Advertisement

ಮದುವೆ ದಿಬ್ಬಣಕ್ಕೆ 51 ಟ್ರ್ಯಾಕ್ಟರ್… ರಾಜಸ್ಥಾನದಲ್ಲಿ ನಡೆದ ವರನ ದಿಬ್ಬಣದ ವಿಡಿಯೋ ವೈರಲ್

03:46 PM Jun 20, 2023 | Team Udayavani |

ರಾಜಸ್ಥಾನ: ಮದುವೆ ಎಂದ ಮೇಲೆ ಏನಾದರು ವಿಶೇಷತೆ ಇರಲೇಬೇಕು.. ತಮ್ಮ ಮದುವೆ ಇತರರಿಗಿಂತ ಭಿನ್ನವಾಗಿರಬೇಕು ಎಂದುಕೊಳ್ಳುವ ಮನಸ್ಥಿತಿ ಇಂದಿನ ಜನರದ್ದು ಅದಕ್ಕಾಗಿ ಜನ ಏನೆಲ್ಲಾ ಮಾಡುತ್ತಾರೆ, ಇದರಲ್ಲಿ ಮುಖ್ಯವಾಗಿ ಮದುವೆ ದಿಬ್ಬಣ ಬರುವ ವ್ಯವಸ್ಥೆ, ಇಲ್ಲಿ ಕೆಲವರು ಎತ್ತಿನ ಗಾಡಿ, ಜೆಸಿಬಿ, ಚಂಡೆ ವಾದನ, ಬೈಕ್ ರ್ಯಾಲಿ, ಕಾರುಗಳ ರ್ಯಾಲಿ ಹೀಗೆ ಹಲವು ರೀತಿಯಲ್ಲಿ ದಿಬ್ಬಣ ಬರುತ್ತಾರೆ ಅದೇ ರೀತಿ ರಾಜಸ್ಥಾನದಲ್ಲೊಂದು ನಡೆದ ಮದುವೆ ದಿಬ್ಬಣಕ್ಕೆ ಬರೋಬ್ಬರಿ 51 ಟ್ರ್ಯಾಕ್ಟರ್ ಬಳಸಿಕೊಂಡಿದ್ದಾರೆ. ಅಲ್ಲದೆ ಒಂದು ಟ್ರ್ಯಾಕ್ಟರ್ ಅನ್ನು ಸ್ವತಃ ವರನೇ ಚಾಲನೆ ಮಾಡಿಕೊಂಡು ಬಂದಿದ್ದಾನೆ.

Advertisement

ರಾಜಸ್ಥಾನದ ಜನರು ಕೃಷಿಯನ್ನೇ ಅವಲಂಬಿಸಿಕೊಂಡಿದ್ದಾರೆ ಅಂದಹಾಗೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಗುಡಮಲಾನಿ ಗ್ರಾಮದ ಪ್ರಕಾಶ್ ಚೌಧರಿ ಅವರು ರೋಲಿ ಗ್ರಾಮದ ಮಮತಾ ಅವರನ್ನು ಜೂನ್ 8 ರಂದು ವಿವಾಹವಾಗಿದ್ದಾರೆ. ಈ ವೇಳೆ ವರ ಪ್ರಕಾಶ್ ಚೌಧರಿ ಅವರ ತಂದೆ ಹಾಗೂ ತಾತನ ಮದುವೆ ಸಂದರ್ಭ ಒಂಟೆಗಳ ಮೇಲೆ ಮದುವೆ ದಿಬ್ಬಣ ಹೋಗಿದ್ದರು ಅದರಂತೆ ತನ್ನ ಮಗನ ಮದುವೆಯಲ್ಲಿ ಕೂಡ ದಿಬ್ಬಣವನ್ನು ವಿಭಿನ್ನವಾಗಿ ಮಾಡಬೇಕು ಅಂದುಕೊಂಡಿದ್ದರು ಅದರಂತೆ ತನ್ನ ಮಗನ ಮದುವೆ ದಿಬ್ಬಣವನ್ನು ಟ್ರ್ಯಾಕ್ಟರ್ ಮೂಲಕ ಮಾಡುವುದಾಗಿ ಮಾತುಕತೆ ನಡೆಸಿದರು, ಅದಕ್ಕೆ ಸರಿಯಾಗಿ ಟ್ರ್ಯಾಕ್ಟರ್ ಹೊಂದಿಸುವ ಕಾರ್ಯ ನಡೆಸಿದರು ತನ್ನ ಕುಟುಂಬ ವರ್ಗ ಕೃಷಿಯಲ್ಲಿ ತೊಡಗಿರುವ ಕಾರಣ ಕುಟುಂಬ ಸದಸ್ಯರೇ 30 ಟ್ರ್ಯಾಕ್ಟರ್ ಹೊಂದಿದ್ದರು ಉಳಿದ ಊರಿನ ಪರಿಚಯದವರ ಮೂಲಕ ಒಟ್ಟು 51 ಟ್ರ್ಯಾಕ್ಟರ್ ಗಳನ್ನು ಒಟ್ಟು ಸೇರಿಸಿ ಮದುವೆ ದಿನದಂದು ವರನ ಮನೆಯಿಂದ ವಧುವಿನ ಊರಿಗೆ ಸುಮಾರು 51 ಕಿಲೋಮೀಟರ್ ಅಂತರವಿದ್ದು ಇದನ್ನು ತಲುಪಲು 51 ಟ್ರ್ಯಾಕ್ಟರ್ ಮೂಲಕ ದಿಬ್ಬಣ ಹೊರಟಿದ್ದಾರೆ.

ಇದರ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಅಲ್ಲದೆ ಇಲ್ಲಿ ಒಂದು ಟ್ರ್ಯಾಕ್ಟರ್ ಅನ್ನು ಸ್ವತಃ ವರನೇ ಚಾಲನೆ ಮಾಡಿಕೊಂಡು ಬಂದಿರುವುದು ವಿಶೇಷವಾಗಿದೆ.
ಸದ್ಯ ಮದುವೆಯ ದಿಬ್ಬಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next