Advertisement

ಅಜ್ಮೇರ್ ದರ್ಗಾ ಸ್ಫೋಟ ಕೇಸ್; ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

04:42 PM Mar 22, 2017 | Sharanya Alva |

ಜೈಪುರ್: 2007ರಲ್ಲಿ ಸಂಭವಿಸಿದ್ದ ಅಜ್ಮೇರ್ ದರ್ಗಾ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ)ದ ವಿಶೇಷ ಕೋರ್ಟ್, ಪ್ರಮುಖ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಬುಧವಾರ ತೀರ್ಪು ಪ್ರಕಟಿಸಿದೆ.

Advertisement

ಎಎನ್ಐ ವರದಿ ಪ್ರಕಾರ, ಸ್ಫೋಟ ಪ್ರಕರಣದಲ್ಲಿ ದೇವೇಂದ್ರ ಗುಪ್ತಾ ಮತ್ತು ಭಾವೇಶ್ ಪಟೇಲ್ ಗೆ ಎನ್ಐಎ ವಿಶೇಷ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

ಅಜ್ಮೇರ್ ಸ್ಫೋಟ ಪ್ರಕರಣದ ಕುರಿತು ಮಾರ್ಚ್ 8ರಂದು ಕೋರ್ಟ್ ದೇವೇಂದ್ರ ಗುಪ್ತಾ, ಭಾವೇಶ್ ಪಟೇಲ್ ಹಾಗೂ ಸುನೀಲ್ ಜೋಶಿಯನ್ನು ದೋಷಿ ಎಂದು ತಿಳಿಸಿದ್ದು, ಅಸೀಮಾನಂದ ಸೇರಿದಂತೆ ಉಳಿದವರನ್ನು ಖುಲಾಸೆಗೊಳಿಸಿತ್ತು. ದೋಷಿತರಲ್ಲಿ ಜೋಶಿ ಈಗಾಗಲೇ ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.

2007 ಅಕ್ಟೋಬರ್ 11ರಂದು ಪ್ರಸಿದ್ಧ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾದ ಬಳಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಮೂರು ಯಾತ್ರಾರ್ಥಿಗಳು ಬಲಿಯಾಗಿದ್ದು, 15 ಜನರು ಗಾಯಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next