Advertisement

2014 ಭರವಸೆ, 2019 ನಂಬಿಕೆ, 2024ರಲ್ಲಿ ಗ್ಯಾರಂಟಿ: ಮೋದಿ

12:41 AM Apr 18, 2024 | Team Udayavani |

ನಲ್ಬರಿ/ಅಗರ್ತಲಾ: 2014ರಲ್ಲಿ ಭರವಸೆಯೊಂದಿಗೆ, 2019ರಲ್ಲಿ ನಂಬಿಕೆಯೊಂದಿಗೆ ಜನರ ಬಳಿ ಹೋಗಿದ್ದ ತಾನು, ಇದೀಗ 2024ರಲ್ಲಿ ಗ್ಯಾರಂಟಿಯೊಂದಿಗೆ ಹೋಗುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅಸ್ಸಾಂನ ನಲ್ಬರಿಯ ಬೋರ್ಕುರಾ ಮೈದಾನದಲ್ಲಿ ಬುಧವಾರ ಬಿಜೆಪಿ ಪ್ರಚಾರ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, “ಈಶಾನ್ಯ ಭಾರತವು ಮೋದಿ ಗ್ಯಾರಂಟಿಗೆ ಸಾಕ್ಷಿಯಾಗಿದೆ. ಈ ಪ್ರದೇಶದಲ್ಲಿ ಕಾಂಗ್ರೆಸ್‌ ಕೇವಲ ಸಮಸ್ಯೆಗಳನ್ನು ಸೃಷ್ಟಿಸಿತ್ತು. ಆದರೆ ಬಿಜೆಪಿಯು ಇದನ್ನು ಸಾಧ್ಯತೆಗಳ ನೆಲೆಯಾಗಿ ಪರಿವರ್ತಿಸಿದೆ’ ಎಂದು ಪ್ರತಿಪಾದಿಸಿದರು.

Advertisement

“ಈ ಪ್ರದೇಶದಲ್ಲಿ ಕಾಂಗ್ರೆಸ್‌ ಬಂಡುಕೋರರನ್ನು ಪ್ರಚೋದಿಸಿತು. ಆದರೆ ಮೋದಿ ಇಲ್ಲಿನ ಜನರನ್ನು ಅಪ್ಪಿಕೊಂಡು, ಪ್ರದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಿದರು. 60 ವರ್ಷಗಳಲ್ಲಿ ಕಾಂಗ್ರೆಸ್‌ ಸಾಧಿಸಲು ಸಾಧ್ಯವಾಗದ್ದನ್ನು ಬಿಜೆಪಿ ಸಾಧಿಸಿದೆ’ ಎಂದರು.

“ಶೀಘ್ರದಲ್ಲಿ ಅಸ್ಸಾಂ ಸೆಮಿಕಂಡಕ್ಟರ್‌ ಹಬ್‌ ಆಗಲಿದೆ. ಇತ್ತೀಚಿಗೆ ಅಸ್ಸಾಂನಲ್ಲಿ ಶಂಕುಸ್ಥಾಪನೆಗೊಂಡ ಸೆಮಿಕಂಡಕ್ಟರ್‌ ಟೆಸ್ಟಿಂಗ್‌ ಘಟಕದಿಂದ ಇಲ್ಲಿನ 15,000ಕ್ಕೂ ಹೆಚ್ಚು ಯುವಕರಿಗೆ ಉದ್ಯೋಗಾವಕಾಶ ಸಿಗಲಿದೆ. ಇದೇ ರೀತಿ ದೇಶದ ವಿವಿಧೆಡೆ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆೆ’ ಎಂದು ಮೋದಿ ಹೇಳಿದರು.
ತ್ರಿವಳಿ ತಲಾಖ್‌ ನಿಷೇಧದಿಂದ ಬಾಳು ಹಸನು: “ತ್ರಿವಳಿ ತಲಾಖ್‌ ಪದ್ಧತಿಯು ಅನೇಕ ಮುಸ್ಲಿಂ ಮಹಿಳೆಯರು ಮತ್ತು ಅವರ ಕುಟುಂಬದವರ ಜೀವನವನ್ನು ಹಾಳು ಮಾಡಿತ್ತು. ಎನ್‌ಡಿಎ ಸರಕಾರ ತ್ರಿವಳಿ ತಲಾಖ್‌ ಅನ್ನು ನಿಷೇಧಿಸುವ ಮೂಲಕ ಮುಸ್ಲಿಂ ಮಹಿಳೆಯರ ಸ್ವಾತಂತ್ರ್ಯವನ್ನು ಎತ್ತಿಹಿಡಿದಿದೆ’ ಎಂದು ಪ್ರತಿಪಾದಿಸಿದರು.

ಕಾಂಗ್ರೆಸ್‌ ಅಧಿಕಾರದಲ್ಲಿದ್ರೆ ಮೊಬೈಲ್‌ ಬಿಲ್‌ 5,000 ರೂ. ಬರ್ತಿತ್ತು: ಪ್ರಧಾನಿ
ಒಂದು ವೇಳೆ ಕಾಂಗ್ರೆಸ್‌ ಅಧಿಕಾರದಲ್ಲಿದ್ದರೆ ಮೊಬೈಲ್‌ ಬಿಲ್‌ ತಿಂಗಳಿಗೆ 5,000 ರೂ. ಬರ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ವಿರುದ್ಧ ಹರಿ ಹಾಯ್ದಿದಾರೆ. ತ್ರಿಪುರಾದಲ್ಲಿ ಆಯೋಜಿಸಲಾಗಿದ್ದ ಚುನಾವಣ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, ಈ ಮೊದಲು ತ್ರಿಪುರಾ ರಾಜ್ಯದಲ್ಲಿ ಮೊಬೈಲ್‌ ಟವರ್‌ಗಳು ಸರಿಯಾಗಿ ಕೆಲಸ ಮಾಡುತ್ತಿರ

ಲಿಲ್ಲ. ಆದರೆ ಈಗ 5ಜಿ ನೆಟ್‌ವರ್ಕ್‌ ಕೂಡ ಸುಧಾರಿಸಲಾಗುತ್ತಿದೆ. ತಿಂಗಳ ಮೊಬೈಲ್‌ ಬಿಲ್‌ ಅನ್ನು 500 ರೂ.ನಿಂದ 400 ರೂ.ಗೆ ಇಳಿಕೆ ಮಾಡಿದ್ದು ಮೋದಿ ಸರಕಾರ. ಒಂದೊಮ್ಮೆ ಕಾಂಗ್ರೆಸ್‌ ಅಧಿಕಾರದಲ್ಲಿ ಇದ್ದಿದ್ದರೆ ನಿಮ್ಮ ಮೊಬೈಲ್‌ ತಿಂಗಳಿಗೆ 4,000 ರೂ.ನಿಂದ 5,000 ರೂ.ವರೆಗೂ ಬರ್ತಿತ್ತು ಎಂದು ಆರೋಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next