Advertisement
ಸರಕಾರದ ಉನ್ನತ ಮಟ್ಟದ ಅಧಿಕಾರಿ ಯೊಬ್ಬರು ಈ ವಿಚಾರ ಬಾಯಿಬಿಟ್ಟಿದ್ದಾರೆ. ನ.22ರಂದು ಜಮ್ಮು-ಕಾಶ್ಮೀರದ ಸಾಂಬಾ ವಲಯದಲ್ಲಿನ ಅಂತಾರಾಷ್ಟ್ರೀಯ ಗಡಿಯ ಸಮೀಪ 150 ಮೀಟರ್ ಉದ್ದದ ಸುರಂಗವನ್ನು ಯೋಧರು ಪತ್ತೆಹಚ್ಚಿದ್ದರು. ಬಿಎಸ್‌ಎಫ್ನ ಸ್ಥಾಪನಾ ದಿನವಾದ ಮಂಗಳ ವಾರ ಈ ಕಾರ್ಯಾಚರಣೆ ಕುರಿತು ಮಾತನಾಡಿದ ಬಿಎಸ್‌ಎಫ್ ಡಿಜಿ ರಾಕೇಶ್ ಅಸ್ಥಾನಾ, “ನಗ್ರೋಟಾ ಎನ್‌ಕೌಂಟರ್‌ನಲ್ಲಿ ಭಾಗಿಯಾಗಿದ್ದ ಉಗ್ರರು ಇದೇ ಸುರಂಗ ಬಳಸಿಕೊಂಡು ಭಾರತ ದೊಳಕ್ಕೆ ನುಸುಳಿದ್ದರು. ಸುರಂಗವನ್ನು ನೋಡುತ್ತಿದ್ದರೆ, ಅದು ಹೊಸತಾಗಿ ನಿರ್ಮಾ ಣ ವಾಗಿದ್ದು ಎಂಬುದು ಗೊತ್ತಾಗುತ್ತಿತ್ತು. ನಿರ್ಗಮನ ದ್ವಾರದಲ್ಲಿ ಪೊದೆಯಿರುವಂತೆ ನೋಡಿಕೊಳ್ಳಲಾಗಿತ್ತು. ಸುರಂಗದ ಪ್ರವೇಶ ದ್ವಾರದಲ್ಲಿ ಕರಾಚಿಯ ಗುರುತು ಇರುವ ಮರಳಿನ ಚೀಲಗಳನ್ನು ಇಡಲಾಗಿತ್ತು’ ಎಂದು ಹೇಳಿದ್ದಾರೆ. ಅವರು ಕಾರ್ಯಾ ಚರಣೆಯ ಕುರಿತ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ ಸರಕಾರಿ ಅಧಿಕಾರಿಯೊಬ್ಬರು ಮಾತನಾಡಿ, ಸುರಂಗ ಪತ್ತೆಗಾಗಿ ನಮ್ಮ ಯೋಧರು ಪಾಕಿಸ್ಥಾನದ ಗಡಿ ದಾಟಿ 200 ಮೀ. ಒಳಕ್ಕೆ ಸಾಗಿದ್ದರು ಎಂಬ ವಿಚಾರ ಬಹಿರಂಗಪಡಿಸಿದ್ದಾರೆ.
ಪಾಕ್ ಐಎಸ್‌ಐ ಮತ್ತು ಉಗ್ರರು ಜಮ್ಮು -ಕಾಶ್ಮೀರ ಹಾಗೂ ಪಂಜಾಬ್‌ನೊಳಕ್ಕೆ ಶಸ್ತ್ರಾಸ್ತ್ರಗಳನ್ನು ಅಕ್ರಮವಾಗಿ ಸಾಗಿಸಲು ಅತ್ಯುತ್ಕೃಷ್ಟ ಚೀನ ಡ್ರೋನ್‌ಗಳನ್ನು ಬಳಸುತ್ತಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಕಳೆದ ಕೆಲವು ವರ್ಷಗಳಿಂದ ಸಣ್ಣ ಪ್ರಮಾಣದ ಮಾನವ ರಹಿತ ವಿಮಾನಗಳ ಮೂಲಕ ಆಯುಧಗಳ ಪೂರೈಕೆ ಯಾಗು ತ್ತಿತ್ತು. ಆದರೆ ಈಗ ಹೆಚ್ಚಿನ ಪ್ರಮಾಣದ ಶಸ್ತ್ರಾಸ್ತ್ರಗಳು ಅಕ್ರಮವಾಗಿ ರವಾನೆಯಾ ಗುತ್ತಿದ್ದು, ಅದಕ್ಕಾಗಿ ಹೆಚ್ಚು ಸಾಮರ್ಥ್ಯದ ಅತ್ಯಾಧುನಿಕ ಡ್ರೋನ್‌ಗಳನ್ನು ಬಳಸುತ್ತಿರು ವುದು ಗೊತ್ತಾಗಿದೆ. ಮುಂದಿನ 2 ತಿಂಗಳುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡ್ರೋನ್ ಮೂಲಕ ಶಸ್ತ್ರಾಸ್ತ್ರ ಸಾಗಣೆ ಆಗುವ ಸಾಧ್ಯತೆಯಿದ್ದು, ನಿಗಾ ವಹಿಸುವಂತೆ ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ