನೆ ಮಾತ್ರ ಲಭಿಸಲಿದೆ ಎಂದು ಬಿಸಿಸಿಐ ತಿಳಿಸಿದೆ.