Advertisement

ಭಾರತ ಮೂಲದ ಶುಶ್ರೂಷಕನಿಗೆ 20 ವರ್ಷ ಕಾರಾಗೃಹ ವಾಸ!

10:57 PM May 30, 2021 | Team Udayavani |

ಹೂಸ್ಟನ್‌: ಸುಮಾರು 376 ಕೋಟಿ ರೂ. ಮೌಲ್ಯದ ಹಗರಣವೊಂದರಲ್ಲಿ ನೇರವಾಗಿ ಭಾಗಿಯಾದ ಆರೋಪದ ಮೇರೆಗೆ ಅಮೆರಿಕದಲ್ಲಿ ತನ್ನದೇ ಕ್ಲಿನಿಕ್‌ ತೆರೆದು ಸೇವೆ ಸಲ್ಲಿಸುತ್ತಿದ್ದ ತ್ರಿವಿಕ್ರಮ್‌ ರೆಡ್ಡಿ (39) ಎಂಬ ಭಾರತೀಯ ಶುಶ್ರೂಷಕನಿಗೆ ಅಮೆರಿಕದ ಉತ್ತರ ಟೆಕ್ಸಾಸ್‌ನ ನ್ಯಾಯಾಲಯ 20 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.

Advertisement

ಅಲ್ಲದೆ, ಹಗರಣದಲ್ಲಿ ಕೊಳ್ಳೆ ಹೊಡೆಯಲಾಗಿರುವ 376 ಕೋಟಿ ರೂ.ಗಳನ್ನು ಹಿಂದಿರುಗಿಸುವಂತೆಯೂ ರೆಡ್ಡಿಗೆ ನ್ಯಾಯಾಧೀಶರಾದ ಪ್ರೇರಕ್‌ ಶಾ ಸೂಚಿಸಿದ್ದಾರೆ.

ಆರೋಗ್ಯ ವಿಮೆಗಳನ್ನು ಮಾರಾಟ ಮಾಡುವ ಮೆಡಿಕೇರ್‌ ಎಂಬ ನಕಲಿ ವ್ಯೂಹವೊಂದನ್ನು ಸೃಷ್ಟಿಸಿಕೊಂಡಿದ್ದ ಈತ ಆ ಮೂಲಕ ನೂರಾರು ಆರೋಗ್ಯ ವಿಮಾ ಕಂಪೆನಿಗಳಿಗೆ ಮೋಸ ಮಾಡಿರುವ ಆರೋಪವಿದೆ.

ಹಲವಾರು ವರ್ಷಗಳಿಂದ, ಟೆಕ್ಸಾಸ್‌ ಮೂಲದ ಬ್ಲೂ ಕ್ರಾಸ್‌ ಬ್ಲೂ ಶೀಲ್ಡ್‌ ಸಂಸ್ಥೆ ಸೇರಿದಂತೆ ಅಮೆರಿಕದಲ್ಲಿ ಆರೋಗ್ಯ ವಿಮೆ ಸೇವೆ ನೀಡುವ ಮೆಡಿಕೇರ್‌, ಏಟ್ನಾ, ಯುನೈಟೆಡ್‌ ಹೆಲ್ತ್‌ಕೇರ್‌, ಹ್ಯುಮಾನಾ ಹಾಗೂ ಸಿಗ್ನಾ ಎಂಬ ಕಂಪೆನಿಗಳಿಗೆ ಮೋಸ ಮಾಡಿದ್ದ ಎನ್ನಲಾಗಿದೆ. 2019ರಲ್ಲಿ ಈತನ ಕುಕೃತ್ಯ ಬಹಿರಂಗವಾದ ಅನಂತರ ಈತನ ಕ್ಲಿನಿಕ್‌ ಮುಚ್ಚಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next