ಮುಂಬಯಿ: ಕಳೆದ 6 ವರ್ಷಗಳಲ್ಲಿ ನಗರದಲ್ಲಿ ಸುಮಾರು 536.67 ಕೋ.ರೂ. ಮೌಲ್ಯದ 19,907 ವಾಹನಗಳು ಕಳವು ಆಗಿವೆ. ಸರಾಸರಿಯಾಗಿ ನಗರದಲ್ಲಿ ದೈನಂದಿನ ಕನಿಷ್ಠ 9 ವಾಹನಗಳು ಕಳವು ಆಗುತ್ತಿವೆ. ಈ 6 ವರ್ಷಗಳಲ್ಲಿ ಪೊಲೀಸರು ಕೇವಲ 74 ಕೋಟಿ ಮೌಲ್ಯದ 5,732 ವಾಹನಗಳನ್ನು ಪತ್ತೆಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಆರ್‌ಟಿಐ ಕಾರ್ಯಕರ್ತ ಅಹ್ಮದ್ ಶೇಖ್ ಮಾಹಿತಿ ಹಕ್ಕಿನ ಮೂಲಕ 2013ರಿಂದ 2018ರ ತನಕ ಮುಂಬಯಿಯಲ್ಲಿ ವಾಹನಗಳ ಕಳವಿನ ಬಗ್ಗೆ ಮಾಹಿತಿಯನ್ನು ಕೇಳಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಮುಂಬಯಿ ಪೊಲೀಸರು ನೀಡಿರುವ ಮಾಹಿತಿಯಲ್ಲಿ 6 ವರ್ಷಗಳಲ್ಲಿ ನಗರದಲ್ಲಿ 19,907 ವಾಹನಗಳು ಕಳವು ಆಗಿರುವ ಮಾಹಿತಿ ಬಹಿರಂಗವಾಗಿದೆ. ಕಳವು ಆಗಿರುವ ವಾಹನಗಳು ಒಟ್ಟು +ಹಾಕುವಲ್ಲಿ ಮುಂಬಯಿ ಪೊಲೀಸರು ವಿಫಲ ಸಾಬೀತಾಗಿದ್ದಾರೆ. ಪೊಲೀಸರು ಈ ಅವಧಿಯಲ್ಲಿ ಕೇವಲ ಶೇ.21ರಷ್ಟು ಅಂದರೆ 5,462 ವಾಹನ ಕಳ್ಳತನದ ಪ್ರಕರಣಗಳನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರ್‌ಟಿಐ ಕಾರ್ಯಕರ್ತ ಅಹ್ಮದ್ ಶೇಖ್ ಪ್ರಕಾರ ಮುಂಬಯಿಯಲ್ಲಿ ವಾಹನ ಕಳ್ಳತನದ ಅಂತರ್‌ರಾಜ್ಯ ತಂಡವೊಂದು ಸಕ್ರಿಯವಾಗಿದೆ. ಈ ತಂಡವು ವಾಹನಗಳನ್ನು ಕಳ್ಳತನ ಮಾಡಿ ಅವುಗಳನ್ನು ಬೇರೆ ರಾಜ್ಯಗಳಿಗೆ ಸಾಗಿಸುತ್ತದೆ ಮತ್ತು ನಕಲಿ ದಾಖಲೆಗಳನ್ನು ತಯಾರಿಸಿ ಅಲ್ಲಿ ಅವುಗಳ ಮಾರಾಟ ಮಾಡುತ್ತಿದೆ. ಈ ತಂಡದ ಸದಸ್ಯರು ಪೊಲೀಸರಿಗೆ ಕಳ್ಳತನದ ಸಂಪೂರ್ಣ ಜಾಲವನ್ನು ಭೇದಿಸಲು ಸಾಧ್ಯವಾಗದ ರೀತಿಯಲ್ಲಿ ವಾಹನಗಳನ್ನು ಕಳವು ಮಾಡುತ್ತಿದ್ದಾರೆ. ಒಂದೊಮ್ಮೆ ವಾಹನ ಕಳ್ಳತನದ ಸಮಯದಲ್ಲಿ ಯಾವುದೇ ಆರೋಪಿಯು ಬಂಧಿಸಲ್ಪಟ್ಟಲ್ಲಿ ಪೊಲೀಸರಿಗೆ ಆತನ ಸಂಪರ್ಕಗಳನ್ನು ಜೋಡಿಸಿ ತಂಡದ ಮಾಸ್ಟರ್‌ವೆುçಂಡ್ ಅನ್ನು ತಲುಪಲು ಕೂಡ ಸಾಧ್ಯವಾಗುವುದಿಲ್ಲ. ಮುಂಬಯಿಯಿಂದ ಕದ್ದ ವಾಹನಗಳನ್ನು ಹೆಚ್ಚಾಗಿ ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಇದಲ್ಲದೆ, ನೇಪಾಳದಲ್ಲೂ ಮಾರಾಟ ಮಾಡಲಾಗುತ್ತಿದೆ.
ನಗರದಾದ್ಯಂತ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಯಂತಹ ಉಪಕ್ರಮಗಳ ಹೊರತಾಗಿಯೂ, ಕಳೆದ ಮೂರು ವರ್ಷಗಳಲ್ಲಿ ವಾಹನ ಕಳ್ಳತನಗಳ ಸಂಖ್ಯೆ 3,000ದಷ್ಟಿದೆ ಎಂದು ಅಹ್ಮದ್ ಬೊಟ್ಟು ಮಾಡಿ ಹೇಳಿದ್ದಾರೆ. ವಾಹನ ಕಳ್ಳತನಗಳಲ್ಲಿ ತೊಡಗಿರುವ ತಂಡಗಳನ್ನು ಪೊಲೀಸರು ಪತ್ತೆ ಮಾಡಬೇಕು ಎಂದವರು ಆಗ್ರಹಿಸಿದ್ದಾರೆ. ಮುಂಬಯಿಯಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಸ್ತುತ ನಗರದ ರಸ್ತೆಗಳಲ್ಲಿ 70 ಲಕ್ಷಕ್ಕೂ ಅಧಿಕ ವಾಹನಗಳು ಓಡುತ್ತಿವೆ.
ವಾಹನ ಕಳ್ಳತನದ ಅಂಕಿ ಆಂಶ
ವರ್ಷ ಕಳ್ಳತನ ಪತ್ತೆ
2013 3,789 859
2014 3,474 906
2015 3,311 840
2016 3,318 861
2017 3,012 935