Advertisement
ಸಂಪರ್ಕಿತರು 200ಕ್ಕೆ ಹೆಚ್ಚುವ ಸಾಧ್ಯತೆ ?: ಜಿಲ್ಲೆಯ ವಾಣಿಜ್ಯ ನಗರಿ ಚಿಂತಾ ಮಣಿಯಲ್ಲಿ ಚಿನ್ನದ ವ್ಯಾಪಾರಿ ಹಾಗೂ ಆತನ ಮೊಮ್ಮ ಗನದಲ್ಲಿ ಕಳೆದ ಶನಿವಾರ ಕಾಣಿಸಿಕೊಂಡಿರುವ ಸೋಂಕು ಚಿಂತಾಮಣಿ ನಗರದ ಜನತೆಯಲ್ಲಿ ಆತಂಕ ಮನೆ ಮಾಡಿದ್ದು, ಅವರ ಸಂಪರ್ಕಿತ ವ್ಯಕ್ತಿಗಳ ಪತ್ತೆಗೆ ಆರೋಗ್ಯ ಇಲಾಖೆ ಹರಸಾಹಸ ಮಾಡುತ್ತಿದ್ದು ಸಂಪರ್ಕಿತರು ಸದ್ಯಕ್ಕೆ 64 ಮಂದಿ ಇದ್ದರೂ ಅದರ ಸಂಖ್ಯೆ 200ಕ್ಕೆ ಏರುವ ಸಾಧ್ಯತೆ ದಟ್ಟವಾಗಿದೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಗೌರಿಬಿದನೂರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡರೂ ಸೋಂಕಿತರು ಶರವೇಗದಲ್ಲಿ ಗುಣಮುಖರಾದರು. ಇನ್ನೇನು ಮಹಾಮಾರಿ ಜಿಲ್ಲೆಯಿಂದ ತೊಲಗಿದೆ ಎನ್ನುವಷ್ಟರಲ್ಲಿ ಚಿಕ್ಕಬಳ್ಳಾಪುರ ನಗರದಲ್ಲಿ 75 ವರ್ಷದ ವೃದ್ಧನ್ನನ್ನು ಬಲಿ ಪಡೆಯಿತು. ಅವ ರಿಂದ ಸುಮಾರು 9 ಮಂದಿಗೆ ಸೋಂಕು ಕಾಣಿಸಿ ಕೊಂಡಿತ್ತು. ಚಿಕ್ಕಬಳ್ಳಾಪುರದ ಲ್ಲಿಯು 6 ಸೋಕಿತರು ಚೇತರಿಸಿಕೊಂಡು ಮನೆಗೆ ಮರಳಿ ದ್ದಾರೆ. ಇದೀಗ ಜಿಲ್ಲೆಯ ಚಿಂತಾಮಣಿ ನಗರದಲ್ಲಿ 71 ವರ್ಷದ ವೃದ್ಧನ ಹಾಗೂ ಆತನ ಮೊಮ್ಮಗನಲ್ಲಿ ಕೋವಿಡ್ ಪಾಸಿಟಿವ್ ಬಂದಿರುವುದು ಚಿಂತಾಮಣಿ ಜನರನ್ನು ಚಿಂತೆಗೀಡು ಮಾಡಿದೆ.
ಸೋಂಕು ಕಾಣಿಸಿರುವುದರಿಂದ ಯಾರಿಂದ ಯಾರಿಗೆ ಸೋಂಕು ಬಂದಿದೆ, ಸೋಂಕು ಹರಡಿರುವ ಮೂಲ ಯಾವುದು ಎಂಬುದರ ಬಗ್ಗೆ ಆರೋಗ್ಯಾಧಿಕಾರಿಗಳು ತಲೆ ಕೆಡಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. ಜೊತೆಗೆ ಸೋಂಕಿ ತರು ಚಿನ್ನದ ವ್ಯಾಪಾರಿ ಯಾಗಿದ್ದು, ಸಾಕಷ್ಟು ಮಂದಿ ಆತನ ಸಂಪರ್ಕಕ್ಕೆ ಬಂದಿರಬಹು ದೆಂದು ಆರೋಗ್ಯ ಇಲಾಖೆ ಅಂದಾಜಿಸಿದೆ. ಇದುವರೆಗೂ 64
ಮಂದಿಯನ್ನು ಪತ್ತೆ ಮಾಡಿ ಕ್ವಾರಂ ಟೈನ್‌ಗೆ ಒಳ ಪಡಿಸಲಾಗಿದ್ದು, ಇನ್ನೂ ಪತ್ತೆ ಕಾರ್ಯ ಮುಂದು ವರೆದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯೋಗೇಶ್‌ಗೌರ ಭಾನುವಾರ ‘ಉದಯವಾಣಿ’ ಗೆ ತಿಳಿಸಿದರು. ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಎರಡು ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಅವರ ಸಂಪರ್ಕದಲ್ಲಿದ್ದ 64 ಮಂದಿಯನ್ನು ಪತ್ತೆ ಮಾಡಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಅವರ ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯ ಮುಂದುವರಿದಿದೆ. ಇಬ್ಬರನ್ನು ಚಿಕ್ಕಬಳ್ಳಾಪುರ ನಗರದ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
● ಡಾ.ಯೋಗೇಶ್‌ಗೌಡ, ಜಿಲ್ಲಾ ಆರೋಗ್ಯಾಧಿಕಾರಿ