Advertisement

Kundapura 20 ವರ್ಷ ಹಳೆಯ ಚಿನ್ನದ ವಿವಾದ: ಆರೋಪ, ಪ್ರತ್ಯಾರೋಪ; ದೂರು, ಪ್ರತಿದೂರು

01:14 AM Aug 22, 2024 | Team Udayavani |

ಕುಂದಾಪುರ: 20 ವರ್ಷಗಳ ಹಿಂದೆ ಅಂತ್ಯಕ್ರಿಯೆ ಸಲುವಾಗಿ ಚಿನ್ನದ ಸರವೊಂದನ್ನು ಅಡವಿಡಲಾಗಿದೆ ಎಂಬ ವಿಚಾರದಲ್ಲಿ ವಾದ ವಿವಾದ ಆರೋಪ ಪ್ರತ್ಯಾರೋಪ ನಡೆದು ಹಲ್ಲೆ ಹಂತದವೆರೆಗೆ ತಲುಪಿ ಎರಡೂ ಕಡೆಯಿಂದ ಪ್ರಕರಣ ದಾಖಲಾಗಿದೆ.

Advertisement

ಗುಲ್ವಾಡಿ ಗ್ರಾಮದ ಮಣಿಕಂಠ (30) ಅವರ ದೂರಿಕೊಂಡಂತೆ ತಾಯಿ ಜ್ಯೋತಿ ಅವರು 20 ವರ್ಷಗಳ ಹಿಂದೆ ಮೃತರಾಗಿದ್ದು, ಅವರ ಅಂತ್ಯಕ್ರಿಯೆಯನ್ನು ಮಕ್ಕಳು ನಡೆಸಿದ್ದರು. ತಂದೆಗೆ ಕುಡಿತದ ಚಟವಿರುವುದರಿಂದ ಜ್ಯೋತಿ ಅವರ 2 ಪವನ್‌ ತೂಕದ ಚಿನ್ನದ ಕರಿಮಣಿ ಸರವನ್ನು ದೊಡ್ಡಮ್ಮ ಗಿರಿಜಾ ಅವರಲ್ಲಿ ಇಟ್ಟು ಕೊಳ್ಳಲು ಕೊಟ್ಟಿದ್ದು , ಗಿರಿಜಾ ಸಾಲ ಪಡೆಯುವ ಉದ್ದೇಶದಿಂದ ಸೊಸೈಟಿಯಲ್ಲಿ ಅಡವಿಟ್ಟಿದ್ದು ಇದುವರೆಗೂ ಬಿಡಿಸಿ ಕೊಟ್ಟಿಲ್ಲ. 6 ತಿಂಗಳ ಒಳಗಾಗಿ ಬಿಡಿಸಿ ಕೊಡುವುದಾಗಿ ತಿಳಿಸಿದ್ದು, ಚಿಕ್ಕಮ್ಮನ ಮಗ ಅಭಿಷೇಕನ ಮನೆಗೆ ತನ್ನ ತಮ್ಮ ಸುಬ್ರಹ್ಮಣ್ಯನ ಜತೆ ಹೋದಾಗ ರಘು, ಅಭಿಷೇಕ್‌, ಸಾಧು ಹಾಗೂ ಕನಕ ಅವರು ಹಲ್ಲೆ ನಡೆಸಿ ಬೈದಿದ್ದಾರೆ ಎಂದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೇ ಪ್ರಕರಣ ಸಂಬಂಧ ಗುಲ್ವಾಡಿ ಗ್ರಾಮದ ಕನಕ (47) ದೂರು ನೀಡಿದ್ದು ಅಕ್ಕ ಜ್ಯೋತಿ ಅವರ ಅಂತ್ಯಕ್ರಿಯೆಗೆ ಹಣವಿಲ್ಲದಿದ್ದಾಗ ಹಿರಿಯ ಅಕ್ಕ ಗಿರಿಜಾ 1 ಪವನ್‌ ಚಿನ್ನದ ಸರ ಮಾರಾಟ ಮಾಡಿ ಜ್ಯೋತಿ ಅವರ ಅಂತ್ಯಕ್ರಿಯೆ ಮಾಡಿದ್ದಾರೆ.

ಜ್ಯೋತಿ ಅವರ ಮಕ್ಕಳಾದ ಮಣಿಕಂಠ ಮತ್ತು ಸುಬ್ರಹ್ಮಣ್ಯ ತಾಯಿಯ ಸರವನ್ನು ದೊಡ್ಡಮ್ಮನಾದ ಗಿರಿಜಾ ಅವರಿಂದ ವಾಪಾಸು ತೆಗೆಸಿಕೊಡುವಂತೆ ತನ್ನಲ್ಲಿ ಕೇಳಿದಾಗ ಅದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದಾಗ ಆರೋಪಿತರಾದ ಮಣಿಕಂಠ, ಸುಬ್ರಹ್ಮಣ್ಯ, ನಾಗೇಶ್‌ ಮತ್ತು ಮಹೇಂದ್ರ ಅವರು ತಮ್ಮ ಮಗ ಅಭಿಷೇಕನಿಗೆ, ತಂಗಿ ಸಾಧು ಅವರಿಗೆ ಹಲ್ಲೆ ನಡೆಸಿದ್ದಾಗಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next