Advertisement

2000 ಇಎಸ್ ಡಿಎಂ ನವೋದ್ಯಮಗಳ ಸ್ಥಾಪನೆ ಗುರಿ- ಡಾ.ಸಿ.ಎನ್.ಅಶ್ವತ್ಥ ನಾರಾಯಣ

07:11 PM Dec 14, 2020 | mahesh |

ಬೆಂಗಳೂರು: ಎಲೆಕ್ಟ್ರಾನಿಕ್ಸ್ ವ್ಯವಸ್ಥೆ ವಿನ್ಯಾಸ ಮತ್ತು ತಯಾರಿಕೆ (ಇ,ಎಸ್,ಡಿ.ಎಂ) ವಲಯದಲ್ಲಿ 2022ರ ವೇಳೆಗೆ ಸುಮಾರು 2000 ನವೋದ್ಯಮಗಳ ಸ್ಥಾಪನೆ ಹಾಗೂ 2025ರ ವೇಳೆಗೆ 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಹಾಗೂ ಐಟಿ/ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.

Advertisement

ಇ,ಎಸ್.ಡಿ.ಎಂ. ವಲಯದಲ್ಲಿ ನಾವೀನ್ಯತೆ ಉತ್ತೇಜಿಸುವ ಸಲುವಾಗಿ ಭಾರತೀಯ ವಿದ್ಯುನ್ಮಾನ ಅರೆವಾಹಕ ಸಂಸ್ಥೆ (ಐ.ಇ.ಎಸ್.ಎ) ನೀಡುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವರ್ಚುವಲ್ ಆಗಿ ಸೋಮವಾರ ಪಾಲ್ಗೊಂಡು ಅವರು ಮಾತನಾಡಿದರು.

ಕೌಶಲಾಭಿವೃದ್ಧಿ, ಗುಣಮಟ್ಟದ ಮೂಲಸೌಕರ್ಯ, ನವೋದ್ಯಮಗಳಿಗೆ ಉತ್ತೇಜನ ಹಾಗೂ ಸುಗಮ ವ್ಯವಹಾರಕ್ಕೆ ಅನುವು ಮಾಡಿಕೊಡುವ ಮೂಲಕ ನಿಗದಿತ ಗುರಿ ಸಾಧಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಾರತದಲ್ಲಿ ಇ.ಎಸ್.ಡಿ.ಎಂ. ವಲಯವು ತ್ವರಿತವಾಗಿ ಬೆಳವಣಿಗೆ ಹೊಂದುತ್ತಿದೆ. ಇದು ದೇಶದ ಆರ್ಥಿಕತೆಯ ಪುನಶ್ಚೇತನದಲ್ಲಿ ಮಹತ್ವದ ಪಾತ್ರ ವಹಿಸಲು ಅಪಾರ ಅವಕಾಶಗಳನ್ನು ಹೊಂದಿದೆ, ಇದನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಸರ್ಕಾರವು ಈ ಉದ್ಯಮವನ್ನು ಪ್ರೋತ್ಸಾಹಿಸುವ ಕಾರ್ಯನೀತಿ ಜಾರಿಗೊಳಿಸಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

ಈಗ ಭಾರತದ ಇ.ಎಸ್.ಡಿ.ಎಂ. ರಫ್ತಿನಲ್ಲಿ ಶೇ 64ರಷ್ಟು ಕರ್ನಾಟಕದ ಕೊಡುಗೆಯಾಗಿದೆ. ಜೊತೆಗೆ ಕರ್ನಾಟಕವು ದೇಶದ ಅತ್ಯಂತ ದೊಡ್ಡ ಚಿಪ್ ವಿನ್ಯಾಸ ವಲಯವಾಗಿದೆ. ದೇಶದ ಶೇ 70ರಷ್ಟು ಚಿಪ್ ವಿನ್ಯಾಸಕರು ರಾಜ್ಯದಲ್ಲಿ ಉದ್ಯಮನಿರತರಾಗಿದ್ದಾರೆ ಎಂದರು.

Advertisement

ಇ.ಎಸ್.ಡಿ.ಎಂ. ವಲಯಕ್ಕೆ ಪ್ರೋತ್ಸಾಹಕರವಾದಂತಹ ಕಾರ್ಯನೀತಿಯನ್ನು ರಾಜ್ಯ ಹೊಂದಿದೆ. ಜೊತೆಗೆ, ನವೋದ್ಯಮಗಳ ಸ್ಥಾಪನೆಗೆ ಹಲವು ವಿನಾಯಿತಿಗಳನ್ನು ಹಾಗೂ ಪ್ರೋತ್ಸಾಹಕಗಳನ್ನು ನೀಡಲಾಗುತ್ತಿದೆ ಎಂದು ಅಶ್ವತ್ಥ ನಾರಾಯಣ ಹೇಳಿದರು.

ಐಟಿ‌ ನಿರ್ದೇಶಕಿ ಮೀನಾ‌ ನಾಗರಾಜ ಇದ್ದರು.

ವಿವಿಧ ವಿಭಾಗಗಳಲ್ಲಿನ ವಿಜೇತರ ಪಟ್ಟಿ ಹೀಗಿದೆ:
ನವೋದ್ಯಮಗಳು: ಪಥ್ ಶೋಧ್, ಹ್ಯಾಕ್ ಲ್ಯಾಬ್ಸ್, ದೇವಿಕ್ ಅರ್ಥ್, ಆಕ್ಸೆಲರಾನ್ ಲ್ಯಾಬ್ಸ್, ಇವಿಕ್ಯುಪಾಯಿಂಟ್, ಆಲ್ಫಾಐಸಿ, ನವೋದ್ಯಮ ಪರಿಪೋಷಕ: ಸೈನ್, ಐಐಟಿ ಮುಂಬೈ
ಸೂಕ್ಷ್ಮ, ಸಣ್ಣ, ಮಧ್ಯಮ ಗಾತ್ರದ ಉದ್ದಿಮೆಗಳು (ಎಂ.ಎಸ್.ಎಂ.ಇ): ಸಾಂಖ್ಯ ಲ್ಯಾಬ್ಸ್, ಸ್ಕ್ಯಾನ್ ರೇ, ಐವೇವ್, ಸಹಸ್ರ
ಉದ್ದಿಮೆ: ಎಎಂಡಿ, ಬಿಇಎಲ್, ಐಇನ್ಫೋಚಿಪ್ಸ್, ವಿಸ್ಟ್ರಾನ್
ತಂತ್ರಜ್ಞಾನ ದೂರದರ್ಶಿತ್ವ: ನಿವೃತಿ ರಾಯ್, ಪ್ರೊ,ರಾಮಗೋಪಾಲ್ ರಾವ್, ಪ್ರೊ.ಎ,ಪೌಲ್ ರಾಜ್, ಅರುಣಾ ಸುಂದರರಾಜನ್

Advertisement

Udayavani is now on Telegram. Click here to join our channel and stay updated with the latest news.

Next