Advertisement

ಆಗಸ್ಟ್ – ಸಪ್ಟೆಂಬರ್ ಅವಧಿಯಲ್ಲಿ ದೇಶದಲ್ಲಿ 200 ಕೋಟಿ ಡೋಸ್ ಲಸಿಕೆ..!

09:39 PM May 13, 2021 | Team Udayavani |

ನವ ದೆಹಲಿ : 216 ಕೋಟಿ ಡೋಸ್ ಲಸಿಕೆಗಳು ಮುಂದಿನ ಆಗಸ್ಟ್​ ಸೆಪ್ಟೆಂಬರ್​ ಅವಧಿಯಲ್ಲಿ ಉತ್ಪಾದನೆಯಾಗಲಿವೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ಹೇಳಿದ್ದಾರೆ.

Advertisement

ದೇಶದಲ್ಲಿ ವೇಗವಾಗಿ ಹರಡುತ್ತಿರುವ ಕೊವಿಡ್ ವಿರುದ್ಧದ ಹೋರಾಟದಲ್ಲಿ ಲಸಿಕೆಗಳು ಬಹುಮುಖ್ಯ ಪಾತ್ರ ವಹಿಸಲಿವೆ ಎಂದು ಹೇಳಲಾಗುತ್ತಿದ್ದು, ಸೇರಮ್ ಇನ್ಸ್ಟಿಟ್ಯೂಟ್​ ನ ಆಸ್ಟ್ರೋಜೆನೆಕಾ ಲಸಿಕೆಯ 75 ಕೋಟಿ ಡೋಸ್​, ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್​ ಲಸಿಕೆ ​55 ಕೋಟಿ ಡೋಸ್ ಲಭ್ಯವಾಗಲಿಕ್ಕಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಕೋವಿಡ್ ಸಂಕಷ್ಟದಲ್ಲೂ 417 ಭೂಸ್ವಾಧೀನ ಪ್ರಕರಣ ಇತ್ಯರ್ಥ : ಡಿಸಿಎಂ ಗೋವಿಂದ ಕಾರಜೋಳ ಶ್ಲಾಘನೆ

ಇನ್ನು, ದೇಶದಲ್ಲಿ 300 ಕೋಟಿ ಡೋಸ್ ಲಸಿಕೆ ಮುಂದಿನ ವರ್ಷದ ತ್ರೈಮಾಸಿಕದೊಳಗೆ ಲಭ್ಯವಾಗಲಿಕ್ಕಿದೆ ಎಂದಿದ್ದಾರೆ.

ಮುಂದಿನ ಈ ಅವಧಿಗಳಲ್ಲಿ ಉತ್ಪಾದನೆ ಆಗಲಿರುವ ಲಸಿಕೆಗಳ ಬಯಾಲಾಜಿಕಲ್ ಇ ಸಂಸ್ಥೆಯ 30 ಕೋಟಿ ಲಸಿಕೆ, ಸೇರಮ್ ಇನ್ಸ್ಟ್ಇ ಟ್ಯೂಟ್ ನ ನೊವಾವಾಕ್ಸ್ ಲಸಿಕೆ 20 ಕೋಟಿ, ಸ್ಪುಟ್ನಿಕ್ ವಿ ಲಸಿಕೆ 16 ಕೋಟಿ ಡೋಸ್, ಭಾರತ್ ಬಯೋಟೆಕ್​ ನ ನಸಲ್ ಲಸಿಕೆ 10 ಕೋಟಿ ಡೋಸ್, ಝೈಡಸ್ ಕ್ಯಾಡಿಲ್ 5 ಕೋಟಿ ಡೋಸ್ ಲಸಿಕೆ, ಜಿನ್ನೋವಾದ 6 ಕೋಟಿ ಡೋಸ್ ಲಸಿಕೆಗಳು ಕೂಡ ಇರಲಿಕ್ಕಿದೆ ಎಂದಿದ್ದಾರೆ.

Advertisement

ಅಮೆರಿಕಾ ಒಪ್ಪಿಗೆ ನೀಡಿದ ಯಾವುದೇ ಲಸಿಕೆಯನ್ನು ಭಾರತದಲ್ಲೂ ಬಳಕೆ ಮಾಡಬಹುದು. ಲಸಿಕೆ ಆಮದಿಗೆ ಸರ್ಕಾರ ಯಾವುದೇ ಸುಂಕ ವಿಧಿಸುತ್ತಿಲ್ಲ. ಕೆಲವು ದಿನಗಳಲ್ಲಿಯೇ  ಪರವಾನಗಿಯನ್ನೂ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಔಷಧ ಕೊರತೆಯಾಗದಂತೆ ಕಟ್ಟೆಚ್ಚರ : 5 ಲಕ್ಷ ರೆಮಿಡಿಸಿವರ್‌ ಆಮದು : ಡಿಸಿಎಂ

Advertisement

Udayavani is now on Telegram. Click here to join our channel and stay updated with the latest news.

Next