Advertisement
ಮಾರ್ಚ್ ಮೊದಲ ವಾರದಿಂದ ಧಾರಣೆ ಏರಿಕೆಯ ನಾಗಾಲೋಟ ಮುಂದುವರಿದಿದ್ದು ಇದೀಗ ಮತ್ತಷ್ಟು ಜಿಗಿದಿದೆ. ಜತೆಗೆ ಅಡಿಕೆ ಧಾರಣೆ ಕೂಡ ಏರುಗತ್ತಿಯಲ್ಲಿ ಸಾಗಿದ್ದು ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಮಾ. 6ರಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹಸಿ ಕೊಕ್ಕೊ ಕೆ.ಜಿ.ಗೆ 150 ರೂ. ದಾಖಲಾಗುವ ಮೂಲಕ ಗರಿಷ್ಠ ಧಾರಣೆ ಎಂಬ ದಾಖಲೆ ಬರೆಯಿತು. ಅನಂತರ ಧಾರಣೆ ಏರಿಕೆಯತ್ತ ಸಾಗಿತ್ತು. ಮಾ.18 ರಂದು ಕೆ.ಜಿ.ಗೆ 170 ರೂ. ಧಾರಣೆ ದಾಖಲಾಯಿತು. ಮಾ. 22ರಂದು ಹೊರ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 185 ರೂ.ನಲ್ಲಿ ಖರೀದಿಯಾಗಿದ್ದು, ಪಂಜ ಹೊರ ಮಾರುಕಟ್ಟೆಯಲ್ಲಿ 190 ರೂ.ಗೆ ಖರೀದಿಸಲಾಗಿತ್ತು ಎಂದು ಬೆಳೆಗಾರರು ಮಾಹಿತಿ ನೀಡಿದ್ದಾರೆ. ಕ್ಯಾಂಪ್ಕೋ ಧಾರಣೆ ಮಾತ್ರ 170 ರೂ.ನಲ್ಲಿ ಸ್ಥಿರವಾಗಿತ್ತು. ಈಗಿನ ಧಾರಣೆ ಗಮನಿಸಿದರೆ ಸದ್ಯದಲ್ಲೇ 200 ರೂ.ಗಡಿ ದಾಟುವ ನಿರೀಕ್ಷೆ ಇದೆ. 450 ರೂ. ಗಡಿಯಲ್ಲಿ ಡಬ್ಬಲ್ ಚೋಲ್
ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ಏರಿಕೆ ಕಂಡಿದೆ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಧಾರಣೆ ಸ್ಥಿರವಾಗಿದ್ದರೆ ಹೊರ ಮಾರುಕಟ್ಟೆಯಲ್ಲಿ ಜಿಗಿತ ಕಂಡಿದೆ. ಡಬ್ಬಲ್ ಚೋಲ್ ಧಾರಣೆ 450 ರೂ. ಗಡಿಗೆ ತಲುಪಿದೆ. ಮಾ. 22ರಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಕೆ.ಜಿ.ಗೆ 340ರಿಂದ 355 ರೂ., ಸಿಂಗಲ್ ಚೋಲ್‌ಗೆ 420ರಿಂದ 430 ರೂ., ಡಬ್ಬಲ್ ಚೋಲ್‌ಗೆ 435 ರಿಂದ 445 ರೂ. ತನಕ ಇತ್ತು. ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಕೆ.ಜಿ.ಗೆ 357 ರೂ., ಸಿಂಗಲ್ ಚೋಲ್‌ಗೆ 432 ರೂ., ಡಬ್ಬಲ್ ಚೋಲ್‌ಗೆ 447 ರೂ. ಗೆ ಖರೀದಿಯಾಗಿದೆ.