Advertisement

2002 Gujarat ಗಲಭೆ: ನರೋಡಾ ಗಾಮ್ ಪ್ರಕರಣದಲ್ಲಿ ಎಲ್ಲ 68 ಆರೋಪಿಗಳು ಖುಲಾಸೆ

06:57 PM Apr 20, 2023 | Team Udayavani |

ಅಹಮದಾಬಾದ್ : ಗುಜರಾತ್‌ನಲ್ಲಿ 2002ರಲ್ಲಿ ನಡೆದ ಕೋಮುಗಲಭೆ ವೇಳೆ ಮುಸ್ಲಿಂ ಸಮುದಾಯದ 11 ಮಂದಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅಹಮದಾಬಾದ್‌ನ ವಿಶೇಷ ನ್ಯಾಯಾಲಯವು ಬಿಜೆಪಿಯ ಮಾಜಿ ಶಾಸಕಿ ಮಾಯಾ ಕೊಡ್ನಾನಿ ಮತ್ತು ಮಾಜಿ ಬಜರಂಗದಳದ ನಾಯಕ ಬಾಬು ಬಜರಂಗಿ ಸೇರಿದಂತೆ ಎಲ್ಲ 68 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿದೆ.

Advertisement

ಪ್ರಕರಣದಲ್ಲಿ ಒಟ್ಟು 86 ಆರೋಪಿಗಳಿದ್ದರು, ಆದರೆ ಅವರಲ್ಲಿ 18 ಮಂದಿ ಮಧ್ಯಂತರ ಅವಧಿಯಲ್ಲಿ ಸಾವನ್ನಪ್ಪಿದ್ದು ಆರೋಪಿಗಳ ವಿರುದ್ಧ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿತ್ತು. ವಿಶೇಷ ತನಿಖಾ ಸಂಸ್ಥೆ (ಎಸ್‌ಐಟಿ) ಪ್ರಕರಣಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್‌ಕೆ ಬಾಕ್ಸಿ ಗುರುವಾರ 68 ಆರೋಪಿಗಳ ವಿರುದ್ಧ ತೀರ್ಪು ಪ್ರಕಟಿಸಿದರು.

ನರೋಡಾ ಗಾಮ್‌ನಲ್ಲಿ ನಡೆದ ಘಟನೆ 2002 ರ ಒಂಬತ್ತು ಪ್ರಮುಖ ಕೋಮು ಗಲಭೆ ಪ್ರಕರಣಗಳಲ್ಲಿ ಒಂದಾಗಿತ್ತು SIT ತನಿಖೆ ಮತ್ತು ವಿಶೇಷ ನ್ಯಾಯಾಲಯಗಳು ವಿಚಾರಣೆ ನಡೆಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next