Advertisement

ಜೈಪುರ ಸರಣಿ ಸ್ಫೋಟ: ಎಲ್ಲ 4 ಅಪರಾಧಿಗಳಿಗೆ ಗಲ್ಲು ಶಿಕ್ಷೆ

09:58 AM Dec 21, 2019 | Team Udayavani |

ಜೈಪುರ: 2008ರಲ್ಲಿ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಸಂಭವಿಸಿದ್ದ ಎಂಟು ಸರಣಿ ಸ್ಫೋಟ ಪ್ರಕರಣದಲ್ಲಿ ನಾಲ್ವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಸ್ಥಳೀಯ ಕೋರ್ಟ್‌ನ ನ್ಯಾಯಾಧೀಶ ಅಜಯ ಕುಮಾರ್‌ ಶರ್ಮಾ ಶುಕ್ರವಾರ ಶಿಕ್ಷೆ ಪ್ರಮಾಣ ಘೋಷಿಸಿದ್ದಾರೆ.

Advertisement

ಬುಧವಾರ ತೀರ್ಪು ನೀಡಿದ್ದ ಕೋರ್ಟ್‌, ಮೊಹಮ್ಮದ್‌ ಸೈಫ್, ಮೊಹಮ್ಮದ್‌ ಸರ್ವರ್‌ ಆಜ್ಮಿ, ಮೊಹಮ್ಮದ್‌ ಸಲ್ಮಾನ್‌ ಮತ್ತು ಸೈಫ‌ುರ್‌ ರೆಹಮಾನ್‌ರನ್ನು ದೋಷಿಗಳೆಂದು ತೀರ್ಮಾನಿಸಿತ್ತು. ಇದೇ ಪ್ರಕರಣದಲ್ಲಿ ಲಕ್ನೋ ನಿವಾಸಿಯಾಗಿರುವ ಶಾಭಾಝ್ ಹುಸೇನ್‌ ಎಂಬಾತ ಸ್ಫೋಟ ಪ್ರಕರಣಗಳ ಬಳಿಕ, ಇಂಡಿಯನ್‌ ಮುಜಾಹಿದೀನ್‌ ಈ ಕೃತ್ಯವೆಸಗಿರುವುದಾಗಿ ಪೊಲೀಸರಿಗೆ ಇ-ಮೇಲ್‌ ಮೂಲಕ ಮಾಹಿತಿ ನೀಡಿದ್ದ ಎಂದು ಆರೋಪ ಮಾಡಲಾಗಿತ್ತು. ಆದರೆ ವಾದ ಮಂಡನೆ ವೇಳೆ ಹುಸೇನ್‌ ವಿರುದ್ಧದ ಆರೋಪ ಸಾಬೀತು ಮಾಡಲು ಸಾಧ್ಯವಾಗದೇ ಇದ್ದ ಕಾರಣ ಆತನನ್ನು ದೋಷಮುಕ್ತಗೊಳಿಸಲಾಗಿದೆ. 2018 ಮೇ 13ರಂದು ನಡೆದಿದ್ದ ಸರಣಿ ಸ್ಫೋಟದಲ್ಲಿ 71 ಮಂದಿ ಅಸುನೀಗಿ, 185 ಮಂದಿ ಗಾಯಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next