Advertisement
ಆ್ಯಲಿಸನ್ ಅವರು ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ, ಹೊಂಜೊ ಅವರು ಕ್ರೋಟೊ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ಗಳಾಗಿ ಸೇವೆ ಸಲ್ಲಿಸುತ್ತಿದ್ದು 2014ರಲ್ಲಿ ಇದೇ ಸಂಶೋಧನೆಗಾಗಿ ಏಷ್ಯಾ ಮಟ್ಟದ ನೊಬೆಲ್ ಎಂದೇ ಬಿಂಬಿಸಲ್ಪಟ್ಟಿರುವ “ಟಾಂಗ್ ಪ್ರೈಸ್’ಗೂ ಭಾಜನರಾಗಿದ್ದರು.
ಕ್ಯಾನ್ಸರ್ ಜೀವಕೋಶಗಳಿಂದ ಉತ್ಪತ್ತಿಯಾಗುವ ಪ್ರೊಟೀನ್, ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಹಾಳುಗೆಡವುದರ ಜತೆಗೆ ಕ್ಯಾನ್ಸರ್ ರೋಗವು ದೊಡ್ಡಮಟ್ಟಕ್ಕೆ ಬೆಳೆಯುವಂತೆ ಪ್ರೇರೇಪಿಸುತ್ತದೆ. ಹೊಸ ಇಮ್ಯೂನ್ ಚೆಕ್‌ಪಾಯಿಂಟ್ ಇನಿØಬಿಟರ್ ಚಿಕಿತ್ಸೆಯು ಇಂಥ ಘಾತುಕ ಪ್ರೊಟೀನ್ ಅನ್ನು ದೇಹದಿಂದ ಹೊರಹಾಕಲು ನೆರವಾಗುತ್ತದೆ. ಇದರಿಂದ ದೇಹದ ರೋಗ ನಿರೋಧಕ ಶಕ್ತಿಯು ಹೆಚ್ಚಾಗು ತ್ತಲ್ಲದೆ, ಕ್ಯಾನ್ಸರ್ ವಿರುದ್ಧ ಹೋರಾಡುವಲ್ಲಿ ದೇಹದ ಜೀವಕೋಶಗಳಿಗೆ ಶಕ್ತಿ ತುಂಬುತ್ತದೆ.