Advertisement

ರಸ್ತೆ ಮೇಲೆ ಚೆಲ್ಲಿದ 200 ರೂ. ನೋಟುಗಳು;ಹೆಕ್ಕಿದ ಮೂವರಿಗೆ ಹೋಮ್‌ ಕ್ವಾರಂಟೈನ್‌!

10:24 PM Apr 18, 2020 | Sriram |

ಸವದತ್ತಿ/ಗಂಗಾವತಿ: ರಸ್ತೆ ಮೇಲೆ ಬಿದ್ದ ಸಂಶಯಾಸ್ಪದ 200 ರೂ. ಮುಖಬೆಲೆಯ ಹೊಸ ನೋಟುಗಳನ್ನು ಆಯ್ದುಕೊಳ್ಳಲು ಜನತೆ ಮುಗಿಬಿದ್ದ ಘಟನೆ ತಾಲೂಕಿನ ಹೂಲಿಕಟ್ಟಿ ಗ್ರಾಮದ ಬಸ್‌ ನಿಲ್ದಾಣದ ಪೆಟ್ರೋಲ್‌ ಬಂಕ್‌ ಬಳಿ ನಡೆದಿದೆ,

Advertisement

ಸುಮಾರು 8 ಸಾವಿರ ರೂ.ವನ್ನು ಕಂಡು ಒಬ್ಬೊಬ್ಬ ರಂತೆ 2,200, 2,600, 1,800 ರೂ.ಗಳನ್ನು ತಲಾ ಮೂವರು ತೆಗೆದುಕೊಂಡಿದ್ದು, ಉಳಿದ ಹಣ ತೆಗೆದಿರಿಸಿ ಕೊಂಡವರ ಬಗ್ಗೆ ಮಾಹಿತಿ ಇಲ್ಲ.

ರಸ್ತೆಯಲ್ಲಿ ಹೀಗೆ ಹಣ ಎಸೆದಿದ್ದು ಯಾರು? ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆ ಗೊತ್ತಾಗಿಲ್ಲ. ರಾತ್ರಿ ವೇಳೆ ಉದ್ದೇಶ ಪೂರ್ವಕವಾಗಿ ರಸ್ತೆ ಮೇಲೆ ಹಣ ಚೆಲ್ಲಿ ಹೋಗಿರಬಹುದೆಂದು ಹೇಳಲಾಗಿದೆ. ಪೊಲೀಸ್‌ ಇಲಾಖೆ ಸದ್ಯ ಶೋಧ ತೀವ್ರಗೊಳಿಸಿದೆ. ಕೋವಿಡ್‌ 19 ಭೀತಿಯಿಂದಾಗಿ ಮೂವರಿಂದ ಹಣ ವಶಪಡಿಸಿಕೊಂಡು ಅವರನ್ನು ಹೋಮ್‌ ಕ್ವಾರಂಟೈನ್‌ ಮಾಡಲಾಗಿದೆ ಎಂದು ಆರೋಗ್ಯಾಧಿಕಾರಿ ಮಹೇಶ ಚಿತ್ತರಗಿ ಸ್ಪಷ್ಟಪಡಿಸಿದ್ದಾರೆ.ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.ಇತ್ತ ಗಂಗಾವತಿಯಲ್ಲೂ 10 ರೂ. ನೋಟು ಎಸೆದ ಪ್ರಕರಣ ವರದಿಯಾಗಿದ್ದು ಜನ ಮನೆಯಿಂದ ಹೊರಗೆ ಬಾರದೆ ಕುಳಿತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next