Advertisement

ಟ್ವೆಂಟಿ ನಮ್ಮದ್ದೂ…ಎಂಟೇ ನಿಮ್ಮದ್ದೂ…

12:30 AM Mar 17, 2019 | Team Udayavani |

ತೆನೆ-ಕೈ ಕೂಡ್ಕ್ ಆದ್‌ಮ್ಯಾಕೆ ಆಗಿರೋ ಸೀನ್‌ ಕ್ರಿಯೇಟ್‌ ನೋಡಿ ಬಿಜೆಪಿಯೋರು ಜೋಶ್‌ನ್ಯಾಗೆ ಫ‌ುಲ್‌ ಕುಸಿಯಾಗವ್ರೆ. ಟ್ವೆಂಟಿ ಪಕ್ಕಾ ಅಂತ ಯಡ್ನೂರಪ್ನೊರು ಎಲ್ಡ್‌ ಬೆರ್ಲು ಅಲ್ಲಾಡಸ್ತಾವ್ರೆ. ಅಮಿತ್‌ ಸಾ ಅವ್ರು ಹೆಡ್‌ ಮಾಸ್ತರ್‌ ತರಾ ಕೋಲ್‌ ಇಟ್ಕೊಂಡು ಬೀಸ್‌ ಸೀಟ್‌ ಆನಾ ಚಾಯಿಯೇ ಅಂದ್ರಂತೆ. ಅದ್ಕೆ, ಎಲ್ರೂ ಹೂಂಗುಟ್ಟವ್ರಂತೆ. ರೇವಣ್ಣೋರು, ಅದೆಂಗ್‌ ಬಿಜೆಪಿಯೋರು ಬೀಸ್‌, ಪಚ್ಚೀಸ್‌ ಗೆಲ್ತಾರೆ ನೋಡುಮಾ, ನಾವು-ಕಾಂಗ್ರೆಸ್‌ನೋರು ಒಂದೇ ತಾಯಿ ಮಕ್ಳು ಅಂತೇಳಿ, ಸಿದ್ರಾಮಣ್ಣೋರ್‌ ತಾವಾ ಹೋಗಿ ಪ್ರಜ್ವಲ್‌ಗೆ ನಿಮ್‌ ಆಸೀರ್ವಾದ ಇರ್ಲಿ ಅಂತೇಳಿದ್ರಂತೆ. 

Advertisement

ಅಮಾಸೆ: ನಮ್‌ಸ್ಕಾರ ಸಾ….
ಚೇರ್ಮನ್ರು: ಏನ್ಲಾ ಅಮಾಸೆ, ಎತ್ತಾಗ್ಲ ಹೊಂಟೋಗಿದ್ದೆ
ಅಮಾಸೆ: ಎಂಪಿ ಎಲೆಕ್ಸನ್‌ ಆನೌನ್ಸ್‌ಮೆಂಟ್‌ ಆಗೈತಲ್ವೇ ಸಾ ಅದ್ಕೆ ಡೆಲ್ಲಿಗೊಂಟೋಗಿದ್ದೆ
ಚೇರ್ಮನ್ರು: ಅಲ್ಲೇನ್ಲಾ ನಿಂಗೆ ಕೇಮು
ಅಮಾಸೆ: ಎಂ.ಪಿ. ಎಲೆಕ್ಸನ್‌ನ್ಯಾಗೆ ಕೈ-ತೆನೆ ಪಕ್ಸ ಕೂಡ್ಕ್ ಮಾಡ್ಕಂತಲ್ವೇ. ಸೀಟ್‌ ಸೇರಿಂಗ್‌ ಏನಾಯ್ತದೆ ನೋಡುಮಾ ಅಂತ ಹೊಂಟೋಗಿದ್ದೆ
ಚೇರ್ಮನ್ರು: ಏನಾತ್ಲಾ ಸೇರಿಂಗು
ಅಮಾಸೆ: ಕೈ ಪಕ್ಸಕ್ಕೆ ಟ್ವೆಂಟಿ, ತೆನೆ ಪಕ್ಸಕ್ಕೆ ಎಂಟು ಸೀಟ್‌ ಕೊಟ್ಟವ್ರೆ
ಚೇರ್ಮನ್ರು: ಅದ್ಯಾಕ್ಲ , ದೊಡ್‌ ಗೌಡ್ರು ಮಿನಿಮಮ್‌ ಟೆನ್‌ ಅಂತಿದ್ರು, ಕುಮಾರಣ್ಣೋರು ವೀ ಆರ್‌ ನಾಟ್‌ ಬೆಗ್ಗರ್ ಅಂದಿದ್ರು
ಅಮಾಸೆ: ಅಂದಿದ್ರು ಆಮ್ಯಾಕೆ ರಾಹುಲ್‌ ಅಣ್ಣೋರು ಗೌಡ್ರತಾವಾ ಮಾತಾಡಿ ಕಬೂಲ್ಕಿàಜಿಯೇ ಗೌಡಾಜಿ ಅಂತ ಹೇಳಿದ್ರಂತೆ. ಅದ್ಕೆ ಆಯ್ತು ಬುಡಿ ಅಂತ ಸೈಲಂಟಾಗವ್ರೆ. ಹೆಂಗೂ ಸಿಎಂ ಸೀಟೇ ಬಿಟ್‌ ಕೊಟ್ಟವ್ರಲ್ವೇ
ಚೇರ್ಮನ್ರು: ಗೌಡ್ರು ಮೈಸೂರ್‌ನ್ಯಾಗೆ ಕಂಟೆಸ್ಟ್‌ ಅಂದ್ರು, ಮೈಸೂರ್‌ ಯಾಕ್ಲಾ ಕೊಟ್ಟಿಲ್ಲ
ಅಮಾಸೆ: ಅಲ್ಲಿ ಸಿದ್ರಾಮಣ್ಣೋರು ಮೊದ್ಲೆ ಟವಲ್‌ ಹಾಕಿ ನಮೆªà ಹವಾ ಅಂತ ಹೇಳಿದ್ರಂತೆ ಅದ್ಕೆ ಯೇಣು ಗೋಪಾಲ್‌ ಅವ್ರು ಮೈಸೂರು ನಾಟ್‌ ಓಕೆ ಅಂದ್ರಂತೆ
ಚೇರ್ಮನ್ರು: ತುಮ್‌ಕೂರ್‌ ತಂಟೆಗೆ ಬರ್ಬೇಡಿ ಅಂತ ಪರಮೇಸ್ವರಣ್ಣೋರು ಗೌಡ್ರಿಗೆ ದುಂಬಾಲ್‌ ಬಿದ್ದವ್ರಂತೆ
ಅಮಾಸೆ: ಹೌದ್‌ ಕಣೇಳಿ. ತುಮ್‌ಕೂರ್‌ ಬೇಕೇ ಬೇಕು ಅಂತ ಹೈಕಮಾಂಡ್‌ ಲೆವೆಲ್‌ನ್ಯಾಗೆ ಪರಮೇಸ್ವರಣ್ಣೋರು ಮೈಂಟೇನ್‌ ಮಾಡಿದ್ರು. ತುಮಕೂರ್‌ ಸಿಗ್‌ದಿದ್ರೆ ಗೌಡ್ರು ಮೈಸೂರ್‌ಗೊಂಟೋಯ್ತಾರೆ, ಸಿದ್ರಾಮಣ್ಣೋರ್‌ಗೆ ಟಾಂಗ್‌ ಕೊಡ್‌ಬೋದು ಅಂದ್ಕಂಡಿದ್ರು. ಆದ್ರೆ, ಸಿದ್ರಾಮಣ್ಣೋರು ಮೈಸೂರ್‌ ಬಿಟ್‌ಕೊಡಾಕಿಲ್ಲಾ ಬೇಕಾದ್ರೆ ತುಮಕೂರ್‌ ತಗಳಿ ಅಂತ ಪರಮೇಸ್ವರಣ್ಣೋರೆ ಹಲ್ವಾ ಕೊಟ್‌ಬಿಟ್ರಂತೆ
ಚೇರ್ಮನ್ರು: ಈಗೇನ್‌ ತುಮ್‌ಕೂರ್‌ ಬಿಟ್‌ಕೊಟ್ಟಾರಾ
ಅಮಾಸೆ: ಅದೆಂಗಾಯ್ತದೆ. ಮೈಸೂರ್‌ ಇಲ್ಲ, ತುಮ್‌ಕೂರ್‌ ಇಲ್ಲ ಅಂತೇಳಿ, ಉತ್ರ ಕನ, ಉಡಿ³ ಚಿಕ್‌ಮಗ್ಳೂರು ಇಟ್ಕೊಂಡ್‌ ಉಪ್ಪಿನ್‌ಕಾಯಿ ಹಾಕ್ಕೊಂಡ್‌ ನೆಕ್ಕೊಳ್ಳೋದಾ ಅಂತ ತೆನೆ ಹೈಕ್ಳು ರಾವಿ ಮಾಡ್ತಾವ್ರೆ
ಚೇರ್ಮನ್ರು: ಅಂಗಾರೆ ಗೌಡ್ರು ಎಲ್‌ ನಿಂತ್ಕೊತಾರೆ
ಅಮಾಸೆ: ಬೆಂಗ್ಳೂರ್‌ ನಾರ್ತ್‌, ಇಲ್ವೇ ತುಮ್‌ಕೂರ್‌. ತುಮ್‌ಕೂರ್‌ ಕೈಗೆ ಬಿಟ್ಕೊಟ್ರೆ ಮೈಸೂರ್‌. ಅದೂ ಸಿಗೆªà ಹೋದ್ರೆ ನಾ ಎಲೆಕ್ಸನ್‌ ನಿಲ್ಲಾಕಿಲ್ಲಾ, ಶ್ಯಾನೆ ಬೇಸ್ರ ಆಗೈತೆ ಅಂತ ಕಂಟೆಸ್ಟ್‌ ಮಾಡ್ದೆನೂ ಇರ್‌ಬೋದು ಸಾ
ಚೇರ್ಮನ್ರು: ಕಮ್ಲ ಪಕ್ಸ ಕಥೆ ಏನ್ಲಾ
ಅಮಾಸೆ: ತೆನೆ-ಕೈ ಕೂಡೆ ಆದ್‌ಮ್ಯಾಕೆ ಕಮ್ಲ ಪಕ್ಸ್‌ದೋರು ಬಲ್ಲೆ…ಬಲ್ಲೆ …ಅಂತ ಭುಜ ಕುಣ್‌ತಾವ್ರೆ. ಜಾಸ್ತಿ ಸೀಟ್‌ ಗೆಲ್‌ಬೋದಾ ಅಂತ ಗಿಣಿ ಶಾಸ್ತ್ರ ಕೇಳವ್ರೆ.
ಚೇರ್ಮನ್ರು: ಕೈ-ತೆನೆ ಪಕ್ಸ್‌ದೋರು ಒಂದಾಗಿರೋದು ದಿಟ್‌ವೇನ್ಲಾ 
ಅಮಾಸೆ: ಸಿಚ್ಯುಯೇಸನ್‌ ನೋಡಿದ್ರೆ ಅಂಗ್‌ ಅನ್ಸಲ್ಲ.  ಕೈ-ತೆನೆ ಪಕ್ಸ ಸೀಟ್‌ ಸೇರಿಂಗ್‌ ಆದ್‌ಮ್ಯಾಕೆ ಎಲೂx ಪಕ್ಸ್‌ದ್ಯಾಗೆ ಲೋಕಲ್‌ ಲೀಡ್ರಗ್ಳು ಬೇಸ್ರ ಆಗವ್ರೆ. ಅದು ಇಬ್ರುಗೂ ಟಾಂಗ್‌ ಕೊಡ್ತದೆ ಅಂತೇಳ್ತಾವ್ರೆ. ಕೈ-ತೆನೆ ಸಪರೇಟಾಗಿ ಫೀಲ್ಡಿಗಿಳಿದಿದ್ರೆ ಇಬ್ರುಗೂ ಒಳ್ಳೇದಾಯ್ತಿತ್ತು ಅಂತಾವ್ರೆ
ಚೇರ್ಮನ್ರು: ಕಮ್ಲ ಪಕ್ಸ್‌ದಾಗೆ ಸ್ಟ್ರಾಂಗ್‌ ಕ್ಯಾಂಡೇಟ್‌ ಆವ್ರೇನ್ಲಾ
ಅಮಾಸೆ: ಫಿಪ್ಟೀನ್‌ ಸಿಟ್ಟಿಂಗ್‌ ಎಂಪಿಗ್ಳು ಅವ್ರೆ. ಮೋದಿ ಹೆಸ್ರೇಳಿ ಇನ್ನೂ ಫೈವ್‌ ಗೆಲ್ಲೋದು ಅವ್ರ ಪಿಲಾನು
ಚೇರ್ಮನ್ರು: ಅದಾಯ್ತತಾ
ಅಮಾಸೆ: ಆಗಾಕಿಲ್ಲಾ, ಬೆಂಗ್ಳೂರು ಉತ್ರದಾಗೆ ಗೌಡ್ರು ನಿಂತ್ರೆ. ಪ್ರಾಯಶಃ ಸದಾನಂದಗೌಡ್ರಿಗೆ ಕಷ್ಟ ಅಂತಾವ್ರೆ. ಮೈಸೂರ್‌ನ್ಯಾಗೆ ಕೈ-ತೆನೆ ಕಷ್ಟ ಬಿದ್ರೆ ಪ್ರತಾಪಣ್ಣೋರು ವಸಿ ಪ್ರಾಬ್ಲಿಮ್ಮು ಅಂತಾವ್ರೆ. ನೋಡ್ಬೇಕು ಸಾ
ಚೇರ್ಮನ್ರು: ಕೈ ಪಕ್ಸ್‌ದ್ಯಾಗೆ ಮುನಿಯಪ್ನೊರೆ ಟಿಕೆಟ್‌ ಕೊಡ್‌ಬಾರ್ಧು ಅಂತಾವ್ರಂತೆ
ಅಮಾಸೆ: ಅಯ್ಯೋ ನಾಲ್ಕು ದಪಾ ಇದೇ ತರಾ ಹೇಳ್‌ತಿದ್ರು. ಆ ವಪ್ಪ ಜೈ ಸಾಯಿಬಾಬಾ, ವೆಂಕ್‌ಟೇಸ್ವರಾ ಅಂತಾ ಹೈಕಮಾಂಡ್‌ನಾಗೆ ಚೂ ಮಂತರ್‌ ಮಾಡಿ ಟಿಕೆಟ್‌ ತತ್ತಾನೇ ಅವ್ರೆ, ಗೆಲ್ತಾನೇ ಅವ್ರೆ. ಆದ್ರೂ ಈ ದಪ ಕೋಲಾರ್‌ನ್ಯಾಗೆ, ಚಿಕ್‌ಬಳ್ಳಾಪುರ್‌ದಾಗೆ ಕೈ ಕಷ್ಟ ಅಂತಾವ್ರೆ
ಚೇರ್ಮನ್ರು: ಮಂಡ್ಯ, ಹಾಸ್ನ ಕತೆ ಏನ್ಲಾ
ಅಮಾಸೆ: ಏನೂ ಇಲ್ಲಾ, ಪ್ರಜ್ವಲ್‌ ಅಣ್ಣೋರು, ನಿಖೀಲ್‌ ಅಣ್ಣೋರು ಗೆಲ್ತಾರೆ ಅಂತ ಬೆಟ್‌ ಕಟ್‌ತಾವ್ರೆ. ವಾಲೆ ಮಂಜಣ್ಣೋರು ಎಲ್ಲಾದ್ರೂ ಉಂಟೆ ನೋಡ್ಕಳಿ ಅಂತ ಸವಾಲ್‌ ಹಾಕ್ತಾವ್ರೆ, ಇತ್ಲಾಗೆ ಸುಮಲತಾ ಅಕ್ಕೋರು ಕೈ ಮುಗುª ಓಟ್‌ ಕೇಳ್ತಾವ್ರೆ, ಹೆಣ್‌ ಮಕ್ಳು ಫಿದಾ ಆಗವ್ರಂತೆ, ನೋಡ್ಬೇಕು ಏನಾಯ್ತದೆ ಅಂತ. 
ಚೇರ್ಮನ್ರು: ಶಿವ್‌ರಾಮೇಗೌಡ್ರು ಅದೇನೋ ಹೇಳಿದ್ರಂತೆ
ಅಮಾಸೆ: ಹೌದೂ ಸಾ, ದೇವೇಗೌಡ್ರನ ನಂಬ್‌ದೋರು ಯಾರೂ ಬದ್ಕಿಲ್ಲ ಅಂತ  ಎಡ್‌ವಟ್‌ ಮಾಡ್‌ಬಿಟ್ರಂತೆ. ಆದ್ರೆ, ಟಿಕೆಟ್‌ ಕೊಡ್ಲಿಲ್ಲ ಅಂತ ಸಿಟ್‌ಗೆ ಬೇಕಂತಾನೇ ಹೇಳವ್ರೆ ಅಂತ ಮಂಡ್ಯ ಹೈಕ್ಳು ವಾಟ್ಸಾಪ್‌ನ್ಯಾಗೆ ಆಡ್‌ಕೋತಾವ್ರೆ. ಶಿವ್‌ರಾಮೇಗೌಡ್ರು, ತಮ್ಮಣ್ಣೋರು ಅಂಬರೀಸ್‌ ಮನೇಗೋಗಿ ಕೈ ಮುಗುª ಹೆಲ್ಪ್ ಪೀಸ್‌ ಅಂತ ಹೇಳಿರೋ ಪಟ ಹಾಕಿ ಜಾಡ್ಸ್‌ತಾವ್ರೆ. ಇನ್ನೂ ಏನೇನ್‌ಆಯ್ತದೋ ಕಾಣೆ. ನನ್‌ ಹೆಂಡ್ರು ಮಟನ್‌ ತತ್ತಾ  ಪಲಾವ್‌ ಮಾಡೂಮಾ ಅಂತ ಹೇಳವ್ರೆ ಬತ್ತೀನಿ ಸಾ….

ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next