Advertisement

2 ಸಾವಿರ ರೂ. ನೋಟುಗಳ ಚಲಾವಣೆ ನಿಯಂತ್ರಣ?

08:00 AM Dec 21, 2017 | Harsha Rao |

ನವದೆಹಲಿ: 2000 ರೂ. ಮುಖಬೆಲೆಯ ನೋಟುಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಚಲಾವಣೆಗೆ ಬಿಡುಗಡೆ ಮಾಡುತ್ತಿಲ್ಲ ಅಥವಾ ಅವುಗಳ ಮುದ್ರಣವನ್ನೇ ಸ್ಥಗಿತಗೊಳಿಸಿರಬಹುದು. ಹೀಗೆಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಸಂಶೋಧನಾ ವರದಿ ತಿಳಿಸಿದೆ. ಇತ್ತೀಚೆಗಷ್ಟೇ ಲೋಕಸಭೆಯಲ್ಲಿ ಮಂಡಿಸಲಾಗಿರುವ ಆರ್‌ಬಿಐ ವಾರ್ಷಿಕ ವರದಿ ಅಂಶ ಮತ್ತು ಲೋಕಸಭೆ ಅಂಕಿ ಅಂಶಗಳನ್ನು ಹೋಲಿಕೆ ಮಾಡಿದಾಗ ಈ ಅಂಶ ಗೊತ್ತಾಗುತ್ತದೆ ಎಂದು ಹೇಳಿದೆ.

Advertisement

ಡಿಸೆಂಬರ್‌ವರೆಗಿನ ದಾಖಲೆಯ ಪ್ರಕಾರ ಅಧಿಕ ಮೌಲ್ಯದ ನೋಟುಗಳ ಒಟ್ಟು ಮೌಲ್ಯವು 13.32 ಲಕ್ಷ ಕೋಟಿ ರೂ. ಆಗಿದೆ ಎಂದು ಆರ್‌ಬಿಐ ಪ್ರಕಟಿಸಿದೆ. ಆದರೆ ಇತ್ತೀಚೆಗೆ ಲೋಕಸಭೆಯಲ್ಲಿ ಬಹಿರಂಗಗೊಳಿಸಲಾಗಿರುವ ಮಾಹಿತಿ ಪ್ರಕಾರ 15.78 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳನ್ನು ಆರ್‌ಬಿಐ ಮುದ್ರಿಸಿದೆ. ಅಂದರೆ ಈ ವ್ಯತ್ಯಾಸದ ಮೊತ್ತವಾದ 2.4 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳನ್ನು ಆರ್‌ಬಿಐ ಮುದ್ರಿಸಿ ಚಲಾವಣೆಗೆ ಬಿಡುಗಡೆ ಮಾಡಿಲ್ಲ ಎನ್ನಲಾಗಿದೆ. ಇಲ್ಲವಾದರೆ ಈ ನೋಟುಗಳನ್ನು ಮುದ್ರಿಸದೆಯೇ ಇರಬಹುದು ಎಂದು ವರದಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next