Advertisement

2000 ರೂ. ಮುಖಬೆಲೆಯ ಶೇ.98ರಷ್ಟು ನೋಟು ಈವರೆಗೆ ವಾಪಸ್‌: ಆರ್‌ಬಿಐ

12:06 AM Mar 02, 2024 | Team Udayavani |

ಮುಂಬೈ: ಈವರೆಗೆ 2 ಸಾವಿರ ರೂ. ಮುಖಬೆಲೆಯ ಶೇ.97.62ರಷ್ಟು ನೋಟುಗಳನ್ನು ಸಾರ್ವಜನಿಕರು ವಾಪಸ್‌ ಮಾಡಿದ್ದಾರೆ ಎಂದು ಆರ್‌ಬಿಐ ಶುಕ್ರವಾರ ಮಾಹಿತಿ ನೀಡಿದೆ. ಜತೆಗೆ, ಇನ್ನೂ 8,470 ಕೋಟಿ ರೂ. ಮೌಲ್ಯದ 2,000 ರೂ. ನೋಟುಗಳು ಚಲಾವಣೆಯಲ್ಲಿವೆ ಎಂದೂ ಹೇಳಿದೆ. 2023 ಮೇ 19ರ ವೇಳೆಗೆ ದೇಶದಲ್ಲಿ 3.56 ಲಕ್ಷ ಕೋಟಿ ರೂ. ಮೌಲ್ಯದಷ್ಟು 2000ರೂ. ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದ್ದವು. ಈ ನೋಟುಗಳನ್ನು ಹಿಂಪಡೆದಿದ್ದರೂ, ಅವುಗಳನ್ನು ಚಲಾವಣೆಯಿಂದ ವಾಪಸ್‌ ಪಡೆಯಲಾಗಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next