ಕಲ್ಪತರು ನಾಡಿನ ರೈತರ ಜೀವನಾಧಾರ ಹಾಗೂ ಪ್ರಮುಖ ವಾಣಿಜ್ಯ ಬೆಳೆ ತೆಂಗು. ಇದರ ಪ್ರಮುಖ ಉತ್ಪನ್ನ ಒಣ ಕೊಬ್ಬರಿ. ಇದರ ಬೆಲೆ ಕಳೆದ ವರ್ಷ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 18 ಸಾವಿರ ರೂ. ಇತ್ತು. ಪ್ರಸ್ತುತ ತಿಪಟೂರಿನ ಪ್ರಸಿದ್ಧ ಕೊಬ್ಬರಿ ಮಾರುಕಟ್ಟೆಯಲ್ಲಿಹಾಲಿ 9 ಸಾವಿರ ರೂ. ಆಸುಪಾಸಿಗೆ ಕುಸಿದಿದೆ.
Advertisement
ಕೊಬ್ಬರಿ ಬೆಲೆ ತೀವ್ರ ಕುಸಿತವಾಗಿರುವುದರ ವಿರುದ್ಧ ತಿಪಟೂರಿನಲ್ಲಿ ತೆಂಗು ಬೆಳೆಗಾರರ ಪರ ರೈತ, ವಿವಿಧ ಸಂಘಟನೆಗಳು ನಿರಂತ ರವಾಗಿ ಹೋರಾಟ ನಡೆಸುತ್ತಿವೆ. ಆದರೂ ಕೇಂದ್ರ ಹಾಗೂ ರಾಜ್ಯ ಸರಕಾರ ಯಾವುದೇ ಸ್ಪಂದನೆ ನೀಡಿಲ್ಲ. ಇದೇ ರೀತಿ ವಿವಿಧ ಪಕ್ಷಗಳೂ ಕೊಬ್ಬರಿ ಬೆಂಬಲ ಬೆಲೆ ಬಗ್ಗೆ ಹಾಗೂ ಧಾರಣೆ ಬಗ್ಗೆ ಯಾವ ನಿಲುವನ್ನೂ ಹೊಂದಿಲ್ಲ. ಪಕ್ಷಗಳ ಚುನಾವಣ ಪ್ರಣಾಳಿಕೆ ಗಳಲ್ಲಿ ತೆಂಗು ಬೆಳೆಗಾರರ ಬಗ್ಗೆ ಏನೂ ಹೇಳಿಲ್ಲ.
Related Articles
ಒಂದು ಕ್ವಿಂಟಾಲ್ ಕೊಬ್ಬರಿ ಬೆಳೆಯಲು 16,000ರೂ.ಕ್ಕೂ ಹೆಚ್ಚು ಖರ್ಚು ಬರುತ್ತಿದೆ. ತೆಂಗು ಬೆಳೆಗಾರರಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿಮಾಡಬೇಕು ಎಂದು ನೀಡಿರುವ ವರದಿ ಜಾರಿಗೆ ತರಬೇಕು. ತೆಂಗಿನ ಕಾಯಿಗಳಿಂದ ಉತ್ತಮ ಗುಣಮಟ್ಟದ ಕೊಬ್ಬರಿ ತಯಾರಿ ಆಗಿರುವ ಬಗ್ಗೆ ತೋಟಗಾರಿಕ ವಿಜಾnನಿಗಳಿಂದ ಉತ್ತಮ ತರಬೇತಿ, ಪೋ›ತ್ಸಾಹ ನೀಡಬೇಕು. ಕೊಬ್ಬರಿ ಬೆಲೆ ಯಾವಾಗಲೂ ಸಾಕಷ್ಟು ಏರಿಳಿತ ಇರುವುದರಿಂದ ಲಾಭದಾಯಕ ಬೆಂಬಲ ಬೆಲೆ ನೀಡಿ ಎಪಿಎಂಸಿ ಮಾರುಕಟ್ಟೆಗಳಲ್ಲಿ ಸರಕಾರ ನಫೆಡ್ ಖರೀದಿ ಕೇಂದ್ರಗಳನ್ನು ಸದಾಕಾಲ ತೆರೆದು ಬೆಂಬಲ ಬೆಲೆ ಹಾಗೂ ಪೋ›ತ್ಸಾಹ ಬೆಲೆ ನೀಡಿ ಕೊಬ್ಬರಿ ಖರೀದಿಸಬೇಕು. ತೆಂಗಿನ ಕಾಯಿ ಹಾಗೂ ಕೊಬ್ಬರಿಯಿಂದ ಹೆಚ್ಚು ಉಪ ಉತ್ಪನ್ನಗಳನ್ನು ಯುವ ರೈತರು ತಯಾರಿಸಲು ತರಬೇತಿ, ಮಾರುಕಟ್ಟೆ ಒದಗಿಸಲು ಸರಕಾರ ಮುಂದಾಗಬೇಕು. ಎಳನೀರನ್ನು ವಿವಿಧ ತಂಪು ಪಾನೀಯಗಳ ರೀತಿ ಮಾರಾಟ ಮಾಡುವಂತಹ ತಾಂತ್ರಿಕತೆ ಒದಗಿಸುವ ಕೆಲಸವನ್ನು ತೋಟಗಾರಿಕೆ ಮೂಲಕ ಒದಗಿಸುವ ಬಗ್ಗೆ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿ ಜಾರಿಗೆ ತರಬೇಕು. ಕೊಬ್ಬರಿ ಎಣ್ಣೆ ಆರೋಗ್ಯಕ್ಕೆ ಹೆಚ್ಚು ಅನುಕೂಲವಿರುವುದರಿಂದ ಸರಕಾರ ಎಲ್ಲೆಡೆ ಕೊಬ್ಬರಿ ಎಣ್ಣೆ ಬಳಸಲು ಹೆಚ್ಚು ಜಾಗೃತಿ, ಮಾರುಕಟ್ಟೆ ಒದಗಿಸಿ ತೆಂಗು ಬೆಳೆಗಾರರ ನೆರವಿಗೆ ನಿಲ್ಲಬೇಕು.
Advertisement