Advertisement

2020ರಲ್ಲಿ ಇಸ್ರೋದಿಂದ ಚಂದ್ರಯಾನ -3  ಹಾಗೂ ಗಗನ್ ಯಾನ ತಯಾರಿ

10:08 AM Jan 02, 2020 | keerthan |

ಬೆಂಗಳೂರು: ಇಸ್ರೋ 2020ರಲ್ಲಿ ಚಂದ್ರಯಾನ -3  ಹಾಗೂ ಗಗನ್ ಯಾನಕ್ಕೆ ಅಗತ್ಯ ತಯಾರಿ ಕೈಗೊಳ್ಳಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದರು.

Advertisement

ನಗರ ಅಂತರಿಕ್ಷ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು, ಚಂದ್ರಯಾನ -2 ಬಹುತೇಕ  ಯಶಸ್ವಿಯಾಗಿದೆ. ಇದೇ ಮಾದರಿಯಲ್ಲಿ ಅದೇ ಗುರಿ, ಉದ್ದೇಶಗಳೊಂದಿಗೆ ಚಂದ್ರಯಾನ 3 ಕೈಗೊಳ್ಳಲಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿದ್ದು, ಈಗಾಗಲೇ ಅಗತ್ಯ ತಯಾರಿ ಮಾಡಿಕೊಳ್ಳಲಾಗುತ್ತಿದೆ.  ಉಡಾವಣೆ ವಾಹನ, ಲ್ಯಾಂಡರ್ ತಯಾರಿ  ಸೇರಿ 600  ಕೋಟಿ ರೂ. ವೆಚ್ಚ ಮಾಡಲಾಗುತ್ತದೆ.

ಚಂದ್ರಯಾನ 3 ರಲ್ಲಿ ಲ್ಯಾಂಡರ್, ರೋವರ್ ಮಾತ್ರ ಇರಲಿವೆ.  ಚಂದ್ರಯಾನ 2ರ ಆರ್ಬಿಟ್ ಈಗಾಗಲೇ  ಚಂದ್ರನಂಗಳದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದರೊಂದಿಗೆ ಚಂದ್ರಯಾನ – 3 ರ ಲ್ಯಾಂಡರ್ , ರೋವರ್ ಅನ್ನು ಸಂಪರ್ಕ ಮಾಡಲಾಗುತ್ತದೆ. ಅಂದಾಜು 2021 ಆರಂಭದಲ್ಲಿಯೇ ಚಂದ್ರಯಾನ -3 ಜರುಗಲಿದೆ ಎಂದು ತಿಳಿಸಿದರು.

ಮಾನವ ಸಹಿತ ಬಾಹ್ಯಾಕಾಶ ಯಾತ್ರೆಯ ಯೋಜನೆಯಾಗಿರುವ ಗಗನಯಾನಗೆ ಇಸ್ರೋ ಸಿದ್ಧಗೊಂಡಿದ್ದು, ತರಬೇತಿ ಪಡೆದ ನಾಲ್ಕು ಮಂದಿಯು ಯಾನದಲ್ಲಿ ಇರಲಿದ್ದಾರೆ. ವರ್ಷಾಂತ್ಯ ಅಥವಾ ಮುಂದಿನ ವರ್ಷ ಮೊದಲ‌ ತಿಂಗಳಲ್ಲಿ ಗಗನ್ ಯಾನ ಕೈಗೊಳ್ಳಲಾಗುತ್ತದೆ. ಅಲ್ಲದೆ ಈ ವರ್ಷ ವಿವಿಧ ನೂತನ ಯೋಜನೆಗಳನ್ನು ಇಸ್ರೋ ನಡೆಸಲಿದೆ ಎಂದರು

Advertisement

Udayavani is now on Telegram. Click here to join our channel and stay updated with the latest news.

Next