Advertisement

ನಾಲ್ಕು ವರ್ಷದಲ್ಲಿ ಪೋಕ್ಸೋ ಕಾಯ್ದೆಯಡಿ 202 ಪ್ರಕರಣ

01:34 PM Jul 22, 2017 | |

ದಾವಣಗೆರೆ: ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ಲೈಂಗಿಕ ದೌರ್ಜನ್ಯ ತಡೆಗೆ ಜಾರಿಯಾದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೋ)ಯಡಿ ಈವರೆಗೆ ಜಿಲ್ಲೆಯಲ್ಲಿ 202 ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ಆರೋಪಿಗಳಲ್ಲಿ ಜೈಲು ಪಾಲಾಗುತ್ತಿರುವುದು 25 ವರ್ಷ ತುಂಬದ ಯುವಕರೇ ಹೆಚ್ಚು.

Advertisement

ಪೊಕ್ಸೋ ಕಾಯ್ದೆ ಜಾರಿಯಾದ(2013ರಿಂದ) ನಾಲ್ಕು ವರ್ಷಗಳಲ್ಲಿ ಜಿಲ್ಲೆಯ 18 ಪೊಲೀಸ್‌ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ ಅಚ್ಚರಿಮೂಡಿಸುವಂತಿದೆ. ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವ ಪ್ರಮಾಣ ನಿಬ್ಬೆರಗಾಗಿಸುವಂತಿದೆ. ವರ್ಷದಿಂದ ವರ್ಷಕ್ಕೆ ಏರುತ್ತಲೇ ಇರುವ ಈ ಪ್ರಕರಣಗಳಲ್ಲಿ ಈವರೆಗೆ ಬಂಧನಕ್ಕೆ ಒಳಗಾದವರಲ್ಲಿ 25 ವರ್ಷಕ್ಕಿಂತ ಕಡಮೆ ಇರುವವರ ಸಂಖ್ಯೆಯೇ ಹೆಚ್ಚು. ಬಂಧನಕ್ಕೆ ಒಳಗಾದವರ ಪೈಕಿ ಒಟ್ಟು 235 ಆರೋಪಿಗಳು 25 ವರ್ಷದೊಳಗಿನವರಾಗಿದ್ದಾರೆ.

ದಾವಣಗೆರೆ ತಾಲೂಕು ವ್ಯಾಪ್ತಿಯಲ್ಲಿ ದಾಖಲಾದ ಪ್ರಕರಣಗಳ ಪೈಕಿ ದಾವಣಗೆರೆ ನಗರ ವ್ಯಾಪ್ತಿಯಲ್ಲಿಯೇ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ನಗರ ವ್ಯಾಪ್ತಿಯ ಎಲ್ಲಾ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 76 ಆಗಿವೆ. ಇದರಲ್ಲಿ ಬಂಧಿತರಾದ ಆರೋಪಿಗಳ ಪೈಕಿ 95 ಜನರು 25 ವರ್ಷದೊಳಗಿನ ಯುವಕರಾಗಿದ್ದಾರೆ.

ಪ್ರೇಮ ಪ್ರಕರಣಗಳೇ ಹೆಚ್ಚು….
ದಾಖಲಾದ ಪ್ರಕರಣಗಳಲ್ಲಿ ಪ್ರೇಮ ಪ್ರಕರಣಗಳೇ ಶೇ.80ಕ್ಕೂ ಹೆಚ್ಚಿವೆ ಎಂದು ಅಂದಾಜಿಸಲಾಗಿದೆ. 18 ವರ್ಷ ತುಂಬದ ಯುವತಿ ಪ್ರೇಮ ಪಾಶಕ್ಕೆ ಬೀಳುವ ಯುವಕ, ಆಕೆಯನ್ನು ಪುಸಲಾಯಿಸಿಕೊಂಡು ಓಡಿಹೋಗಿ ಮದುವೆಯಾಗುತ್ತಾರೆ. ಇತ್ತ ಹುಡುಗಿ
ಕಡೆಯವರು ದೂರು ದಾಖಲಿಸುತ್ತಾರೆ. ಅಪ್ರಾಪ್ತ ಬಾಲಕಿಯ ಜೊತೆ ಸಮ್ಮತಿಯಿಂದ ಲೈಂಗಿಕ ಸಂಪರ್ಕ ಹೊಂದಿದರೂ ಅದು ಪೋಕ್ಸೋ ಕಾಯ್ದೆಯಡಿ ಅತ್ಯಾಚಾರ ಎಂದೇ ಪರಿಗಣಿಸಲಾಗುವುದು. 2012ರಲ್ಲಿ ದೆಹಲಿಯ ನಿರ್ಭಯ ಅತ್ಯಾಚಾರ ಪ್ರಕರಣ ಸೇರಿದಂತೆ ದೇಶದ ವಿವಿಧ ಕಡೆ ನಡೆದ ದೌರ್ಜನ್ಯ ತಡೆಗೆ ಜಾರಿಗೆ ಬಂದ ಕಾನೂನಿನಡಿ ಬಂಧಿತರಾಗುತ್ತಿರುವ ಆರೋಪಿಗಳು ಪ್ರೇಮಿಗಳೇ ಹೆಚ್ಚು ಎಂಬುದು ಗಮನಿಸಬೇಕಾಗಿದೆ.

ಪತ್ನಿ-ಮಗು ಮನೇಲಿ, ಗಂಡ ಜೈಲಲಿ: ನ್ಯಾಯಾಲಯದಲ್ಲಿರುವ ವಿಚಾರಣೆ ಹಂತದಲ್ಲಿರುವ ಪ್ರಕರಣಗಳ ಪೈಕಿ ಕೆಲವು ವಿಚಿತ್ರವಾಗಿವೆ. ಮೂರು ವರ್ಷ ಪ್ರೀತಿಸಿದ ಯುವಕ ಒಂದೂವರೆ ವರ್ಷದ ಹಿಂದೆ ಅಪ್ರಾಪ್ತೆ ಪ್ರೇಯಸಿಯನ್ನು ಕರೆದುಕೊಂಡು
ದೂರದ ಊರೊಂದಕ್ಕೆ ಹೋದ. ಅಲ್ಲಿ ದೇವಸ್ಥಾನವೊಂದರಲ್ಲಿ ಪೂಜಾರಿ ಸಮ್ಮುಖದಲ್ಲಿ ಮದುವೆಯಾದ. ಒಂದು ವರ್ಷ ಸಂಸಾರ ಸಹ ನಡೆಸಿದ. ಅವರಿಗೊಂದು ಮಗು ಸಹ ಜನಿಸಿತು. ನಂತರ ತನ್ನವರೊಂದಿಗೆ ಜೀವನ ಕಳೆಯುವ ಉದ್ದೇಶದಿಂದ ಸ್ವಂತ
ಊರಿಗೆ ಬಂದ. ಆದರೆ, ಅಲ್ಲಿಯವರೆಗೆ ನೊಂದು, ಆಕ್ರೋಶ ತಡೆಹಿಡಿದಿದ್ದ ಹುಡುಗಿಯ ಪೋಷಕರು ನೇರ ಪೊಲೀಸರಿಗೆ ದೂರು ನೀಡಿದ್ರು. ಪೊಕ್ಸೋ ಅಡಿ ಪ್ರೇಮಿ ಬಂಧಿತನಾಗಿ, ಜೈಲು ಸೇರಿದ. ಪ್ರೇಯಸಿ ಅರ್ಥಾತ್‌ ಅಪ್ರಾಪ್ತ ಹೆಂಡತಿ ತಮ್ಮ ಪ್ರೇಮದ ದ್ಯೋತಕವಾದ ಮಗುವಿನಿಂದ ತನ್ನ ಪ್ರೇಮಿಯ ಪೋಷಕರೊಂದಿಗೆ ಗಂಡನ ಆಗಮನಕ್ಕೆ ಕಾಯುತ್ತಿರುವ ಪ್ರಕರಣಗಳು ಸಹ
ಇವೆ. ಮುಂದೆ ನ್ಯಾಯಾಲಯ ನೀಡುವ ತೀರ್ಪು ಆಧರಿಸಿ, ಪ್ರೇಮಿಗಳ ಬದುಕು ನಿರ್ಧಾರವಾಗಲಿದೆ.

Advertisement

ಪಾಟೀಲ ವೀರನಗೌಡ

Advertisement

Udayavani is now on Telegram. Click here to join our channel and stay updated with the latest news.

Next